ಪ್ರಗತಿಪರ ವಿಚಾರಧಾರೆಗಳ ಕೊಲೆ ಸಾಧ್ಯವಿಲ್ಲ

­ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿಗೆ ಎಂ. ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ

Team Udayavani, Jun 29, 2021, 8:17 PM IST

28ktr1

ಚನ್ನಮ್ಮನ ಕಿತ್ತೂರು: ಪ್ರಗತಿಪರ ಚಿಂತಕರ ಸಂಖ್ಯೆ ಸಾಕಷ್ಟಿದೆ. ದೈಹಿಕವಾಗಿ ಅವರನ್ನು ಕೊಲ್ಲಬಹುದು. ಆದರೆ ಅವರ ವಿಚಾರಧಾರೆಗಳನ್ನು ಕೊಲ್ಲಲು ಸಾಧ್ಯವಿಲ್ಲವೆಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಬೈಲೂರು ನಿಷ್ಕಲ ಮಂಟಪದಲ್ಲಿ ಸಂಶೋಧಕ ಎಂ. ಎಂ. ಕಲಬುರ್ಗಿ ಅವರ ಹೆಸರಿನಲ್ಲಿ ಲಂಡನ್‌ ಬಸವ ಅಂತರಾಷ್ಟ್ರೀಯ ಪ್ರತಿಷ್ಠಾನ ನೀಡುವ ಪ್ರಗತಿಪರ ಚಿಂತಕ ಪ್ರಶಸ್ತಿಯನ್ನು ರವಿವಾರ ಸ್ವೀಕರಿಸಿ ಅವರು ಮಾತನಾಡಿದರು. 12ನೇ ಶತಮಾನದ ಶರಣರನ್ನು ನೋಡಿದರೆ ಅಚ್ಚರಿಯಾಗುತ್ತದೆ. ನೂರಾರು ವರ್ಷಗಳ ಹಿಂದೆಯೇ ಅಷ್ಟೊಂದು ವಿಚಾರವಂತರು ಇದ್ದರು. ಬಸವಣ್ಣ ಸೇರಿದಂತೆ ಎಲ್ಲರೂ ಮಾನವೀಯ ಅಸ್ಮಿತೆಗೆ ಬೆಲೆ ನೀಡಿದವರು. ಅದೇ ದಾರಿಯಲ್ಲಿ ನಿಂತು ಕೆಲಸ ಮಾಡಿದವರು ಸಂಶೋಧಕ ಕಲಬುರ್ಗಿಯವರು. ಧರ್ಮಾಂಧನೊಬ್ಬ ಅವರನ್ನು ಕೊಂದರೆಂದರೆ ಬಹಳ ನೋವು ತರಿಸುತ್ತದೆ. ಅವರ ಮರಣದ ನಂತರ ಸ್ಥಾಪಿಸಲಾಗಿರುವ ಪ್ರಶಸ್ತಿ ಸ್ವೀಕಾರ ಸಂತೋಷದಾಯಕವಲ್ಲ. ಆದರೆ ಜಾತಿ, ಆಚಾರವಾದಿಗಳಿಗೆ ಸವಾಲ್‌ ಆಗಿ ಸ್ವೀಕರಿಸುತ್ತಿದ್ದೇನೆಂದು ಹೇಳಿದರು.

ಮನುಷ್ಯನ ಗೌರವ ಮತ್ತು ಮಾನವೀಯತೆಗೆ ನೀಡಿದ ಪ್ರಶಸ್ತಿ ಇದಾಗಿದೆ. ಬೈಲೂರು ಜನತೆಗೆ ಪ್ರಶಸ್ತಿ ಅರ್ಪಣೆ ಮಾಡುವುದಾಗಿ ಹೇಳಿದರು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ, ಡಾ| ಕಲಬುರ್ಗಿ ಸಾಧನೆ ಸಾಕಷ್ಟಿದೆ. ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಧಾರ್ಮಿಕ ದೃಷ್ಟಿಕೋನದ ನೆಲೆಯಿಂದ ಬೋಧಿಸುತ್ತಿದ್ದರು. ಅವರ ಬೋಧನಾ ವೈಖರಿ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ಚಲಿಸುವ ವಿಶ್ವಕೋಶವಾಗಿದ್ದ ಅವರು, ನಾಟಕ, ಸಂಶೋಧನೆ, ಛಂದಸ್ಸು, ಹಳೆಗನ್ನಡ, ಸಂಪಾದನೆ ಹೀಗೆ ಯಾವುದೇ ರಂಗದ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಸಂಶೋಧನೆ ಗ್ರಂಥ ಓದಿದರೆ ಅವರನ್ನು ವಿರೋಧಿಸುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.

ಕಲಾವಿದ ಕೆ. ವಿ. ನಾಗರಾಜಮೂರ್ತಿ ವರ್ಚುವಲ್‌ ವೇದಿಕೆ ಮುಖಾಂತರ ಆಶಯ ನುಡಿಗಳನ್ನಾಡುತ್ತ ಮೌಡ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಹುಲಿಕಲ್‌ ನಟರಾಜ್‌, ರಂಗಭೂಮಿ ಕಲಾವಿದ, ವಿಚಾರವಾದಿ ಪ್ರೊ. ಜಿ. ಕೆ. ಗೋವಿಂದರಾವ್‌, ಪ್ರೊ. ಆಶಾದೇವಿ ಅವರಿಗೆ ಈಗಾಗಲೇ ಕಲಬುರ್ಗಿ ಪ್ರಶಸ್ತಿ ನೀಡಲಾಗಿದೆ. ಈ ಸಾಲಿನಲ್ಲಿ ಪ್ರವಚನಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ನಿಜಗುಣಾನಂದ ಸ್ವಾಮೀಜಿ ಅವರಿಗೆ ನೀಡಲಾಗುತ್ತಿದೆ ಎಂದರು.

ವರ್ಚುವಲ್‌ ವೇದಿಕೆ ಮೂಲಕ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಮಹಾದೇವಯ್ಯ, ಖ್ಯಾತ ವಿಮರ್ಶಕಿ ಎಂ. ಎಸ್‌. ಆಶಾದೇವಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ಪ್ರಶಸ್ತಿ ಪತ್ರ ಓದಿದರು. ಮಾಜಿ ಶಾಸಕ ಶಿವಶಂಕರ, ಪ್ರೊಬೇಶನರಿ ತಹಶೀಲ್ದಾರ್‌ ಮಹೇಶ ಪತ್ರಿ, ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜನಪದ ಸಂಶೋಧನೆ ಕೇಂದ್ರದ ಅಧ್ಯಕ್ಷ ಬಸಲಿಂಗಯ್ಯ ಹಿರೇಮಠ ಕಲಬುರ್ಗಿ ವಿರಚಿತ ರಂಗಗೀತೆ ಹಾಡಿದರು. ಅಥಣಿ ದೇವದಾಸಿ ವಿಮೋಚನಾ ಸಂಸ್ಥೆ ಮುಖ್ಯಸ್ಥ ಬಿ. ಎಲ್‌. ಪಾಟೀಲ ಸ್ವಾಗತಿಸಿದರು.

ಟಾಪ್ ನ್ಯೂಸ್

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Jammu-Srinagar highway closed due to heavy snowfall; Vehicles stranded

Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

5-snehamayi

Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Jammu-Srinagar highway closed due to heavy snowfall; Vehicles stranded

Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.