ವ್ಯಸನಮುಕ್ತ ಸಮಾಜಕ್ಕೆ ಕೈಜೋಡಿಸಿ


Team Udayavani, Jun 29, 2021, 12:50 PM IST

ವ್ಯಸನಮುಕ್ತ ಸಮಾಜಕ್ಕೆ ಕೈಜೋಡಿಸಿ

ಚಿಕ್ಕಬಳ್ಳಾಪುರ: ಮಾದಕ ವಸ್ತುಗಳ ಸೇವನೆಯಿಂದ ಮಾನವನ ಆರೋಗ್ಯ ಸಂಪೂರ್ಣ ಹಾಳಾಗುವುದರ ಜೊತೆಗೆ ಕುಟುಂಬ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ಯುವಜನತೆ ದುಶ್ಚಟಕ್ಕೆ ದಾಸರಾಗದೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಭೈರಪ್ಪ ಶಿವಲಿಂಗ ನಾಯಿಕ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪೊಲೀಸ್‌ ಮತ್ತು ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ನಗರದ ಜಿಲ್ಲಾ ಕೋರ್ಟ್‌ ಆವರಣದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಮಾನವ ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ ಅಂಗವಾಗಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಮತ್ತು ಅರಿವು ಕಾರ್ಯಕ್ರಮದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

“ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ನಿಜಾಂಶ ತಿಳಿಸಿ’ ಎಂಬ ಘೋಷವಾಕ್ಯ ದೊಂದಿಗೆ ಈ ವರ್ಷ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಮಾನವ ಕಳ್ಳಸಾಗಣೆ ವಿರೋಧಿ ದಿನ ಆಚರಿಸಲಾಗುತ್ತಿದೆ. ವಿಶ್ವದಲ್ಲಿ 53 ಕೋಟಿ ವಯಸ್ಕರು ಕನಿಷ್ಠ ಒಂದು ಬಾರಿಯಾದರೂ ಮಾದಕ ವಸ್ತು ಬಳಸಿರುತ್ತಾರೆ. 24.6 ಕೋಟಿ ಜನ ಮದ್ಯ ಸೇವಿಸಿರುತ್ತಾರೆ. ಇದರಲ್ಲಿ2.9ಕೋಟಿ ಮದ್ಯ ವ್ಯಸನಿಗಳಾಗಿದ್ದಾರೆ. 25 ಲಕ್ಷ ಜನ ಗಾಂಜಾ ವ್ಯಸನಿಗಳಾಗಿದ್ದಾರೆ. 28 ಲಕ್ಷ ಜನ ಅಫೀಮು ವ್ಯಸನಿಗಳಾಗಿದ್ದಾರೆ ಎಂದು ತಿಳಿಸಿದರು.

ಕುಟುಂಬವೂ ಹಾಳು: ಇಂದಿನ ಪೀಳಿಗೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದಲ್ಲದೇ ತಮ್ಮ ಕುಟುಂಬದ ಭವಿಷ್ಯವನ್ನೂಹಾಳು ಮಾಡುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಗೆ ದಾಸರಾದವರು ಮಾದಕ ಸೇವನೆ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬಂ‌ ಗೌರವಯುತ ಬದುಕನ್ನು ಕಟ್ಟಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಯುವ ಸಮೂಹ ದುಶ್ಚಟಗಳಿಗೆ ದಾಸ ರಾಗಬಾರದೆಂಬ ಕಿವಿಮಾತು ಹೇಳಿದರು.

ತಿಳಿ ಹೇಳಬೇಕಿದೆ: ಮದ್ಯಪಾನ, ಧೂಮ ಪಾನದಂತಹ ದುಶ್ಚಟಗಳಿಗೆ ಹದಿಹರಯದವರು ಒಳಗಾಗುತ್ತಿದ್ದಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆಅದರಿಂದ ಹೊರಬರುವುದು ತುಂಬಾ ಕಷ್ಟಎಂಬುದನ್ನು ತಿಳಿ ಹೇಳಬೇಕಿದೆ ಎಂದು ತಿಳಿಸಿದರು.

ನಿಯಂತ್ರಣ ಕಳೆದುಕೊಳ್ಳುತ್ತೇವೆ: ಮದ್ಯ, ತಂಬಾಕು, ಡ್ರಗ್ಸ್‌, ಗಾಂಜಾ, ಅಫೀಮು ಮತ್ತಿತರ ಮಾದಕ ವಸ್ತುಗಳಾಗಿದ್ದು, ಇವುಗಳ ಸೇವನೆಯಿಂದ ಮೆದುಳಿನಲ್ಲಿ ಅಸ್ಪಷ್ಟತೆ ಉಂಟಾಗುತ್ತದೆ. ‌ ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವಪರಿಸ್ಥಿತಿನಿರ್ಮಾಣವಾಗುತ್ತದೆ. ಇದನ್ನು ಸಂಪೂರ್ಣ ನಿಯಂತ್ರಣ ಮಾಡಲು ಕೇವಲ ಸರ್ಕಾರ ಮತ್ತು ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಹೆಚ್ಚಾಗಿದ್ದು, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿ ಸಬೇಕು ಎಂದು ಅವರು ಮನವಿ ಮಾಡಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಲಕ್ಷ್ಮೀ ಕಾಂತ್‌ಜಾನಕಿ ರಾಮ್‌ ಮಿಸ್ಕಿನ್‌, ಜಿಪಂ ಸಿಇಒ ಪಿ.ಶಿವಶಂಕರ್‌, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್‌, ಎಸಿ ಎ.ಎನ್‌.ರಘುನಂದನ್‌, ಡಿಎಚ್‌ಒ ಡಾ.ಇಂದಿರಾ ಆರ್‌.ಕಬಾಡೆ, ಜಿಲ್ಲಾ ಕುಷ್ಠರೋಗನಿರ್ಮೂಲನಾಧಿಕಾರಿಡಾ.ಶಿವಕು ಮಾರ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಚ್‌.ತಮ್ಮೇಗೌಡ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

12

Chikkaballapur: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ!

suicide (2)

Chikkaballapur: ಪೋಕ್ಸೋ ಆರೋಪಿ ಜತೆಗೆ 16 ವರ್ಷದ ಬಾಲಕಿ ಆತ್ಮಹತ್ಯೆ!

1-ffsdf

Chikkaballapur ನಗರಸಭೆ ಕೋಲಾಹಲ; ಡಾ.ಸುಧಾಕರ್ ಮೇಲುಗೈ: ಸವಾಲು ಹಾಕಿದ ಪ್ರದೀಪ್ ಈಶ್ವರ್!

1-jds

Chikkaballapur ನಗರಸಭೆ ಚುನಾವಣೆ; ಇಬ್ಬರು ಸದಸ್ಯರು ಕಾಣುತ್ತಿಲ್ಲ: ಜೆಡಿಎಸ್ ಅಳಲು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.