150 ಮೀ. ಅಂತರದಲ್ಲಿತ್ತು ಭಾರತ-ಚೀನ ಸೇನೆ! ಉಪಗ್ರಹಗಳು ಕ್ಲಿಕ್ಕಿಸಿದ್ದ ಫೋಟೋಗಳಿಂದ ಸಾಬೀತು
Team Udayavani, Jun 30, 2021, 8:30 AM IST
ಹೊಸದಿಲ್ಲಿ: ಪೂರ್ವ ಲಡಾಖ್ನ ಪ್ಯಾಂಗಾಗ್ನಲ್ಲಿ ಫೆಬ್ರವರಿ 11ರಂದು ಭಾರತ ಮತ್ತು ಚೀನ ಸೇನೆಯು ತಮ್ಮ ಸೇನಾಪಡೆಗಳ ವಾಪಸಾತಿ ಪ್ರಕ್ರಿಯೆ ಆರಂಭಿಸಿತ್ತು. ಆ ಸಮಯದಲ್ಲಿ ಉಭಯ ದೇಶಗಳ ಯೋಧರ ನಡುವೆ ಇದ್ದದ್ದು ಕೇವಲ 150 ಮೀಟರ್ ಗಳ ಅಂತರ!
ಇದನ್ನು ಅಂದು ಉಪಗ್ರಹಗಳು ಕ್ಲಿಕ್ಕಿಸಿದ್ದ ಫೋಟೋಗಳೇ ಸಾಬೀತು ಪಡಿಸಿವೆ. ಈ ಫೋಟೋಗಳು ಆ ಸಮಯದಲ್ಲಿ ಎರಡೂ ದೇಶಗಳ ನಡುವಿನ ಸಂಘರ್ಷ ಹಾಗೂ ಉದ್ವಿಗ್ನತೆಯ ತೀವ್ರತೆಗೆ ಕನ್ನಡಿ ಹಿಡಿದಿವೆ. ಇತ್ತೀಚೆಗಷ್ಟೇ ಈ ಫೋಟೋಗಳನ್ನು ಗೂಗಲ್ ಅರ್ತ್ ಪ್ರೋನಲ್ಲಿ ಅಪ್ ಡೇಟ್ ಮಾಡಲಾಗಿದೆ.
ದಕ್ಷಿಣ ಪಾಂಗಾಂಗ್ನ ರೆಜಾಂಗ್ ಲಾ ಪ್ರದೇಶದಲ್ಲಿ 17 ಸಾವಿರ ಅಡಿ ಎತ್ತರದಲ್ಲಿ ಎರಡೂ ದೇಶಗಳ ಸೇನೆಗಳು ನಿರ್ಮಿಸಿದ್ದ ಟೆಂಟ್ಗಳು, ಮನೆಗಳು ಈ ಫೋಟೋಗಳಲ್ಲಿ ಕಾಣಿಸುತ್ತವೆ. ಅಲ್ಲದೆ, ಉಭಯ ದೇಶಗಳ ಯೋಧರು ಪರಸ್ಪರ 150 ಮೀಟರ್ ನಷ್ಟು ದೂರದಲ್ಲಿರುವುದನ್ನೂ ಇವು ತೋರಿಸಿವೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಅಂದರೆ ಕೈಲಾಸ ಶ್ರೇಣಿಯ ವ್ಯಾಪ್ತಿಯಲ್ಲಿ ಎರಡೂ ದೇಶಗಳ ಟ್ಯಾಂಕ್ ಗಳು 50 ಮೀಟರ್ ಅಂತರದೊಳಗೆ ಇದ್ದಿದ್ದೂ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.