ಡಿಜಿಟಲ್ ಪಾವತಿ : ಮುಂದಿನ 5 ವರ್ಷಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯತೆ
Team Udayavani, Jun 30, 2021, 6:45 AM IST
ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಡಿಜಿಟಲ್ ಪಾವತಿ ಕ್ಷಿಪ್ರಗತಿಯಲ್ಲಿ ಜನಪ್ರಿಯಗೊಳ್ಳುತ್ತಿದೆ. ಇಂದಿಗೂ ನಗದು ಪಾವತಿಯತ್ತಲೇ ಜನಸಾಮಾನ್ಯರು ಹೆಚ್ಚು ಆಸಕ್ತಿಯನ್ನು ತೋರುತ್ತಿರುವರಾದರೂ ಡಿಜಿಟಲ್ ಪಾವತಿ ಪ್ರಮಾಣವೂ ಏರುಗತಿಯಲ್ಲಿದೆ. ಸೆಲೂನ್‌ನಿಂದ ಹಿಡಿದು ಪಂಚತಾರಾ ಹೊಟೇಲ್‌ವರೆಗೂ ಎಲ್ಲ ಕಡೆಯಲ್ಲೂ ಕ್ಯುಆರ್ ಕೋಡ್ ಬಳಸಿ ಯುಪಿಐ ಪಾವತಿ ಲಭ್ಯವಿದೆ. ಅಷ್ಟೇ ಏಕೆ ತರಕಾರಿ ಮಾರುವವ, ಕಿರಾಣಿ ಅಂಗಡಿ, ಚಹಾ ಅಂಗಡಿ ಹೀಗೆ ಸಣ್ಣಪುಟ್ಟ ವ್ಯಾಪಾರಿಗಳು ಕೂಡ ಡಿಜಿಟಲ್ ಪಾವತಿಯ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಒದಗಿಸಿಕೊಡುತ್ತಿದ್ದಾರೆ. ಈ ತಂತ್ರಜ್ಞಾನಕ್ಕೆ ಜನಸಮಾನ್ಯರೂ ಕೂಡ ನಿಧಾನಗತಿಯಲ್ಲಿ ಹೊಂದಿಕೊಳ್ಳತೊಡಗಿದ್ದಾರೆ. ಹೀಗಾಗಿ ಈಗ ಮಾರುಕಟ್ಟೆಗೆ ಅಥವಾ ಇನ್ನೆಲ್ಲಿಗೋ ತೆರಳುವಾಗ ಪರ್ಸ್ ತೆಗೆದುಕೊಂಡು ಹೋಗಲೇಬೇಕಾದ ಅನಿವಾರ್ಯವೇನೂ ಇಲ್ಲ. ಕೈಯಲ್ಲಿ ಮೊಬೈಲ್ ಒಂದಿದ್ದರೆ ಸಾಕು ನಿಮ್ಮ ಎಲ್ಲ ವ್ಯವಹಾರವನ್ನೂ ಡಿಜಿಟಲ್ ಪಾವತಿಯ ಮೂಲಕವೇ ಮಾಡಬಹುದು.
ಕೇಂದ್ರ ಸರಕಾರ ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡಲಾರಂಭಿಸಿದಂದಿನಿಂದ ದೇಶದಲ್ಲಿ ಡಿಜಿಟಲ್ ವಹಿವಾಟಿನಲ್ಲಿ ಅತ್ಯಧಿಕ ಬೆಳವಣಿಗೆ ಕಂಡು ಬಂದಿದೆ. 5 ವರ್ಷಗಳ ಹಿಂದೆ ಇದ್ದ ವಹಿವಾಟಿಗೆ ಹೋಲಿಸಿದ್ದೇ ಆದಲ್ಲಿ ಈಗಿನ ಡಿಜಿಟಲ್ ವಹಿವಾಟು ಮತ್ತು ವ್ಯವಹಾರ ಮೊತ್ತದಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಗೂಗಲ್ ಪೇ, ಪೇಟಿಎಂ, ಫೋನ್ ಪೇ ಮತ್ತು ಭೀಮ್‌ನಂತಹ ಯುಪಿಐ ಫ್ಲಾಟ್‌ಫಾರ್ಮ್ಗಳಲ್ಲಿ ತಿಂಗಳಿಗೆ ಸರಾಸರಿ 122 ಕೋಟಿ ವಹಿವಾಟುಗಳು ನಡೆಯುತ್ತಿದ್ದರೆ ಕಳೆದ 5 ವರ್ಷದ ಅವಧಿಯಲ್ಲಿ ಶೇ. 550ರಷ್ಟು ಹೆಚ್ಚಾಗಿದೆ. ಅಂದರೆ 2016-17ರಲ್ಲಿ ಡಿಜಿಟಲ್ ವಹಿವಾಟು 1,004 ಕೋಟಿಯಾಗಿದ್ದರೆ 2020-21ರಲ್ಲಿ 5.554 ಕೋಟಿ ತಲುಪಿದೆ. 2020ರ ಎಪ್ರಿಲ್-ಮೇ ತಿಂಗಳಲ್ಲಿ ನಡೆದ ವ್ಯವಹಾರಕ್ಕೆ ಹೋಲಿಸಿದರೆ 2021ರ ಈ ಅವಧಿಯಲ್ಲಿ ಇದು ಶೇ.100ರಷ್ಟು ಹೆಚ್ಚಾಗಿದೆ.
ಎಷ್ಟಿದೆ ಯುಪಿಐ ವ್ಯವಹಾರ?
2020ರ ಮಾರ್ಚ್‌ನಲ್ಲಿ ಯುಪಿಐ ವಹಿವಾಟಿನ ಮೂಲಕ ಒಟ್ಟು 2.06 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದ್ದರೆ 2021ರ ಮಾರ್ಚ್‌ನಲ್ಲಿ ಇದು 5.04 ಲಕ್ಷ ಕೋಟಿ ರೂ.ಗಳಷ್ಟಾಗಿತ್ತು. ಇನ್ನು 2020ರ ಎಪ್ರಿಲ್‌ನಲ್ಲಿ 1.51ಲ. ಕೋ. ರೂ. ಗಳಾಗಿದ್ದರೆ 2021ರ ಎಪ್ರಿಲ್‌ನಲ್ಲಿ 4.93 ಲ.ಕೋ. ರೂ. ಹಾಗೂ 2020ರ ಮೇಯಲ್ಲಿ 2.18 ಲ.ಕೋ. ರೂ. ವ್ಯವಹಾರ ನಡೆದಿದ್ದರೆ 2021ರ ಮೇಯಲ್ಲಿ 4.90ಲ.ಕೋ. ರೂ. ವ್ಯವಹಾರ ನಡೆದಿದೆ. ಡಿಜಿಟಲ್ ತಂತ್ರಜ್ಞಾ ಕ್ಷೇತ್ರದಲ್ಲಿ ಕ್ಷಿಪ್ರಗತಿಯ ಬದಲಾವಣೆಗಳಾಗುತ್ತಿದ್ದು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಇದು ದೇಶದಲ್ಲಿಯೂ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ. ಕೆಲವೊಂದು ಆಧುನಿಕ ತಂತ್ರಜ್ಞಾನ ವ್ಯವಸ್ಥೆಗಳು ಈಗಾಗಲೇ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಂಡಿದ್ದು ಈ ತಂತ್ರಜ್ಞಾನಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನು ಕಂಡು ವಿಶ್ವದ ಬಹುತೇಕ ದೇಶಗಳಲ್ಲಿ ಜಾರಿಗೆ ಬರುವ ನಿರೀಕ್ಷೆ ಇದ್ದು ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಡಿಜಿಟಲ್ ವಹಿವಾಟಿನ ಸಂಖ್ಯೆ ಮತ್ತು ವ್ಯವಹಾರದ ಮೊತ್ತ ಭಾರೀ ಏರಿಕೆಯನ್ನು ಕಾಣಲಿದೆ ಎಂದು ಅಂದಾಜಿಸಲಾಗಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿನ ಆಧುನಿಕ ಬದಲಾವಣೆಗಳು ಮತ್ತು ಭಾರತದಲ್ಲಿ ಅವುಗಳ ಸ್ಥಿತಿಗತಿ ಕುರಿತಾಗಿನ ಸ್ಥೂಲ ಚಿತ್ರಣ ಇಲ್ಲಿದೆ.
ಬಯೋಮೆಟ್ರಿಕ್ ದೃಢೀಕರಣ
ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಬಯೋಮೆಟ್ರಿಕ್ ತಂತ್ರಜ್ಞಾನ ಹೊಸ ವಿಷಯವಲ್ಲ. ನಾವು ಈಗಾಗಲೇ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗ್ಳನ್ನು ಬೆರಳಚ್ಚು ನೀಡಿ ಉಪಯೋಗಿಸುತ್ತಿದ್ದೇವೆ. ಇದೇ ತಂತ್ರಜ್ಞಾನ ವನ್ನು ಪಾವತಿ ಜಗತ್ತಿನಲ್ಲಿ ಬಳಸಲಾಗುತ್ತಿದೆ. ಬಯೋಮೆಟ್ರಿಕ್ ವಿಧಾನದಿಂದ ಎರಡು ಉಪಯೋಗ ಏನೆಂದರೆ ನೀವು ಪಿನ್ ನೆನಪಿಡುವ ಅಗತ್ಯವಿಲ್ಲ. ಎರಡನೆಯದಾಗಿ ನಿಮ್ಮ ಹೊರತು ಬೇರೆ ಯಾರು ಬಳಸಲು ಸಾಧ್ಯವಿಲ್ಲ. ವಂಚನೆ ಕಷ್ಟಸಾಧ್ಯವಾಗಿದ್ದು ಹೆಚ್ಚು ಸುರಕ್ಷಿತವಾಗಿದೆ. ಪ್ರಸ್ತುತ ಭಾರತದಲ್ಲಿ ಬಯೋಮೆಟ್ರಿಕ್ ತಂತ್ರಜ್ಞಾನ ಬಳಸುತ್ತಿಲ್ಲ. ಅದರ ಬದಲು ನಾವು ಪಿನ್ ನಮೂದಿಸಿ ಹಣವನ್ನು ಪಡೆಯುತ್ತೇವೆ. ಆದರೆ ಯುಕೆಯ ಕೆಲವು ಬ್ಯಾಂಕ್‌ಗಳು ಬಯೋಮೆಟ್ರಿಕ್ ಕಾರ್ಡ್‌ನ್ನು ಟ್ರಯಲ್ ಮೋಡ್‌ನಲ್ಲಿ ನೀಡುತ್ತಿವೆ. ದೊಡ್ಡ ಕಂಪೆನಿಗಳು ಈ ಹೊಸ ವಿಧಾ ನದ ಅಳವಡಿಕೆಗೆ ಉತ್ಸುಕವಾಗಿದ್ದು ಶೀಘ್ರದಲ್ಲಿಯೇ ಈ ತಂತ್ರ ಜ್ಞಾನ ಭಾರತ ಸಹಿತ ಜಗತ್ತಿನಾದ್ಯಂತ ಜಾಲ್ತಿಗೆ ಬರುವ ನಿರೀಕ್ಷೆ ಇದೆ.
ಧ್ವನಿ ಗುರುತಿಸುವಿಕೆ
ಈಗ ಸದ್ಯ ಚಾಲ್ತಿಯಲ್ಲಿರುವ ವರ್ಚುವಲ್ ಅಸಿಸ್ಟೆಂಟ್ ಅಲೆಕ್ಸಾದ ಬಗ್ಗೆ ನಿಮಗೆಲ್ಲ ತಿಳಿದಿರಬಹುದು. ನಮ್ಮ ಧ್ವನಿ ಕೇಳಿ ಅದು ಪ್ರತಿಕ್ರಿಯಿಸುತ್ತದೆ. ನಾವು ಹಾಡಲು ಹೇಳಿದರೆ ಅದು ಹಾಡುತ್ತದೆ, ಜೋಕ್ ಕೇಳಿದರೆ ಜೋಕ್ ಹೇಳುತ್ತದೆ, ಏನಾದರೂ ಮಾಹಿತಿಯನ್ನು ಕೇಳಿದರೂ ಅದು ನಿಮಗೆ ನೀಡುತ್ತದೆ. ಅದೇ ರೀತಿ ಹಣಕಾಸು ವ್ಯವಹಾರಗಳಲ್ಲಿ ನಮ್ಮ ಧ್ವನಿಯನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈ ವಿಶಿಷ್ಟ ತಂತ್ರಜ್ಞಾನವನ್ನು ಬಳಸಲು ಅಮೆಜಾನ್ ಮತ್ತು ಗೂಗಲ್ ಪೇ ನಂಥ ದೊಡ್ಡ ಕಂಪೆನಿಗಳು ಲಕ್ಷ್ಯ ಹರಿಸಿವೆ. ಈ ಪ್ರಯೋಗ ಯಶಸ್ವಿಯಾದರೆ ತುಂಬಾ ಪ್ರಯೋಜನಕಾರಿ ಮಾತ್ರವಲ್ಲದೆ ಅತ್ಯಂತ ಕ್ಷಿಪ್ರಗತಿಯಲ್ಲಿ ನೀವು ವ್ಯವಹಾರವನ್ನು ನಡೆಸಬಹುದಾಗಿದೆ. ಭಾರತದ ಮಟ್ಟಿಗೆ “ಧ್ವನಿ ಪಾವತಿ’ ವಿಧಾನ ದೂರದ ಕನಸು. ಈಗಾಗಲೇ ಈ ವಿಧಾನವನ್ನು ಅಮೆರಿಕದಲ್ಲಿ ಬಳಸಲಾಗುತ್ತಿದೆ. ಆದರೆ ಈ ವಿಧಾನದಲ್ಲಿ ಭದ್ರತೆ ಮತ್ತು ಗೌಪ್ಯತೆ ಕಾಪಾಡುವುದು ದೊಡ್ಡ ಸವಾಲೇ ಸರಿ.
ಫೇಸ್ ರೆಕಗ್ನಿಷನ್( ಮುಖ ಗುರುತಿಸುವಿಕೆ)
ಈ ತಂತ್ರಜ್ಞಾನದಲ್ಲಿ ನಿಮ್ಮ ಮುಖವೇ ನಿಮ್ಮ ಅಕೌಂಟ್ ಮತ್ತು ಪಾಸ್‌ವರ್ಡ್ ಇದ್ದ ಹಾಗೆ. ಈ ರೀತಿಯ ಪಾವತಿಯಿಂದ ನೀವು ಕಾರ್ಡ್ ಅಥವಾ ಮೊಬೈಲ್ ಅನ್ನು ಬಳಸುವ ಆವಶ್ಯಕತೆಯಿರುವುದಿಲ್ಲ. ಚೀನ ಈ ಪಾವತಿ ವಿಧಾನವನ್ನು ಅಳವಡಿಸಿಕೊಂಡಿದ್ದು ಇದರಲ್ಲಿ ಗ್ರಾಹಕ ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರದ ಮುಂದೆ ನಿಲ್ಲಬೇಕು. ಯಂತ್ರಕ್ಕೆ ಕೆಮರಾ ಅಳವಡಿಸಲಾಗಿದ್ದು ಅದರಲ್ಲಿ ಗ್ರಾಹಕರ ಚಿತ್ರ ತೆಗೆದುಕೊಳ್ಳಲಾಗುತ್ತದೆ. ಆ ಯಂತ್ರ ಅವರನ್ನು ಗುರುತಿಸಿದ ಅಅನಂತರ ಹಣ ವರ್ಗಾವಣೆಯಾಗುತ್ತದೆ. ಇದು ತುಂಬಾ ಸುಲಭ ಮತ್ತು ವೇಗದ ವಿಧಾನವಾಗಿದೆ. ಮುಖ ಗುರುತಿಸುವಿಕೆ ತಂತ್ರಜ್ಞಾನ ಇನ್ನೂ ಭಾರತಕ್ಕೆ ಬಂದಿಲ್ಲ. ನಮ್ಮ ಆಧಾರ್ ಕಾರ್ಡ್ ಬೆರಳಚ್ಚು, ಮುಖವನ್ನು ಗುರುತಿಸುವಿಕೆ ಹೀಗೆ ಹಲವು ತಂತ್ರಜ್ಞಾನಗಳನ್ನು ಒಳಗೊಂಡಿವೆ. ಅತೀ ಶೀಘ್ರದಲ್ಲಿಯೇ ಫಿನೆrಕ್ ಕಂಪೆನಿ ಈ ಡಾಟಾಗಳನ್ನು ಬಳಸಿಕೊಂಡು ಪಾವತಿಗೆ ಸುಲಭ ಮತ್ತು ಸುರಕ್ಷಿತ ಮಾರ್ಗವನ್ನು ಕಂಡುಕೊಳ್ಳಲು ಮುಂದಾಗಿದೆ.
ಟ್ಯಾಪ್ ಆ್ಯಂಡ್ ಗೋ
ಈಗ ಕಾರ್ಡ್ ಅನ್ನು ಮೊದಲು ಪಿಒಎಸ್ ಯಂತ್ರದಲ್ಲಿ ಸ್ವಾéಪ್ ಮಾಡಿ ಪಿನ್ ನಮೂದಿಸುವ ಮೂಲಕ ಧೃಢೀಕರಿಸಿದರೆ ಪಾವತಿ ಪ್ರಕ್ರಿಯೆ ಮುಗಿದಿರುತ್ತದೆ. ಆದರೆ ಮುಂದಿನ ದಿನಗಳಲ್ಲಿ ನೀವು ಯಂತ್ರಕ್ಕೆ ಸ್ವಾéಪ್ ಮಾಡುವ ಅಗತ್ಯ ಇರಲಾರದು. ಬದಲಿಗೆ ಕಾರ್ಡ್ ಅನ್ನು ಯಂತ್ರಕ್ಕೆ ಟ್ಯಾಪ್ ಮಾಡಿ ಅಅನಂತರ ನೀವು ಖರೀದಿಸಿದ ವಸ್ತುಗಳನ್ನು ತೆಗೆದುಕೊಂಡು ಮನೆಗೆ ಹೋಗಿ. ಬಿಲ್ ಪಾವತಿಯ ಕೆಲಸವನ್ನು ಕಾರ್ಡ್‌ನಲ್ಲಿ ಅಳವಡಿಸಲಾಗಿರುವ ಇಎಂವಿ ಚಿಪ್ ಮತ್ತು ಆರ್‌ಎಫ್ಐಡಿ ಆ್ಯಂಟೆನಾ ವ್ಯವಸ್ಥಿತವಾಗಿ ಪೂರ್ಣಗೊಳಿಸುತ್ತದೆ. ಸದ್ಯ ಈ ಪಾವತಿ ವಿಧಾನವು ಸಿಂಗಾಪುರ ಮತ್ತು ಉತ್ತರ ಕೊರಿಯಾದಲ್ಲಿ ಚಾಲ್ತಿಯಲ್ಲಿದ್ದು ಜನಪ್ರಿಯಗೊಳ್ಳುತ್ತಿದೆ. ಭಾರತದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಟ್ಯಾಪ್ ಆ್ಯಂಡ್ ಗೋ ಪಾವತಿಗಳಿಗೆ ವೀಸಾ, ಮಾಸ್ಟರ್ ಕಾರ್ಡ್ ಮತ್ತು ಎನ್‌ಪಿಸಿಐಗೆ ಹಸುರು ನಿಶಾನೆ ತೋರಿದೆ. ಈ ತಂತ್ರಜ್ಞಾನವನ್ನು ಅನೇಕ ಶಾಪಿಂಗ್ ಮಾಲ್‌ಗಳಲ್ಲಿ ಬಳಸಲಾಗುತ್ತಿದೆ. ಅದಲ್ಲದೆ ಅನೇಕ ಬ್ಯಾಂಕ್‌ಗಳು ಪ್ರಸ್ತುತ ಟ್ಯಾಪ್ ಪಾವತಿಗೆ 2,000 ರೂ. ಗಳವರೆಗೆ ಮಿತಿಯನ್ನು ನಿಗದಿಪಡಿಸಿದೆ.
ಅದೃಶ್ಯ ಪಾವತಿ
ಡಿಜಿಟಲ್ ಪಾವತಿಗಿಂತ ಒಂದು ಹೆಜ್ಜೆ ಮುಂದಿದೆ ಈ ಅದೃಶ್ಯ ಪಾವತಿ. ಇದರಲ್ಲಿ ನಾವು ಯಾವುದೇ ಸರಕು ಮತ್ತು ಸೇವೆ ಗಳಿಗೆ ತ್ವರಿತ ಪಾವತಿ ಮಾಡಬೇಕಾಗಿಲ್ಲ. ನಿಗದಿತ ಸಮಯದೊಳಗೆ ನಿಮ್ಮ ಖಾತೆಯಿಂದ ಹಣ ಕಡಿತಗೊಳಿಸಲಾಗುತ್ತದೆ. ಇದಕ್ಕೆ ನೀವು ಮುಂಚಿತವಾಗಿ ಒಪ್ಪಿಗೆ ನೀಡರಬೇಕಾಗುತ್ತದೆ. ಈ ರೀತಿಯ ಪಾವತಿಗಳನ್ನು ಕ್ಯಾಬ್ ಸೇವಾ ಕಂಪೆನಿ ಉಬರ್ ಈಗಾಗಲೇ ಹಲವಾರು ದೇಶಗಳಲ್ಲಿ ಬಳಸುತ್ತಿದೆ. ಅದೃಶ್ಯ ಪಾವತಿಯನ್ನು ಭಾರತದಲ್ಲಿ ಭಾಗಶಃ ಬಳಸಲಾಗುತ್ತಿದೆ. ಆದರೂ ಇದು ಅಷ್ಟೊಂದು ಸುರಕ್ಷಿತವಲ್ಲ ಎಂಬ ಆರೋಪದ ಸಹಿತ ಅನೇಕ ಸವಾಲುಗಳನ್ನು ಹೊಂದಿರುವುದರಿಂದ ದೇಶದಲ್ಲಿ ಅಷ್ಟೊಂದು ಯಶಸ್ಸು ಗಳಿಸಲಾರದು ಎಂಬುದು ತಜ್ಞರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.