20 ಗ್ರಾಮಗಳ ಅಭಿವೃದ್ಧಿಗೆ ಕ್ರಿಯಾಯೋಜನೆ
Team Udayavani, Jun 29, 2021, 11:55 AM IST
ರಾಮನಗರ: ಜಿಲ್ಲೆಯ ನಾಲ್ಕೂ ತಾಲೂಕುಗಳ 35 ಗ್ರಾಮಗಳು ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿದೆ. ಈ ಪೈಕಿ ಕೇಂದ್ರ ಸರ್ಕಾರದಿಂದ ಅನುಮೋದನೆಯಾಗಿರುವ 20 ಗ್ರಾಮಗಳ ಅಭಿವೃದ್ಧಗೆ ಇನ್ನು 10 ದಿನಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸಂಸದ ಡಿ.ಕೆ.ಸುರೇಶ್ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯ್ತಿ ಭವನದಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಆದರ್ಶ ಗ್ರಾಮ ಯೋಜನೆ ಮತ್ತು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗಳುಪ್ರತ್ಯೇಕಯೋಜನೆಗಳಾಗಿವೆ.ಪ್ರಧಾನಮಂತ್ರಿಆದರ್ಶ ಗ್ರಾಮ ಯೋಜನೆಯಡಿ ಶೇ.50ಕ್ಕಿಂತ ಹೆಚ್ಚಿಗೆ ಪರಿಶಿಷ್ಟ ಜಾತಿ ಸಮುದಾಯ ವಾಸಿಸುವ ಗ್ರಾಮಗಳನ್ನುಆಯ್ಕೆ ಮಾಡಬೇಕಾಗಿದೆ. ಗ್ರಾಮದ ಅಭಿವೃದ್ಧಿಗೆ ತಲಾ 41 ಲಕ್ಷ ರೂ. ಅನುದಾನ ನಿಗದಿಯಾಗಿದೆ. ಇಲ್ಲಿಯವರೆಗೆಏನೇನುಕ್ರಮವಹಿಸಿದ್ದೀರಿ ಎಂದು ಸಂಸದರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು,2018-19ನೇ ಸಾಲಿನಲ್ಲಿ 10 ಗ್ರಾಮಗಳು, 2019-20ನೇ ಸಾಲಿನಲ್ಲಿ ಮೊದಲ ಹಂತದಲ್ಲಿ 10 ಮತ್ತು ಎರಡನೇ ಹಂತದಲ್ಲಿ 15 ಗ್ರಾಮಗಳು ಆಯ್ಕೆಯಾಗಿವೆ. 2018-19ನೇ ಸಾಲಿನಲ್ಲಿ ರಾಮನಗರದಲ್ಲಿ 1, ಚನ್ನಪಟ್ಟಣದಲ್ಲಿ 2, ಮಾಗಡಿಯಲ್ಲಿ 1 ಮತ್ತು ಕನಕಪುರ ತಾಲೂಕಿನಲ್ಲಿ 6 ಗ್ರಾಮಗಳು ಆಯ್ಕೆಯಾಗಿವೆ.2019-20ನೇ ಸಾಲಿನ ಮೊದಲ ಹಂತದಲ್ಲಿ ರಾಮನಗರ ತಾಲೂಕಿನ2,ಚನ್ನಪಟ್ಟಣ ತಾಲೂಕಿನಲ್ಲಿ4,ಮಾಗಡಿ ತಲೂಕಿನಲ್ಲಿ 1 ಮತ್ತು ಕನಕಪುರ ತಾಲೂಕಿನ 3 ಒಟ್ಟು 10 ಗ್ರಾಮಗಳು ಆಯ್ಕೆಯಾಗಿವೆ. 2019-20ನೇ ಸಾಲಿನ ಎರಡನೇ ಹಂತದಲ್ಲಿ ರಾಮನಗರ ತಾಲೂಕಿನಲ್ಲಿ 1, ಚನ್ನಪಟ್ಟಣದಲ್ಲಿ 4, ಮಾಗಡಿಯಲ್ಲಿ 6 ಮತ್ತು ಕನಕಪುರದಲ್ಲಿ4 ಗ್ರಾಮಗಳು ಆಯ್ಕೆಯಾಗಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
2ನೇ ಹಂತದ ಪಟ್ಟಿಗೆ ಅನುಮೋದನೆ ಸಿಕ್ಕಿಲ್ಲ:
2018-19 ಮತ್ತು 2019-20ನೇ (ಮೊದಲ ಹಂತ) ಸಾಲಿನ 20 ಗ್ರಾಮಗಳ ಪೈಕಿ 2 ಗ್ರಾಮಗಳ ನಗರ ಪ್ರದೇಶಕ್ಕೆ ಸೇರ್ಪಡೆಗೊಂಡಿರುವುದರಿಂದ ಈ ಗ್ರಾಮಗಳನ್ನು ಕೈಬಿಡಲಾಗಿದೆ. 2019-20ನೇ ಸಾಲಿನ 2ನೇ ಹಂತದಲ್ಲಿ ಆಯ್ಕೆಯಾಗಿರುವ 15 ಗ್ರಾಮಗಳ ಪಟ್ಟಿಗೆಕೇಂದ್ರ ಸರ್ಕಾರ ಇನ್ನು ಅನುಮೋದನೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
820 ಲಕ್ಷ ರೂ. ಅನುದಾನ ಮಂಜೂರು: ಈಗಾಗಲೇ 2018-19ನೇ ಸಾಲು ಮತ್ತು 2019-20ನೇ ಸಾಲಿನಲ್ಲಿಗುರುತಿಸಲಾಗಿರುವ 20 ಗ್ರಾಮಗಳಿಗೆ ಒಟ್ಟು 820 ಲಕ್ಷ ರೂ. ಅನುದಾನ ಮಂಜೂರಾಗಿದೆ. ಈ ಪೈಕಿ 307.70ಲಕ್ಷ ರೂ. ಬಿಡುಗಡೆಯಾಗಿದೆ. ರಾಮನಗರ ತಾಲೂಕಿನದೊಡ್ಡಮಣ್ಣಗುಡ್ಡೆ, ಕಲ್ಲುಗೋಪಹಳ್ಳಿ, ಬೆತ್ತಂಗೆರೆ, ಕನಕಪುರ ತಲೂಕಿನ ದೇವರಹಳ್ಳಿ, ಮೇಡಮಾರನಹಳ್ಳಿ, ಅರಳಾಳು, ಚೌಕಸಂದ್ರ, ಬಿಜ್ಜಹಳ್ಳಿ, ವಾಡೇದೊಡ್ಡಿ, ತೇರಿನ ದೊಡ್ಡಿ, ದೊಡ್ಡತಾಂಡ್ಯ, ಗುಳಹಟ್ಟಿಕಾವಲ್, ಚನ್ನಪ ಟ್ಟಣ ತಾಲೂಕಿನ ದೇವರಹೊಸಹಳ್ಳಿ, ಕಲ್ಲಾಪುರ, ನೀಲಸಂದ್ರ, ಬಾಚಹಳ್ಳಿ, ತಿಮ್ಮಸಂದ್ರ, ಮಂಗಳವಾರಪೇಟೆ. ಮಾಗಡಿತಾಲೂಕಿನ ಮಂಚನಬೆಲೆ, ಹೇಳಿಗೆಹಳ್ಳಿಗಳಿಗೆ ಅನುದಾನಬಿಡುಗಡೆಯಾಗಿದೆ. ಈ ಗ್ರಾಮಗಳಿಗೆ ಒಟ್ಟು 176 ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಸಂಸದರ ಅಸಮಾಧಾನ: ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್, ಈ 20 ಗ್ರಾಮಗಳಿಗೆ ಸಿದ್ಧಪಡಿಸಿರುವ ಯೋಜನೆ ಸಮಂಜಸವಾಗಿ ಕಾಣುತ್ತಿಲ್ಲ. ಕಾರ್ಯಕ್ರಮ ಅನುಷ್ಠಾನವಾದರೆ ಅದರ ಫಲಿತಾಂಶ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಬೇಕು.ಆದರೆ, ಅಧಿಕಾರಿಗಳು ನೀಡಿರುವ ಯೋಜನೆಯ ರೂಪುರೇಷೆಗಳು ತಮಗೆ ಸಮಾಧಾನ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ರಿಯಾ ಯೋಜನೆ ಸಿದ್ಧಪಡಿಸುವಾಗ ಪರಿಶಿಷ್ಟ ಜಾತಿ, ಪಂಗಡದ ಕಾಲೋನಿಗಳ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಸರ್ಕಾರ ನೀಡಿರುವ ಸೂಚ್ಯಂಕಗಳನ್ನು ನೋಡಿಕೊಂಡು ನರೇಗಾ, ಕೃಷಿ ಇಲಾಖೆ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ ಮತ್ತಿತರ ಅನುದಾನ ಬಳಸಿಕೊಳ್ಳಲು ಅವಕಾಶವಿದ್ದಲ್ಲಿ ಅವುಗಳನ್ನು ಸಹಬಳಸಿಕೊಂಡುಯೋಜನೆ ಸಿದ್ಧಪಡಿಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್. ಕೆ, ಜಿಲ್ಲಾ ಪಂಚಾಯತ್ ಸಿಇಒ ಇಕ್ರಂ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.
10 ದಿನಗಳ ಕಾಲ ಗಡುವು :
ಆಯಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಮತ್ತು ಅಧಿಕಾರಿಗಳು ಜಂಟಿಯಾಗಿ ಆಯ್ಕೆಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಪಟ್ಟಿಮಾಡಬೇಕು. ಹೀಗೆ ಸಿದ್ಧವಾ ಪ ಟ್ಟಿಯನ್ನು ಜಿಲ್ಲಾ ಪಂಚಾಯ್ತಿ ಸಿಇಒ ಅವರ ಬಳಿ ಚರ್ಚಿಸಿ, 10 ದಿನದಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.