ಕೋಟಿ ರೂ.ವೆಚ್ಚ ಮಾಡಿ ಹುಟ್ಟೂರಿನಲ್ಲಿ ಆಂಜನೇಯಸ್ವಾಮಿ ದೇಗುಲ ನಿರ್ಮಿಸಿದ ಉದ್ಯಮಿ
Team Udayavani, Jun 29, 2021, 12:15 PM IST
ಗುಂಡ್ಲುಪೇಟೆ: ದೊಡ್ಡ ಹುದ್ದೆ, ಉನ್ನತ ಸ್ಥಾನಮಾನ ದೊರೆತ ಬಳಿಕ ಬಹುತೇಕ ಮಂದಿ ಹುಟ್ಟೂರನ್ನೇ ಮರೆಯುತ್ತಾರೆ. ಇದಕ್ಕೆ ಅಪವಾದ ಎಂಬಂತೆ ಉದ್ಯಮಿ ನವೀನ್, ತಮ್ಮ ತವರು ಗ್ರಾಮಕ್ಕೆ ಏನಾದರೂ ಜನೋಪಕಾರಿ ಕೆಲಸ ಮಾಡಬೇಕೆಂದು ಪಣತೊಟ್ಟು ಬರೋಬ್ಬರಿ ಕೋಟಿ ರೂ. ವೆಚ್ಚದಲ್ಲಿ ಆಂಜನೇಯ ಸ್ವಾಮಿ ದೇಗುಲ, ರಾಸುಗಳ ರಕ್ಷಣೆಗೆ ಗೋಶಾಲೆ ಮತ್ತಿತರರ ಸಮಾಜಮುಖೀ ಕಾರ್ಯಕೈಗೊಂಡು ಹೃದಯ ವೈಶಲ್ಯ ಮೆರೆದಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ತೆಂಕಲಹುಂಡಿ ಗ್ರಾಮದಲ್ಲಿ ಉದ್ಯಮಿ ನವೀನ್ 1 ಕೋಟಿರೂ.ಗೂ ಅಧಿಕ ವೆಚ್ಚದ “ಜೈ ವೀರ ಅಭಯ ಪಂಚಮುಖೀ ಶಕ್ತಿ ಆಂಜನೇಯ ಸ್ವಾಮಿದೇವಾಲಯ’ ನಿರ್ಮಿಸುತ್ತಿದ್ದಾರೆ. ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ರಾಜ ಗೋಪುರ ಕೆಲಸ ಮಾತ್ರ ಬಾಕಿಯಿದೆ.
ಶೀಘದಲ್ಲೇ ಉದ್ಘಾಟನೆಭಾಗ್ಯದೊರೆಯಲಿದೆ. ಜೊತೆಗೆ ಗೋ ಶಾಲೆಯನ್ನೂ ತೆರೆದು ರೈತರ ನೆರವಿಗೆ ಧಾವಿಸಿದ್ದಾರೆ.ಕಳೆದ 3 ವರ್ಷಗಳಿಂದ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ನಂಜನಗೂಡು ಶ್ರೀಕಂಠೇಶ್ವರ ದೇಗುಲ ಮಾದರಿ ರಾಜ ಗೋಪುರ ನಿರ್ಮಾಣ ಕಾಮಗಾರಿ ಮಾತ್ರ ಬಾಕಿ ಇದೆ.
ದೇವಾಲಯದಲ್ಲಿ 3 ಗರ್ಭಗುಡಿಗಳಿವೆ. ಪಂಚಮುಖೀ ಆಂಜನೇಯ, ಚಿಕ್ಕದೇವಮ್ಮ, ದುರ್ಗ ಪರಮೇಶ್ವರಿ ಮೂರ್ತಿಯ ಕೆತ್ತನೆ ಕಾರ್ಯ ನಡೆಯುತ್ತಿದೆ. 35 ಅಡಿ ಎತ್ತರದಪಂಚಮುಖೀ ಆಂಜನೇಯ ಸ್ವಾಮಿ ವಿಗ್ರಹ ನಿರ್ಮಿಸಲಾಗಿದೆ.
ದೇಗುಲಕ್ಕೆ ಸ್ವಂತ ಹಣ ಬಳಕೆ: ಉದ್ಯಮಿ ಬಿ.ನವೀನ್ ಯಾರ ಸಹಾಯವನ್ನು ಪಡೆಯದೆ ಸ್ವಗ್ರಾಮ ತೆಂಕಲಹುಂಡಿಯಲ್ಲಿ ವೈಯಕ್ತಿಕವಾಗಿ ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ದೇವಾಲಯ ನಿರ್ಮಿಸುತ್ತಿದ್ದಾರೆ. ಈ ಕಾರ್ಯಕ್ಕೆ ಸ್ನೇಹಿತರಾದ ಭರತ್, ಶ್ರೀಶ, ಪ್ರಮೋದ್ ಸೇರಿದಂತೆ ಮುಖಂಡರು, ಯುವಕರು ಬೆನ್ನೆಲುವಾಗಿ ನಿಂತಿದ್ದಾರೆ. ಟ್ರಸ್ಟ್ ನಿರ್ಮಾಣಕ್ಕೆ ಸಿದ್ಧತೆ: ದೇವಸ್ಥಾನಪೂರ್ಣಗೊಳ್ಳುವ ಹಂತಕ್ಕೆ ತಲುಪಿರುವ ಹಿನ್ನೆಲೆಉದ್ಘಾಟನೆ ವೇಳೆ ಗ್ರಾಮಸ್ಥರೊಡಗೂಡಿ ಟ್ರಸ್ಟ್ ನಿರ್ಮಿಸಲು ಉದ್ಯಮಿ ಬಿ.ನವೀನ್ ಚಿಂತಿಸಿದ್ದಾರೆ.
ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಕಾರ್ಯಗಳು ಈ ಟ್ರಸ್ಟ್‌ಮೂಲಕವೇ ನಡೆಯಲಿದೆ. ನವೀನ್ ತಂದೆ ನಿವೃತ್ತ ಪ್ರಾಂಶುಪಾಲ ಎಚ್.ಬಸವೇಗೌಡ, ತಾಯಿ ವಿಜಯಲಕ್ಷ್ಮೀ ಮೈಸೂರಿನಲ್ಲಿ ನೆಲೆಸಿದ್ದಾರೆ.
ಗೋಶಾಲೆ ತೆರೆದಉದ್ಯಮಿ ನವೀನ್ :
ತೆಂಕಲಹುಂಡಿಯಲ್ಲಿ ದೇವಸ್ಥಾನ ನಿರ್ಮಾಣ ಪ್ರಾರಂಭಿಸುತ್ತಿದ್ದಂತೆ ಸ್ನೇಹಿತರು, ತೆಂಕಲಹುಂಡಿ ಸ್ಥಳೀಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ದೇವಾಲಯಕ್ಕೆಜಾನುವಾರು ದಾನ ನೀಡಲುಮುಂದಾದ ಹಿನ್ನೆಲೆಯಲ್ಲಿ 30ಲಕ್ಷ ರೂ. ವೆಚ್ಚದಲ್ಲಿ ಗೋ ಶಾಲೆತೆರೆಯಲಾಗಿದೆ. ದಾನರೂಪದಲ್ಲಿ ಬಂದ 10 ಜಾನುವಾರುಗಳು ಗೋ ಶಾಲೆಯಲ್ಲಿವೆ. ಇವುಗಳ ಸಾಕಣೆಗೆ2ಎಕರೆ ಜಮೀನಿನಲ್ಲಿ ಮೇವಿನ ಕಡ್ಡಿ ಹಾಕಲಾಗಿದ್ದು, ಮೂವರು ಸಿಬ್ಬಂದಿ ನಿರ್ವಹಣೆ ಹೊಣೆ ಹೊತ್ತಿದ್ದಾರೆ. ರಾಸುಗಳನ್ನು ನೋಡಿಕೊಳ್ಳಲು ಸಾಧ್ಯವಾಗದವರುಈಗೋಶಾಲೆಗೆ ತಂದು ಬಿಡಬಹುದು ಎಂದು ನವೀನ್ ಮನವಿ ಮಾಡಿದ್ದಾರೆ.
ಆಂಜನೇಯನ ಪಾದದಡಿಪ್ರವೇಶ :
ದೇವಸ್ಥಾನದ ಬಲ ಭಾಗದಲ್ಲಿ ನಾಗರಕಟ್ಟೆಯಿದ್ದು, ಎಡ ಭಾಗದಲ್ಲಿ 10ಲಕ್ಷ ರೂ. ವೆಚ್ಚದಲ್ಲಿ35 ಅಡಿ ಎತ್ತರದ ಪಂಚಮುಖೀಆಂಜನೇಯ ಸ್ವಾಮಿವಿಗ್ರಹ ನಿರ್ಮಿಸಲಾಗಿದೆ. ಇದು ಈಶಾನ್ಯಮೂಲೆಯಲ್ಲಿದ್ದು, ದೇವಾಲಯಪ್ರದಕ್ಷಿಣೆ ಹಾಕುವಾಗ ಆಂಜನೇಯನಪಾದದ ಒಳಗೆ ನುಸುಳಿ ಭಕ್ತಾದಿಗಳುನಡೆದು ಬರುವಂತೆ ನಿರ್ಮಿಸಿರುವುದು ವಿಶೇಷವಾಗಿದೆ. ಈ ಶೈಲಿಯಲ್ಲಿರಾಜ್ಯದ ಯಾವ ಭಾಗದಲ್ಲೂ ವಿಗ್ರಹ ಕೆತ್ತನೆಯಾಗಿಲ್ಲ. ದೇವರ ಕಾಲ ಕೆಳಗೆ ನಡೆದು ಬರುವುದರಿಂದ ಪಾಪಕರ್ಮ ತೊಳೆದು ಹೋಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಆಂಜನೇಯ ಸ್ವಾಮಿ ಕನಸ್ಸಿನಲ್ಲಿ ಬಂದು ಪ್ರೇರಣೆ ನೀಡಿದ ಹಿನ್ನೆಲೆ ದೇವಸ್ಥಾನ ನಿರ್ಮಾಣಕ್ಕೆ ಮುಂದಾದೆ. ಪ್ರಾರಂಭದಲ್ಲಿ 20 ರಿಂದ 30ಲಕ್ಷ ರೂ. ಅಂದಾಜಿಸಲಾಗಿತ್ತು.ಆದರೆ, ನಮ್ಮ ನಿರೀಕ್ಷೆ ಮೀರಿ ಕೋಟಿರೂ. ತಗುಲಿದೆ. ದೇವಸ್ಥಾನ ನಿರ್ಮಾಣ ನೆಮ್ಮದಿ ತರಿಸಿದೆ.–ಬಿ.ನವೀನ್,ಉದ್ಯಮಿ
-ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.