ಕಾಪು ಸಿಐ ನೇತೃತ್ವದ ಕಾರ್ಯಾಚರಣೆ : ನಾಲ್ವರು ಅಂತರ್ ಜಿಲ್ಲಾ ವಾಹನ ಕಳ್ಳರ ಬಂಧನ
ಸಾಂತೂರಿನಿಂದ ಕಳವಾಗಿದ್ದ ಟಿಪ್ಪರ್ ಶಿವಮೊಗ್ಗದಲ್ಲಿ ಪತ್ತೆ
Team Udayavani, Jun 29, 2021, 7:38 PM IST
ಕಾಪು : ಮುದರಂಗಡಿ ಸಾಂತೂರು ಅಳುಂಬೆಯ ಡಾಂಬಾರು ಪ್ಲಾಂಟ್‌ನ್ ಗೇಟಿನ ಬೀಗ ಮುರಿದು ಕಳವುಗೈಯ್ಯಲಾಗಿದ್ದ ಟಿಪ್ಪರ್ ಲಾರಿ ಸಹಿತವಾಗಿ ನಾಲ್ಕು ಮಂದಿ ಅಂತರ್ ಜಿಲ್ಲಾವಾಹನ ಚೋರರನ್ನು ಕಾಪು ವೃತ್ತ ನಿರೀಕ್ಷಕರ ನೇತೃತ್ವದ ಪೊಲೀಸರ ತಂಡವು ಶಿವಮೊಗ್ಗ ಮತ್ತು ಮರವಂತೆಯಲ್ಲಿ ಬಂಽಸಿದೆ.
ಪಲಿಮಾರು ಗ್ರಾಮದ ಅಡ್ವೆ ನಿವಾಸಿ ಆಶ್ರಫ್ (27), ಉತ್ತರ ಕನ್ನಡ ಜಿಲ್ಲೆ ಮೂಲದ ಪ್ರಸ್ತುತ ಪಡುಬಿದ್ರಿ ಕಂಚಿನಡ್ಕ ಶಾಲೆ ಬಳಿ ವಾಸವಿರುವ ಮುನ್ನಾ ಯಾನೆ ಮಜೀರ್ ಶೇಖ್ (38), ಶಿವಮೊಗ್ಗ ಜಿಲ್ಲೆಯ ಮಂಜುನಾಥ ಯಾನೆ ಮಂಜು (31), ತೀರ್ಥಹಳ್ಳಿ ನಿವಾಸಿ ಅರುಣ (26) ಎಂಬವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಲಾರಿ, ಸ್ವಿಫ್ಟ್ ಕಾರು, ಮೊಬೈಲ್ ಪೋನ್ ಮತ್ತು ನಗದು ಸಹಿತ 12.47 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಜೂ. 16ರಂದು ರಾತ್ರಿ ಮುದರಂಗಡಿ ಸಾಂತೂರು ಅಳುಂಬೆ ನಾಗಯ್ಯ ಶೆಟ್ಟಿ ಎಂಬವರ ವೈಶಾಲಿ ಕನ್ಸ್‌ಸ್ಟ್ರಕ್ಷನ್ ಡಾಂಬಾರು ಪ್ಲಾಂಟ್‌ನ ಗೇಟಿನ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು ಸೈಟ್‌ನಲ್ಲಿ ನಿಲ್ಲಿಸಲಾಗಿದ್ದ 8 ಲಕ್ಷ ರೂ. ಮೌಲ್ಯದ ಲಾರಿಯನ್ನು ಕಳವುಗೈದಿದ್ದರು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾಪು ವೃತ್ತ ಸಿಐ ಪ್ರಕಾಶ್ ನೇತೃತ್ವದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದರು.
ಬಳಿಕ ತನಿಖೆಯ ನೇತೃತ್ವ ವಹಿಸಿದ್ದ ಕಾಪು ವೃತ್ತ ಪೊಲೀಸ್ ಠಾಣೆಯ ಪ್ರಭಾರ ಸಿಐ ಸಂಪತ್ ಕುಮಾರ್ ಅವರು ಜೂ. 22ರಂದು ಪಡುಬಿದ್ರಿ ಕ್ರೈಂ ಎಸ್ಸೈ ಕೆ. ಜಯ ಅವರೊಂದಿಗೆ ಕಾರ್ಯಾಚರಣೆ ನಡೆಸಿ, ಕಳವಾದ ಲಾರಿಯನ್ನು ತೀರ್ಥಹಳ್ಳಿಯಲ್ಲಿ ಪತ್ತೆ ಹಚ್ಚಿದ್ದರು. ಆರೋಪಿಗಳಾದ ಮಂಜುನಾಥ ಯಾನೆ ಮಂಜು, ಅರುಣ, ಎಂಬವರನ್ನು ಬಂಧಿಸಿ, ಅವರಿಂದ ಲಾರಿ ಮತ್ತು ಕೃತ್ಯಕ್ಕೆ ಬಳಸಲಾಗಿದ್ದ ಮೊಬೈಲ್ ಪೋನ್‌ಗಳನ್ನು ಸ್ವಾಧಿನಪಡಿಸಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ, ಮತ್ತೆ ತನಿಖೆ ಮುಂದುವರಿಸಿದ್ದ ಪೊಲೀಸರು ಜೂ. 28ರಂದು ಮರವಂತೆ ಬಳಿ ಟಿಪ್ಪರ್ ಲಾರಿಯನ್ನು ಕಳವು ಮಾಡಿ ಮಾರಾಟ ಮಾಡಿದ ಆರೋಪಿಗಳಾದ ಆಶ್ರಫ್, ಮುನ್ನಾ ಯಾನೆ ಮಜೀರ್ ಶೇಖ್ ಎಂಬವರನ್ನು ಬಂಧಿಸಿದ್ದು, ಕಳವು ಮಾಡಲು ಉಪಯೋಗಿಸಿದ ಮಾರುತಿ ಸಿಪ್ಟ್ ಕಾರು ಹಾಗೂ ನಗದು ರೂಪಾಯಿ 29.900/- ಹಾಗೂ 3 ಮೊಬೈಲ್ ಪೋನ್, ಬೀಗ ಹಾಗೂ ಕಬ್ಬಿಣದ ರಾಡ್‌ನ್ನು ಸ್ವಾಧಿನ ಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕಾಪು ಪ್ರಭಾರ ಸಿಐ ಸಂಪತ್ ಕುಮಾರ್ ಮತ್ತು ಸಿಐ ಪ್ರಕಾಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪಡುಬಿದ್ರಿ ಕ್ರೈಂ ಎಸ್ಸೈ ಜಯ ಕೆ., ಎಸ್ಸೈ ದಿಲೀಪ್ ಜಿ.ಆರ್., ಎಎಸ್ಸೈ ದಿವಾಕರ್ ಸುವರ್ಣ, ಕಾಪು ವೃತ್ತ ನಿರೀಕ್ಷಕರ ಕಛೇರಿಯ ಸಿಬ್ಬಂದಿಗಳಾದ ಸುಧಾಕರ್, ಪ್ರವೀಣ್ ಕುಮಾರ್, ಶರಣಪ್ಪ , ಸಂದೀಪ್, ಸುಕುಮಾರ್, ಪಡುಬಿದ್ರಿ ಠಾಣಾ ಸಿಬ್ಬಂದಿಗಳಾದ ಹೇಮರಾಜ್, ರಾಜೇಶ್, ಕರಿಬಸಜ್ಜ ಮೊದಲಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.