![Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಚಾಲಕ ಸಾವು](https://www.udayavani.com/wp-content/uploads/2024/11/bus-a-1-415x249.jpg)
ಬಯೋ ಬಬಲ್ ನಿಯಮ ಮುರಿದು ಇಂಗ್ಲೆಂಡ್ ನ ಮಾರ್ಕೆಟ್ ನಲ್ಲಿ ಸುತ್ತಾಡಿದ ಇಬ್ಬರು ಲಂಕಾ ಆಟಗಾರರು
Team Udayavani, Jun 28, 2021, 5:17 PM IST
![ಬಯೋ ಬಬಲ್ ನಿಯಮ ಮುರಿದು ಇಂಗ್ಲೆಂಡ್ ನ ಮಾರ್ಕೆಟ್ ನಲ್ಲಿ ಸುತ್ತಾಡಿದ ಇಬ್ಬರು ಲಂಕಾ ಆಟಗಾರರು](https://www.udayavani.com/wp-content/uploads/2021/06/lanka-1-620x342.jpg)
ಲಂಡನ್: ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿ ಟೀಕೆಗೆ ಒಳಗಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡ ಇದೀಗ ಬಯೋ ಬಬಲ್ ನಿಯಮ ಉಲ್ಲಂಘನೆ ಮಾಡಿ ಆಕ್ರೊಶಕ್ಕೆ ಗುರಿಯಾಗಿದೆ.
ಲಂಕಾ ತಂಡದ ಉಪನಾಯಕ ಕುಸಾಲ್ ಮೆಂಡಿಸ್ ಮತ್ತು ವಿಕೆಟ್ ಕೀಪರ್ ನಿರೋಶನ್ ಡಿಕವೆಲ್ಲಾ ಅವರು ಇಂಗ್ಲೆಂಡ್ ನ ಮಾರುಕಟ್ಟೆ ಪ್ರದೇಶದಲ್ಲಿ ಸುತ್ತಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.
ಲಂಕಾ ತಂಡ ಮೊದಲ ಏಕದಿನ ಪಂದ್ಯಕ್ಕಾಗಿ ಡರ್ಹಾಮ್ ನಲ್ಲಿದೆ. ಲಂಕಾ ಆಟಗಾರರಿಗೆ ಕಾರ್ಡಿಫ್‌ನಲ್ಲಿ ಹೊರಗೆ ಹೋಗಲು ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಡರ್ಹಾಮ್‌ನಲ್ಲಿ ಕೋವಿಡ್ -19 ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರಿಗೆ ಬಯೋ ಬಬಲ್ ಬಿಟ್ಟು ತೆರಳುವಂತಿಲ್ಲ.
ಕುಸಾಲ್ ಮೆಂಡಿಸ್ ಮತ್ತು ನಿರೋಶನ್ ಡಿಕವೆಲ್ಲಾ ಜೊತೆ ಮತ್ತೋರ್ವ ಆಟಗಾರನು ಇರುವ ಸಾಧ್ಯತೆಯಿದೆ ಎನ್ನಲಾಗಿದೆ. ಒಂದು ವೇಳೆ ಆಟಗಾರರು ನಿಯಮ ಉಲ್ಲಂಘಿಸಿರುವುದು ದೃಢವಾದರೆ ಅವರುಗಳು ಇನ್ನು ಎರಡು ವಾರಗಳವರೆಗೆ ಐಸೋಲೇಶನ್ ನಲ್ಲಿರ ಬೇಕಾಗುತ್ತದೆ. ಅಲ್ಲದೆ ಅವರಿಗೆ ಯುಕೆ ಸರ್ಕಾರವು ದಂಡವನ್ನೂ ವಿಧಿಸುತ್ತದೆ.
ಇದನ್ನೂ ಓದಿ:ಕ್ರಿಕೆಟ್ ಗೆ ಮಾತ್ರ ಕಮೆಂಟರಿ ಮಾಡುತ್ತೇನೆ,ಟಿ20 ಮಾದರಿ ಕ್ರಿಕೆಟ್ ಅಲ್ಲವೇ ಅಲ್ಲ: ಹೋಲ್ಡಿಂಗ್
ತಂಡದ ಆಡಳಿತ ಮಂಡಳಿ ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಶ್ರೀಲಂಕಾ ವ್ಯವಸ್ಥಾಪಕ ಮನುಜಾ ಕರಿಯಪೆರುಮಾ ತಿಳಿಸಿದ್ದಾರೆ. ಆದರೆ ನಿಜವಾಗಿಯೂ ನಿಯಮ ಉಲ್ಲಂಘನೆ ನಡೆದಿದೆಯೇ ಎಂದು ಖಚಿತಪಡಿಸಲು ಇದುವರೆಗೂ ಸಾಧ್ಯವಾಗಲಿಲ್ಲ. ಮಂಗಳವಾರ ಶ್ರೀಲಂಕಾ- ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಟಾಪ್ ನ್ಯೂಸ್
![Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಚಾಲಕ ಸಾವು](https://www.udayavani.com/wp-content/uploads/2024/11/bus-a-1-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![IPL: Players from these countries are fully available for the next three seasons of IPL](https://www.udayavani.com/wp-content/uploads/2024/11/ipl-fo-150x84.jpg)
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
![BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್](https://www.udayavani.com/wp-content/uploads/2024/11/bumra-1-150x84.jpg)
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
![India’s first FIP Padel tournament begins](https://www.udayavani.com/wp-content/uploads/2024/11/padel-150x84.jpg)
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
![BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ](https://www.udayavani.com/wp-content/uploads/2024/11/rahul-13-150x84.jpg)
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
![IPL 2025-27: BCCI announces dates for next three IPL seasons](https://www.udayavani.com/wp-content/uploads/2024/11/IPL-4-150x84.jpg)
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
![1-wqweeqw](https://www.udayavani.com/wp-content/uploads/2024/11/1-wqweeqw-150x93.jpg)
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
![Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ](https://www.udayavani.com/wp-content/uploads/2024/11/Kottigehara-150x89.jpg)
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
![Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಚಾಲಕ ಸಾವು](https://www.udayavani.com/wp-content/uploads/2024/11/bus-a-1-150x90.jpg)
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
![madhu-bangara](https://www.udayavani.com/wp-content/uploads/2024/11/madhu-bangara-150x84.jpg)
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
![vijayapura-Police](https://www.udayavani.com/wp-content/uploads/2024/11/vijayapura-Police-150x90.jpg)
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.