ಫರ್ನೇಸ್ ಆಯಿಲ್ ಮಿಕ್ಸಿಂಗ್ ಅಡ್ಡೆಯ ಮೇಲೆ ಪೊಲೀಸರ ದಾಳಿ : ನಾಲ್ವರು ವಶಕ್ಕೆ
Team Udayavani, Jun 30, 2021, 12:21 PM IST
ಕಡಬ : ಅಕ್ರಮವಾಗಿ ಟ್ಯಾಂಕರ್ ಗಳಿಂದ ಫರ್ನೇಸ್ ಆಯಿಲ್ ಗಳನ್ನು ಕಳ್ಳತನ ಮಾಡಿ ದಾಸ್ತಾನು ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ವಶಪಡಿಸಿಕೊಂಡ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ನಡೆದಿದೆ.
ಫರ್ನೇಸ್ ಆಯಿಲ್ ಗಳನ್ನು ಕಳ್ಳತನ ಮಾಡಿ ದಾಸ್ತಾನು ಮಾಡಿರುವುದಾಗಿ ಬಂದ ಖಚಿತ ಮಾಹಿತಿ ಪಡೆದ ಪುತ್ತೂರು ನಗರ ಠಾಣಾ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸರು ಕಡಬ ತಹಶೀಲ್ದಾರ್ ಮತ್ತು ನೆಲ್ಯಾಡಿ ಗಣಿ ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಇವರನ್ನೊಳಗೊಂಡ ತಂಡ ದಾಳಿ ನಡೆಸಿದ್ದಾರೆ.
ವೇಳೆ ಎರಡೂ ಟ್ಯಾಂಕರ್ ಗಳು ನಿಂತುಕೊಂಡಿದ್ದು , ಜೊತೆಗೆ 4 ಜನರು ಟ್ಯಾಂಕರ್ ನಿಂದ ಪಂಪು ಮೂಲಕ ಟ್ಯಾಂಕರ್ ಗೆ ಮತ್ತು ನೆಲ ಟ್ಯಾಂಕ್ ಗಳಿಂದ ಪಂಪು ಮೂಲಕ ಟ್ಯಾಂಕರ್ ಗೆ ಫರ್ನೇಸ್ ಆಯಿಲನ್ನು ಲೋಡ್ ಅನ್ ಲೋಡ್ ಮಾಡುತ್ತಿದ್ದು, ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದ್ದಾರೆ.
ತಕ್ಷಣ ಪೊಲೀಸರು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು, ರಘುನಾಥನ್, ಮುತ್ತು ಪಾಂಡಿ , ಜಿ ದಾಸ್ (37), ಸಿಂಗರಾಜ್ (42) , ಎಸ್ ಕಾರ್ತಿ (27) , ಸೆಲ್ವರಾಜ್ (60) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿನಿ ದೀಕ್ಷಾಳ ಮನೆಗೆ ಶಾಸಕ, ಬಿಇಓ ಭೇಟಿ: ಹೊಸ ಮನೆ ನಿರ್ಮಾಣದ ಭರವಸೆ
ಮಂಗಳೂರು- ಬೆಂಗಳೂರು ಮಾರ್ಗವಾಗಿ ಸಾಗುವ ಕೆಲವು ಫರ್ನೆಸ್ ಆಯಿಲ್ ಟ್ಯಾಂಕರ್ ಗಳ ಚಾಲಕರೊಂದಿಗೆ ಹಣಕ್ಕಾಗಿ ಒಪ್ಪಂದ ಮಾಡಿಕೊಂಡು ಟ್ಯಾಂಕರ್ ಗಳನ್ನು ತಮ್ಮ ಸ್ವ ಸ್ಥಳಕ್ಕೆ ಕರೆಯಿಸಿಕೊಂಡು ಅವುಗಳಿಂದ ಸುಮಾರು 50 ರಿಂದ 200 ಲೀಟರ್ ವರೆಗೆ ಆಯಿಲನ್ನು ಕಳ್ಳತನ ಮಾಡಿ ಅವರ ಸ್ಥಳದಲ್ಲಿರುವ ಭೂಗತ ಟ್ಯಾಂಕ್ ಗಳಲ್ಲಿ ಸಂಗ್ರಹಿಸಿ ಹೆಚ್ಚು ಸಂಗ್ರಹಣೆ ಆದ ನಂತರ ಮಾಲಿಕರ ಖಾಲಿ ಟ್ಯಾಂಕರ್ ಗಳಲ್ಲಿ ತುಂಬಿಸಿ ಇತರೇ ಸ್ಥಳಗಳಿಗೆ ಸೂಕ್ತ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುವುದು ತಿಳಿದುಬಂದಿದೆ.
ಮಂಗಳೂರು- ಬೆಂಗಳೂರು ಮಾರ್ಗವಾಗಿ ಸಾಗುವ ಫರ್ನೆಸ್ ಆಯಿಲ್ ಟ್ಯಾಂಕರ್ ಗಳ ಚಾಲಕರಿಗೆ ಹಣವನ್ನು ನೀಡಿ ಮಾಲೀಕರ ಗಮನಕ್ಕೆ ತರದೇ ಮಾಲಿಕರಿಗೆ ವಂಚಿಸಿ ನಷ್ಟವನ್ನುಂಟು ಮಾಡಿರುವುದಲ್ಲದೇ, ಕಳ್ಳತನ ಮಾಡಿ ಸಂಗ್ರಹಿಸಿಟ್ಟು ಫರ್ನೇಸ್ ಆಯಿಲನ್ನು ಟ್ಯಾಂಕರ್ ಮೂಲಕ ಚೆನ್ನೈ ಕಡೆಗೆ ಸಾಗಾಟ ಮಾಡುವುದಾಗಿ ಇದನ್ನು ಮುತ್ತು ಪಾಂಡಿ ಮತ್ತು ರಘನಾಥನ್ ಎಂಬಿಬ್ಬರು ನಡೆಸಿರುವುದಾಗಿ ತಿಳಿಸಿದ್ದಾರೆ.
ಬಂಧಿತರಿಂದ ರೂ. 35.21 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.