ಕೊರೊನಾದಿಂದ ಮಕ್ಕಳನ್ನು ರಕ್ಷಿಸಿ

Team Udayavani, Jun 27, 2021, 9:40 PM IST

27-19

ಚಳ್ಳಕೆರೆ: ವೈದ್ಯರು ಹಾಗೂ ಆರೋಗ್ಯ ಇಲಾಖೆ ಪರಿಶ್ರಮದಿಂದ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದು, ಮೂರನೇ ಹಂತ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳ ಆರೋಗ್ಯ ರಕ್ಷಣೆಗೆ ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ಇಲ್ಲಿನ ವೆಂಕಟೇಶ್ವರ ನಗರದ ಜಗಜೀವನರಾಂ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಮಕ್ಕಳ ತಜ್ಞರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ತಿಂಗಳಗಷ್ಟೇ “ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಯಶಸ್ವಿಯಾಗಿದೆ. ಈಗ “ಮಕ್ಕಳ ತಜ್ಞರ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಗ್ಧ ಮಕ್ಕಳನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡುವ ಉದ್ದೇಶ ಹೊಂದಲಾಗಿದೆ. ವಿಶೇಷವಾಗಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಮೂರನೇ ಹಂತದ ಕೋವಿಡ್‌ ಸಮಯದಲ್ಲಿ ಹೆಚ್ಚಿನ ಪ್ರಾಣಾಪಾಯವಾಗಬಹುದು.

ಇದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಕಾಳಜಿ ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷé ತೋರದೆ ಮಕ್ಕಳ ಯೋಗಕ್ಷೇಮಕ್ಕಾಗಿ ಹಗಲಿರುಳು ಶ್ರಮಿಸಬೇಕು ಎಂದು ಕರೆ ನೀಡಿದರು.

ಸಹಾಯಕ ಶಿಶು ಅಭಿವೃದ್ಧಿ ಅ ಧಿಕಾರಿ ನವೀನ್‌ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಾದ್ಯಂತ 0-6ರ ತನಕ 29 ಸಾವಿರ ಮಕ್ಕಳಿದ್ದಾರೆ. ಅದರಲ್ಲಿ ಅಪೌಷ್ಟಿಕತೆ ಹಿನ್ನೆಲೆಯುಳ್ಳ ಮಕ್ಕಳನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆರ್‌ಬಿಎಸ್‌ಕೆ ತಂಡದ ವೈದ್ಯರಾದ ರಮೇಶ್‌, ಮಂಜುನಾಥ, ಸಂದೀಪ್‌, ಗೀತಾ ಅವರು ಮಕ್ಕಳ ಆರೋಗ್ಯ ಪರೀಕ್ಷೆಯಲ್ಲಿ ತೊಡಗಿದ್ದಾರೆಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ, ಉಪಾಧ್ಯಕ್ಷೆ ಜೈತುಂಬಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ. ರಮೇಶ್‌ ಗೌಡ, ಸದಸ್ಯರಾದ ಟಿ. ಮಲ್ಲಿಕಾರ್ಜುನ್‌, ಆರೋಗ್ಯ ಇಲಾಖೆಯ ಎಸ್‌.ಬಿ. ತಿಪ್ಪೇಸ್ವಾಮಿ, ಕಾಂಗ್ರೆಸ್‌ ಮುಖಂಡರಾದ ಪ್ರಕಾಶ್‌, ಪ್ರಸನ್ನಕುಮಾರ್‌, ಮಹೇಶ್‌, ವೀರೇಶ್‌, ಲ್ಯಾಬ್‌ ಟೆಕ್ನಿಷಿಯನ್‌ ಎಚ್‌. ತಿಪ್ಪೇಸ್ವಾಮಿ ಮೊದಲಾದವರು ಭಾಗವಹಿಸಿದ್ದರು.

ಟಾಪ್ ನ್ಯೂಸ್

1-satya

Maharashtra; ಬಿಜೆಪಿಯನ್ನು ಅಳಿಸಿ ಹಾಕುತ್ತೇವೆ: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

1-aap

Sisodia; ಯಾವ ರಾವಣನಿಂದಲೂ ರಾಮ-ಲಕ್ಷ್ಮಣರನ್ನು ಬೇರ್ಪಡಿಸಲು ಸಾಧ್ಯವಿಲ್ಲ

1-asdsad

Tirupati laddu ಅಪವಿತ್ರ: ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಜಗನ್ ರೆಡ್ಡಿ

Thirupathi-Laddu

Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್‌ ಸಿಸಿ ಕೊಠಡಿಯೂ ಶಿಥಿಲ

ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್‌ ಸಿಸಿ ಕೊಠಡಿಯೂ ಶಿಥಿಲ

Renukaswamy

Renukaswamy Case: ಮಗ ಬೇಡಿಕೊಂಡ ಫೋಟೋ ನೋಡಲಾರೆ: ತಾಯಿ ರತ್ನಪ್ರಭಾ ಕಣ್ಣೀರು

Sirigere: ಶವ ಸಾಗಿಸುತ್ತಿದ್ದ ಅಂಬುಲೆನ್ಸ್ ಲಾರಿಗೆ ಡಿಕ್ಕಿ.. ಓರ್ವ ಮೃತ್ಯು, ಇಬ್ಬರಿಗೆ ಗಾಯ

Sirigere: ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಲಾರಿಗೆ ಡಿಕ್ಕಿ.. ಓರ್ವ ಮೃತ್ಯು, ಇಬ್ಬರಿಗೆ ಗಾಯ

1-ddaaa

Darshan ಫೋಟೋ ವೈರಲ್;ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ: ಸಿಬಿಐ ತನಿಖೆಗೆ ಒತ್ತಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-satya

Maharashtra; ಬಿಜೆಪಿಯನ್ನು ಅಳಿಸಿ ಹಾಕುತ್ತೇವೆ: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್

DhruvaThare Movie Review: ಕಹಿ ಅನುಭವದಲ್ಲಿ ಸಿಹಿ ಹುಡುಕಿ ಹೊರಟವರು..

DhruvaThare Movie Review: ಕಹಿ ಅನುಭವದಲ್ಲಿ ಸಿಹಿ ಹುಡುಕಿ ಹೊರಟವರು..

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

1-aap

Sisodia; ಯಾವ ರಾವಣನಿಂದಲೂ ರಾಮ-ಲಕ್ಷ್ಮಣರನ್ನು ಬೇರ್ಪಡಿಸಲು ಸಾಧ್ಯವಿಲ್ಲ

12

Manipal: ಪಾರ್ಕಿಂಗ್‌ ತಾಣವಾಗುತ್ತಿರುವ ಬಸ್‌ ನಿಲ್ದಾಣಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.