![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 4, 2021, 5:55 PM IST
ಸೇವಿಸುವ ಆಹಾರದಲ್ಲಿದೆ ನಮ್ಮ ಆರೋಗ್ಯದ ಗುಟ್ಟು. ಹೀಗಾಗಿ ದೈನಂದಿನ ಆಹಾರ ಕ್ರಮ ಹೇಗಿರುತ್ತದೆ ಎನ್ನುವುದರಲ್ಲೇ ನಿಮ್ಮ ಆರೋಗ್ಯದ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದು. ಕೆಲವೊಂದು ಬಾರಿ ಇದರಲ್ಲಿ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳೇ ಮುಂದೆ ಆರೋಗ್ಯದ ವ್ಯತ್ಯಯಕ್ಕೆ ಕಾರಣವಾಗುತ್ತದೆ.
ಆಹಾರದಲ್ಲಿ ಹಿತಮಿತ ಪಾಲನೆ ಎಷ್ಟು ಮುಖ್ಯವೋ ಸಮಯಕ್ಕೆ ಸರಿಯಾಗಿ ಸೇವಿಸುವುದು, ಸೇವಿಸುವ ಕ್ರಮವೂ ಅಷ್ಟೇ ಮುಖ್ಯವಾಗಿರುತ್ತದೆ. ಒಂದು ವೇಳೆ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದೀರಿ ಎಂದಾದರೆ ಮುಂದೊಂದು ದಿನ ಅಪಾಯದ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಹೀಗಾಗಿ ಆಹಾರ
ಸೇವನೆಯಲ್ಲಿ ಎಚ್ಚರ ತಪ್ಪಿದ್ದರೆ ಈಗಲೇ ಸರಿಪಡಿಸಿಕೊಳ್ಳಿ.
ಅನೇಕ ಮಂದಿ ಬೆಳಗ್ಗೆ ತಿಂಡಿಯನ್ನು ತಿನ್ನುವುದಿಲ್ಲ. ಕೆಲವರಿಗೆ ತಡವಾಗಿ ತಿನ್ನುವ ಅಭ್ಯಾಸವಿರುತ್ತದೆ. ರಾತ್ರಿ ನಿದ್ರೆಯ ಬಳಿಕ ಚಯಾಪಚಯ ಕ್ರಿಯೆ ಹೆಚ್ಚಾಗಿರುತ್ತದೆ. ಹೀಗಾಗಿ ಬೆಳಗ್ಗಿನ ಉಪಹಾರ ಪ್ರಮುಖವಾಗಿರುತ್ತದೆ. ಅದು ಕೂಡ ಎದ್ದ ಅರ್ಧ ಗಂಟೆಯ ಒಳಗೆ ಪೌಷ್ಟಿಕ ಆಹಾರದ ಅಗತ್ಯವಿರುತ್ತದೆ. ಇದು ಮಧ್ಯಾಹ್ನ ಮತ್ತು ರಾತ್ರಿಗಿಂತ ಸ್ವಲ್ಪ ಅಧಿಕವಾಗಿರಬೇಕು. ಒಂದು ವೇಳೆ ಸಮಯಕ್ಕೆ ಸರಿಯಾಗಿ ತಿನ್ನದೇ ಇದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಕೊಬ್ಬಿನಾಂಶವುಳ್ಳ ಆಹಾರವನ್ನು ರಾತ್ರಿ ಸೇವಿಸುವುದು ಸರಿಯಲ್ಲ. ಇದರಿಂದ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಒಂದು ವೇಳೆ ಮಧ್ಯ ರಾತ್ರಿ ಎದ್ದು ತಿನ್ನುವ ಬಯಕೆಯಾದರೆ ಸುಲಭವಾಗಿ ಜೀರ್ಣವಾಗುವ ಹಣ್ಣುಗಳನ್ನು ಸೇವಿಸಬಹುದು.
ಒಂದೇ ಬಾರಿ ಹೆಚ್ಚು ಆಹಾರ ಸೇವನೆಯೂ ಆರೋಗ್ಯಕರವಲ್ಲ. ಹೆಚ್ಚು ತಿನ್ನುವ ಅಭ್ಯಾಸ ಉಳ್ಳವರು ಸಣ್ಣ ತಟ್ಟೆಯಲ್ಲಿ ಆಹಾರ ಸೇವನೆಯನ್ನು ಪ್ರಾರಂಭಿಸಬೇಕು. ಕ್ರಮೇಣ ತಟ್ಟೆ ಸಣ್ಣದಾದಷ್ಟು ಆಹಾರ ಸೇವನೆಯಲ್ಲೂ ಇತಿಮಿತಿ ಹೇರಬಹುದು.
ಹಸಿವಾಗದಿದ್ದರೂ ಆಹಾರ ಸೇವನೆ ಮಾಡುವುದು ಸರಿಯಲ್ಲ. ಅದೇ ರೀತಿ ಅವಸರವಸರವಾಗಿ ಸರಿಯಾಗಿ ಅಗಿಯದೇ ತಿನ್ನುವುದರಿಂದ ನಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮುಂದೆ ಸಮಸ್ಯೆಯಾಗುತ್ತದೆ. ದೇಹದ ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ.
ಅತಿಯಾದ ಜಂಕ್‌ಫುಡ್ ಸೇವನೆ ಜೀರ್ಣಕ್ರಿಯೆಯ ಮೇಲೆ ಗಂಭೀರ ಸಮಸ್ಯೆ ಉಂಟು ಮಾಡುತ್ತದೆ. ಇದು ದೀರ್ಘಕಾಲೀನ ಸಮಸ್ಯೆಯನ್ನು ಉಂಟು ಮಾಡುತ್ತದೆ. ಹೀಗಾಗಿ ಆದಷ್ಟು ಶೀಘ್ರದಲ್ಲಿ ಇದನ್ನು ತ್ಯಜಿಸುವುದು ಉತ್ತಮ.
ಆಹಾರ ಸೇವನೆ ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ. ದೇಹಕ್ಕೆ ಅಗತ್ಯ ಶಕ್ತಿ ತುಂಬಲು 8 ಗಂಟೆಗಳ ನಿದ್ರೆಯ ಅಗತ್ಯವಿರುತ್ತದೆ. ಸರಿಯಾಗಿ ನಿದ್ರೆಯಾಗದೇ ಇದ್ದರೂ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.