ಚಾಕ್‌ಪೀಸ್‌ನಲ್ಲೂ ಕಲೆ ಅರಳಿಸಿದ ಪ್ರದೀಪ್
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-ಏಷಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಹೆಸರು ಸೇರ್ಪಡೆ
Team Udayavani, Jun 29, 2021, 9:09 PM IST
ಹೊನ್ನಾವರ: ಚಾಕ್‌ಪೀಸ್‌ನಲ್ಲಿ ಕಲೆ ಅರಳಿಸಿದ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಹೊನ್ನಾವರದ ಪ್ರದೀಪ ನಾಯ್ಕ ಹೆಸರು ಸೇರ್ಪಡೆಯಾಗಿದೆ.
ಮೊದ ಮೊದಲು ಚಾಕ್‌ಪೀಸ್ ಮೇಲೆ ಇಂಗ್ಲಿಷ್ ಅಕ್ಷರ ಕೆತ್ತುವ ಅಭ್ಯಾಸ ಮಾಡಿದ ಪ್ರದೀಪ ಕೆಲ ದಿನಗಳ ನಂತರ ತನ್ನ ಗೆಳೆಯರ ಹೆಸರು ನಂತರ ಭಗತ್ ಸಿಂಗ್, ಬುದ್ಧ, ಗಾಂಧೀಜಿ ಮುಂತಾದವರ ಹೆಸರು ಕೆತ್ತಿ ಖುಷಿ ಪಟ್ಟಿದ್ದಾರೆ. ಆಮೇಲೆ ಹದಿನೇಳು ಚಾಕ್‌ಪೀಸ್‌ನಲ್ಲಿ ರಾಷ್ಟ್ರಗೀತೆಯನ್ನು ಕೇವಲ 18 ತಾಸುಗಳಲ್ಲಿ ಕಾಲ ಕೆತ್ತಿ ಅದನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರದೀಪ ಕಳುಹಿಸಿದ್ದರು. ಅದನ್ನು ಪರಿಶೀಲಿಸಿ ಪ್ರದೀಪ್ ಅವರು ಹೆಸರನ್ನು ದಾಖಲಿಸಿದ್ದಾರೆ.
ಕಾಲೇಜಿನ ರಜಾ ಅವಧಿಯಲ್ಲಿ ಅದರಲ್ಲೂ ತೌಕ್ತೆ ಚಂಡಮಾರುತ ಸಮಯದಲ್ಲಿ ಆನ್‌ಲೈನ್ ಕ್ಲಾಸ್ ಇರಲ್ಲಿಲ್ಲ. ಇನ್ನೇನಾದರೂ ಮಾಡಬೇಕೆನ್ನುವ ಕುತೂಹಲವಿತ್ತು. ಹಾಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ನ ಸಾಧಕರನ್ನು ನೋಡಿ ನಾನು ಏನಾದರೂ ಮಾಡಬೇಕೆಂದು ಯೋಚಿಸಿ ಚಾಕ್‌ಪೀಸ್‌ನಲ್ಲಿ ರಾಷ್ಟ್ರಗೀತೆ ಬರೆದಿದ್ದೇನೆ ಎಂದು ಖುಷಿಯಿಂದ ಹೇಳುತ್ತಾರೆ ಚಾಕ್‌ಪೀಸ್ ಆರ್ಟಿಸ್ಟ್ ಪ್ರದೀಪ್. ಇದರ ಜತೆಗೆ ತಬಲಾ, ಚಿತ್ರಕಲೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಸಂಗೀತವನ್ನು ಬಾಲ್ಯದಿಂದಲೂ ರೂಢಿಸಿಕೊಂಡಿರುವ ಅವರು ಹೊನ್ನಾವರದ ಎಸ್‌ಡಿಎಂ ಕಾಲೇಜಿನಲ್ಲಿ ಸತತ ಮೂರು ವರ್ಷ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪಡೆದಿದ್ದಾರೆ. ತನ್ನ ಈ ಕಲೆಗೆ ತಂದೆ ಮಂಜುನಾಥ ನಾಯ್ಕ, ತಾಯಿ ಚಂದ್ರಕಲಾ ಮತ್ತು ಕುಟುಂಬದವರು, ನನ್ನ ಗುರುಗಳು ಮತ್ತು ಕಾಲೇಜಿನ ಪ್ರಾಚಾರ್ಯರು, ಗೆಳೆಯರ ಪ್ರೋತ್ಸಾಹ ಕಾರಣವೆಂದು ಹೆಮ್ಮೆಯಿಂದ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.