ಉಲ್ಲಾಸ ಭರಿತ ಜೀವನಕ್ಕೆ ಯೋಗ
ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಉಲ್ಲಾಸ ನೀಡುವ ಯೋಗಾಸನವು ನಮ್ಮನ್ನು ಸದೃಢಗೊಳಿಸುತ್ತದೆ
Team Udayavani, Jun 28, 2021, 8:34 AM IST
ಆರೋಗ್ಯವಾಗಿರಲು ಕೇವಲ ಧ್ಯಾನ, ಪ್ರಾಣಾಯಾಮ ಮಾಡಿದರೆ ಸಾಕಾಗೋದಿಲ್ಲ. ಇದರೊಂದಿಗೆ ಜೀವನ ಕ್ರಮವನ್ನು ಶುದ್ಧವಾಗಿರಿಸಿ ಕೊಳ್ಳುವುದು ಬಹುಮುಖ್ಯ. ಈಗೀನ ಜೀವನ ಶೈಲಿ ನಮ್ಮ ದೇಹವನ್ನು ಮಾತ್ರವಲ್ಲ ಮನಸ್ಸಿನ ಆರೋಗ್ಯವನ್ನೂ ಕೆಡಿಸುತ್ತದೆ. ಒಂದು ಕಡೆ ವರ್ಕ್‌ಫÅಮ್ ಹೋಮ್, ಇನ್ನೊಂದು ಕಡೆ ಮನೆಯಲ್ಲೇ ಸಿಗುವ ಬಿಸಿಬಿಸಿ ತಿನಿಸುಗಳೊಂದಿಗೆ ಯಾವುದೇ ಆಯಾಸವಿಲ್ಲದ ಜೀವನಕ್ರಮ ದೇಹ ಮತ್ತು ಮನಸ್ಸಿಗೆ ಜಡತ್ವ ತಂದುಕೊಟ್ಟಿದೆ.
ಇದರಿಂದ ದಿನೇದಿನೇ ದೇಹದ ತೂಕ ಹೆಚ್ಚಾಗುತ್ತಿದೆ. ದೇಹದ ತೂಕ ಹೆಚ್ಚಾದರೆ ಮನಸ್ಸು ಮಾತ್ರವಲ್ಲ ದೇಹದ ಮೇಲೂ ಗಂಭೀರ ಪರಿಣಾಮ ಬೀರುವುದು. ಹೀಗಾಗಿ ನಿತ್ಯ ಜೀವನದಲ್ಲಿ ಯೋಗಾಭ್ಯಾಸ ಇಂದಿನ ಅಗತ್ಯತೆಗಳಲ್ಲಿ ಒಂದಾಗಿದೆ.
ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಉಲ್ಲಾಸ ನೀಡುವ ಯೋಗಾಸನವು ನಮ್ಮನ್ನು ಸದೃಢಗೊಳಿಸುತ್ತದೆ. ಯೋಗವು ದೇಹದ ಅಧಿಕ ತೂಕವನ್ನು ಇಳಿಸಿ ಆರೋಗ್ಯವನ್ನು ಸುವ್ಯವಸ್ಥಿತವಾಗಿ ಇರಿಸುವಲ್ಲಿ ಪರಿಣಾಮಕಾರಿಯಾಗಿದೆ.
ನಿರಂತರ ಯೋಗಾಭ್ಯಾಸದಿಂದ ಹೃದಯ ಬಡಿತ ಸಾಮಾನ್ಯ ಸ್ಥಿತಿ ತಲುಪಿ ರಕ್ತ ಪರಿಚಲನೆ ಉತ್ತಮಗೊಳ್ಳುವುದು. ಹೃದಯ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತದೆ. ದೇಹದ ತಪಾಮಾನ ಕ್ರಿಯಾಶೀಲವಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಜೀರ್ಣಾಂಗ ವ್ಯೂಹದ ಕಾರ್ಯವನ್ನು ಸಮರ್ಪಕಗೊಳಿಸುತ್ತದೆ. ಈ ಮೂಲಕ ತಿಂದ ಆಹಾರ ಸರಿಯಾಗಿ ಜೀರ್ಣವಾಗಿ ಆರೋಗ್ಯಕ್ಕೆ ಬೇಕಾದ ಸಂಪೂರ್ಣ ಪೋಷಣೆ ದೊರೆಯಲು ಸಾಧ್ಯವಾಗುವುದು.
ಯೋಗವು ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಅದರಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಕರುಳನ್ನು ಸ್ವಚ್ಛಗೊಳಿಸುತ್ತದೆ. ಈ ಮೂಲಕ ದೇಹಕ್ಕೆ ರೋಗಗಳ ವಿರುದ್ಧ ಹೋರಾಡಲು ಬೇಕಾದ ಚೈತನ್ಯ ಸಿಗುವುದು.
ಮೂಳೆ, ಸ್ನಾಯುಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ದೇಹಕ್ಕೆ ಶಕ್ತಿ ದೊರೆತು ಬಳಲಿಕೆ, ಸುಸ್ತು ದೂರವಾಗುವುದು.
ಥೈರಾಯ್ಡ ಸಮಸ್ಯೆ ನಿವಾರಣೆ ಯಾಗುವುದು.
ದೇಹದ ಅಧಿಕ ಕೊಬ್ಬು ಕಡಿಮೆ ಯಾಗಿ ದೇಹ ಮತ್ತು ಮನಸ್ಸಿನ ಆರೋಗ್ಯ ಉತ್ತಮಗೊಳ್ಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.