ಕುಸಿದ ಮನೆಯಲ್ಲಿ ಪರೀಕ್ಷೆಗೆ ಸಿದ್ಧತೆ ಹೇಗೆ ಮಾಡಲಿ? ಎಸೆಸೆಲ್ಸಿ ವಿದ್ಯಾರ್ಥಿನಿಯ ಅಳಲು
Team Udayavani, Jun 29, 2021, 7:35 AM IST
ಪುತ್ತೂರು : ಎಸೆಸೆಲ್ಸಿ ಪರೀಕ್ಷೆಗೆ ದಿನ ನಿಗದಿಯಾದ ಬೆನ್ನಲ್ಲೇ ಮನೆಗೆ ಒದಗಿದ ದುಃಸ್ಥಿತಿಯಿಂದ ಕಂಗಾಲಾಗಿರುವ ಪುತ್ತೂರಿನ
ವಿದ್ಯಾರ್ಥಿನಿಯೊಬ್ಬರು ಈ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ಹೇಗೆ ತಯಾರಾಗಲಿ ಎಂದು ಅಳಲು ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಸೆಸೆಲ್ಸಿ ಪರೀಕ್ಷಾ ದಿನಾಂಕವನ್ನು ಶಿಕ್ಷಣ ಸಚಿವರು ಘೋಷಿಸಿದ ಬೆನ್ನಲ್ಲೇ ವಿದ್ಯಾರ್ಥಿನಿ ವಾಸ್ತವ್ಯವಿರುವ ಮನೆ ಕುಸಿದು ಬಿದ್ದಿದ್ದು ಪರೀಕ್ಷೆಗೆ ಸಿದ್ಧತೆ ಮಾಡುವುದಕ್ಕಿಂತ ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪಂಚಾಯತ್ಗೆ ಸ್ಥಳಾಂತರ
ಬನ್ನೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕಮುಟ್ನೂರು ಗ್ರಾಮದ ಗೋಪಾಲ ಶೆಟ್ಟಿ ಅವರ ಪುತ್ರಿ, ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ದೀಕ್ಷಾ ಶೆಟ್ಟಿ ಈ ರೀತಿ ಸಂಕಷ್ಟಕ್ಕೆ ಸಿಲುಕಿರುವ ಬಾಲಕಿ. ಮಳೆಯ ಪರಿಣಾಮ ಮನೆ ಶಿಥಿಲಗೊಂಡಿದ್ದು ಒಂದು ಭಾಗ ಜೂ. 28ರಂದು ಬಿದ್ದಿದೆ. ಜತೆಗೆ ಛಾವಣಿಯೂ ಕುಸಿಯುವ ಭೀತಿ ಇದೆ. ತಾತ್ಕಾಲಿಕ ದುರಸ್ತಿ ಮಾಡಲೂ ಮನೆಯವರಿಗೆ ಶಕ್ತಿ ಇಲ್ಲ.
ಟಾರ್ಪಾಲು ಹೊದೆಸಲು ಕೂಡ ಸಾಧ್ಯವಾಗಿಲ್ಲ. ಹೀಗಾಗಿ ಮನೆಯವರನ್ನು ತಾತ್ಕಾಲಿಕವಾಗಿ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ತಾಯಿಯ ದುಡಿಮೆಯೇ ಆಸರೆ
ದೀಕ್ಷಾಳ ತಂದೆ ಗೋಪಾಲ ಶೆಟ್ಟಿ ಕಾಲು ನೋವಿನಿಂದ ಬಳಲುತ್ತಿದ್ದು, ದುಡಿಮೆ ಸಾಧ್ಯವಾಗುತ್ತಿಲ್ಲ. ಪತ್ನಿ ಬೀಡಿ ಕಟ್ಟಿ, ಕೂಲಿ ಕೆಲಸ ಮಾಡಿ ಪತಿ ಮತ್ತು ಮಕ್ಕಳಿಬ್ಬರ ಪಾಲನೆ ಮಾಡುತ್ತಿದ್ದಾರೆ. ದೀಕ್ಷಾಳ ಸಹೋದರ ವಿದ್ಯಾರ್ಥಿ. ಇಂತಹ ಪರಿಸ್ಥಿತಿಯಲ್ಲಿ ಮನೆ ಕುಸಿದಿರುವುದು ಬಾಲಕಿಯ ಭವಿಷ್ಯದ ಮೇಲೆಯೇ ಪರಿಣಾಮ ಬೀರುವಂತಾಗಿದೆ.
ಸೋಮವಾರ ಮಳೆಯಿಂದ ಮನೆಯ ಒಂದು ಭಾಗ ಕುಸಿದಿದೆ. ಛಾವಣಿಯೂ ಬೀಳುವ ಹಂತದಲ್ಲಿದೆ. ಆರ್ಥಿಕವಾಗಿ ಅನಾನುಕೂಲತೆ ಇದೆ. ಎಸೆಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು ಮನೆಯೇ ಇಲ್ಲದೆ ನಾನು ಓದುವುದಾದರೂ ಹೇಗೆ?
– ದೀಕ್ಷಾ ಶೆಟ್ಟಿ, ಎಸೆಸೆಲ್ಸಿ ವಿದ್ಯಾರ್ಥಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.