ಕಲಿಕೆಗೆ ಬಹು ಮಾಧ್ಯಮ ಬಳಕೆ


Team Udayavani, Jun 28, 2021, 9:58 PM IST

28-12

„ಎಚ್‌.ಕೆ. ನಟರಾಜ

ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚಾಗಿ ಶಾಲೆಗಳಲ್ಲಿ ಭೌತಿಕ ತರಗತಿ ನಡೆಸಲು ಸಾಧ್ಯವಾಗದೇ ಇದ್ದರೆ ಶಿಕ್ಷಕರು ತಂತ್ರಜ್ಞಾನದೊಂದಿಗೆ ಬಹುಮಾಧ್ಯಮಗಳನ್ನು ಬಳಸಿಕೊಂಡು ಮಕ್ಕಳ ನಿರಂತರ ಕಲಿಕೆಗೆ ಶ್ರಮಿಸಲು ಪೂರಕವಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವಿವಿಧ ಚಟುವಟಿಕೆ ರೂಪಿಸಿಕೊಂಡಿದೆ.

ಪ್ರಸ್ತುತ ಕೋವಿಡ್‌-19 ಸಾಂಕ್ರಾಮಿಕ ಕಾರಣದಿಂದ ಭೌತಿಕ ತರಗತಿಗಳನ್ನು ಆರಂಭಿಸಲಾಗದೇ ಇದ್ದರೆ ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿಸಲು ಸಾಮಾಜಿಕ ಜಾಲತಾಣ, ಯೂಟ್ಯೂಬ್‌, ಚಂದನವಾಹಿನಿ, ವಾಟ್ಸ್‌ಆ್ಯಪ್‌ ಸೇರಿದಂತೆ ಇನ್ನಿತರ ಬಹುಮಾಧ್ಯಮ ಬಳಸಿಕೊಂಡು ಶಿಕ್ಷಕರು ಮಕ್ಕಳೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಶಿಕ್ಷಣ ಇಲಾಖೆ ಶಿಕ್ಷಕರಿಗಾಗಿ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ.

ಈ ಮಾರ್ಗಸೂಚಿಯಂತೆ ಪ್ರತಿಯೊಂದು ಶಾಲೆಗಳಲ್ಲಿ ವಿಷಯವಾರು ವೇಳಾಪಟ್ಟಿಯನ್ನು ನಿಗದಿಪಡಿಸಿಕೊಂಡು ಶಿಕ್ಷಕರು ತಮಗೆ ಹಂಚಿಕೆ ಮಾಡಲಾದ ವೇಳಾಪಟ್ಟಿಯಂತೆ ಗೂಗಲ್‌ ಮೀಟ್‌ ಆನ್‌ ಲೈನ್‌ ತರಗತಿಗಳಲ್ಲಿ ವಿಷಯವಾರು ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆ ಆಧಾರಿತವಾಗಿ ಪ್ರಶ್ನೋತ್ತರ, ಚರ್ಚೆ, ಸಂವಾದ ನಡೆಸುತ್ತಾರೆ. ಈಗಾಗಲೇ ಚಂದನವಾಹಿನಿಯಲ್ಲಿ ಪ್ರಸಾರವಾಗಿರುವಂತಹ ವೀಡಿಯೋ ಪಾಠಗಳನ್ನು ಮತ್ತು ಪಠ್ಯ ಸಂಬಂಧಿ ವಿಡಿಯೋಗಳನ್ನು ರಚಿಸಿ, ಸಂಗ್ರಹಿಸಿ ವಿದ್ಯಾರ್ಥಿಗಳ ವಾಟ್ಯಾ$Õಪ್‌ ಗ್ರೂಪ್‌ಗ್ಳಲ್ಲಿ ಶೇರ್‌ ಮಾಡುವುದರ ಮೂಲಕ ಆಫ್‌ಲೆ„ನ್‌ ಕಲಿಕೆಗೆ ನೆರವಾಗಲು ಯೋಚಿಸಲಾಗಿದೆ.

ದೂರದರ್ಶನ ಚಂದನವಾಹಿನಿಯಲ್ಲಿ ದಿನಾಂಕವಾರು ಪ್ರಸಾರಗೊಂಡಿರುವ ವಿದ್ಯಾಗಮ ಹಾಗೂ ಸಂವೇದ ಇ-ಪಾಠಗಳ ವೇಳಾಪಟ್ಟಿಯನ್ನು ಮಕ್ಕಳಿಗೆ ನೀಡಿ, ಆಯಾ ದಿನಾಂಕ ಮತ್ತು ವಿಷಯಗಳನ್ನು ಆಧರಿಸಿ ಪ್ರಸಾರವಾದ ಪಾಠಗಳು ಯೂಟ್ಯೂಬ್‌ ನಲ್ಲಿ ಲಭ್ಯವಿದ್ದು ಅಗತ್ಯಾನುಸಾರ ವೀಕ್ಷಿಸಿ ಪ್ರಯೋಜನ ಪಡೆಯಲು ಸಹ ಮಾರ್ಗದರ್ಶನ ಮಾಡಬೇಕು. ವರ್ಚುವಲ್‌ ಸಭೆ: ಕರ್ನಾಟಕ ಪ್ರೌಢಶಿಕ್ಷಣ  ಮಂಡಳಿಯವರು ಬದಲಾದ ಪರೀûಾ ಕ್ರಮಕ್ಕೆ ಅನುಗುಣವಾಗಿ ಬಿಡುಗಡೆಗೊಳಿಸುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ವರ್ಚುಯಲ್‌ ಸಭೆಗಳ ಮೂಲಕ ಮಕ್ಕಳು ನಿಯಮಿತವಾಗಿ ಅಭ್ಯಾಸ ಮಾಡುವಂತೆ ಮೇಲ್ವಿಚಾರಣೆ ಮಾಡಬೇಕು. ವೇಳಾಪಟ್ಟಿಯಂತೆ ಕಿರುಪರೀಕ್ಷೆಗಳನ್ನು ನಡೆಸಬೇಕು. ವಾಟ್‌ ಆ್ಯಪ್‌ ಗ್ರೂಪ್‌ಗ್ಳಲ್ಲಿ ಶೇರ್‌ ಮಾಡುವುದರ ಮೂಲಕ ಉತ್ತರ ಬರೆಯಲು ತಿಳಿಸಬೇಕು. ಮಕ್ಕಳು ನಿಯಮಿತವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಆಗಾಗ್ಗೆ ´ ಮಾಡಿ ಒಬ್ಬೊಬ್ಬರಿಂದಲೂ ಹಿಮ್ಮಾಹಿತಿ ಪಡೆದು ಅವರ ಪ್ರಯತ್ನವನ್ನು ಖಚಿತ ಪಡಿಸಿಕೊಳ್ಳಬೇಕು. ಏನಾದರೂ ಸಣ್ಣಪುಟ್ಟ ನ್ಯೂನತೆಗಳು ಕಂಡುಬಂದಲ್ಲಿ ಸೂಕ್ತ ಮಾರ್ಗದರ್ಶನ ಮಾಡಿ ತಪ್ಪದೇ ಬರೆದು ಕಲಿಯಲು ತಿಳಿಸಬೇಕು ಎಂದು ಯೋಜನೆ ಹಾಕಿಕೊಳ್ಳಲಾಗಿದೆ.

ಕರೆ ಮೂಲಕ ಸಂಪರ್ಕ: ಶಾಲೆಗಳಲ್ಲಿ ಶಿಕ್ಷಕರವಾರು ಹಂಚಿಕೆಮಾಡಲಾದ ದತ್ತು ಮಕ್ಕಳಿಗೆ ದೂರವಾಣಿಯ ಮೂಲಕ ಪ್ರತಿದಿನ ಶಿಕ್ಷಕರು ಕರೆ ಮಾಡುವ ಮೂಲಕ ಸಂಪರ್ಕ ಸಾಧಿಸಬೇಕು. ಶಾಲೆಗಳಲ್ಲಿರುವ ದೈಹಿಕ ಶಿಕ್ಷಣ ಹಾಗೂ ವೃತ್ತಿ ಶಿಕ್ಷಕರ ಸೇವೆಯನ್ನು ಬಳಸಿಕೊಂಡು ಅವರೂ ಸಹ ಪ್ರತಿ ಎರಡುಗಳಿಗೆ ಒಂದು ಸಲ ರೊಟೇಶನ್‌ ಆಧಾರದ ಮೇಲೆ ಬೆಳಿಗ್ಗೆ ಅಥವಾ ಸಾಯಂಕಾಲ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ದೂರವಾಣಿ ಕರೆ ಮಾಡುವ ಮೂಲಕ ನಿರಂತರ ಸಂಪರ್ಕ ಸಾಧಿಸಬೇಕು. ಇದು ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಜಾಗ್ರತೆಯನ್ನು ಮೂಡಿಸಲು ಸಹಕಾರಿಯಾಗುತ್ತದೆ . ದೂರವಾಣಿಯ ಮೂಲಕ ಆಗಿಂದಾಗ್ಗೆ ಪಾಲಕರನ್ನು ಸಂಪರ್ಕಿಸಿ ಮಕ್ಕಳ ಕಲಿಕೆಯ ಬಗ್ಗೆ ಹಿಮ್ಮಾಹಿತಿ ಪಡೆದು ಅಗತ್ಯವಿದ್ದಲ್ಲಿ ಸಲಹೆಗಳನ್ನು ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ.

ಎಲ್ಲ ಮುಖ್ಯ ಶಿಕ್ಷಕರು ವಿಷಯವಾರು ಶಿಕ್ಷಕರೊಂದಿಗೆ ನಿಯಮಿತವಾಗಿ ವರ್ಚುಯಲ್‌ ಸಭೆಗಳನ್ನು ನಡೆಸಿ ಪರಸ್ಪರ ಸಮಾಲೋಚನೆ ನಡೆಸಬೇಕು. ಅವರಿಂದ ಹಿಮ್ಮಾಹಿತಿ ಪಡೆದು ಮಕ್ಕಳ ಕಲಿಕೆಗೆ ಪೂರಕವಾದ ನಾವೀನ್ಯತೆಯಿಂದ ಕೂಡಿದ ಉಪಕ್ರಮಗಳನ್ನು ನಿರ್ವಹಿಸಲು ಸೂಕ್ತ ಸಲಹೆ ನೀಡಬೇಕು. ಈ ವಿಷಯವಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ಆರೂ ವಿಷಯಗಳ ಶಿಕ್ಷಕರಿಗೆ ಮಾರ್ಗದರ್ಶನ ಮಾಡಲಾಗಿದೆ.

ವಾಟ್ಸ್‌ಆ್ಯಪ್‌ನಲ್ಲೇ ಸ್ಪರ್ಧೆ: ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರ ಲೇಖನ ಐದು ಅಂಕಗಳಿಗೆ ಮತು ಪ್ರಬಂಧ ನಾಲ್ಕು ಅಂಕಗಳಿಗೆ ನಿಗದಿಯಾಗಿದ್ದು ಸ್ಪರ್ಧೆಗಳನ್ನು ವಾಟ್ಸ್‌ ಆ್ಯಪ್‌ ಗ್ರೂಪ್‌ ಮೂಲಕ ಏರ್ಪಡಿಸಲು ಯೋಜಿಸಬಹುದಾಗಿದೆ.  ಪೂರ್ವಸಿದ್ಧತೆಗಾಗಿ ಗೃಹಾಧಾರಿತ ಆನ್‌ಲೈನ್‌ ಕ್ವಿಜ್‌ ಪರೀಕ್ಷೆಗಳನ್ನು ನಡೆಸಬೇಕು. ಇದರಿಂದ ಮಕ್ಕಳಲ್ಲಿ ಕಲಿಕಾ ಏಕತಾನತೆಯನ್ನು ಹೋಗಲಾಡಿಸಿ ಕಲಿಕೆಯಲ್ಲಿ ಆಸಕ್ತಿ ಮೂಡಿಸಬಹುದೆಂದು ನಿರೀಕ್ಷಿಸಲಾಗಿದೆ. ಅಲ್ಲದೆ ತಂತ್ರಜ್ಞಾನ ಬಳಕೆಯಲ್ಲಿ ಪರಿಣಿತಿ ಹೊಂದಿರುವ ಹಾಗೂ ಉತ್ಸಾಹಿ ಶಿಕ್ಷಕರು ತಂಡಗಳಲ್ಲಿ ಸಂಪನ್ಮೂಲವನ್ನು ಹಂಚಿಕೊಳ್ಳುವ ಮೂಲಕ ಶಿಕ್ಷಕರು ತಮ್ಮ ಶಾಲಾ ಮಕ್ಕಳೊಂದಿಗೆ ನಿರಂತರ ಸಂಪರ್ಕ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನಗಳು ನಿರಂತರವಾಗಿ ನಡೆಯುವಂತೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

ಟಾಪ್ ನ್ಯೂಸ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

2-davangere

Davangere: ಮಹಿಳೆಯ ಮೇಲೆ ಕರಡಿ ದಾಳಿ

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

1-ssss

J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.