ನಾಳೆಯಿಂದ ಹೀರೋ ಮೊಟೊಕಾರ್ಪ್ ವಾಹನಗಳು ದುಬಾರಿ..! ಇಲ್ಲಿದೆ ಮಾಹಿತಿ
Team Udayavani, Jun 30, 2021, 3:50 PM IST
ನವ ದೆಹಲಿ : ಕೋವಿಡ್ ಲಾಕ್ ಡೌನ್ ನ ಕಾರಣದಿಂದಾಗಿ ವಾಹನಗಳ ಉತ್ಪಾದನೆ ಹಾಗೂ ಮಾರಾಟದ ಮೇಲೆ ತುಂಬಾ ಪರಿಣಾಮ ಬೀರಿದೆ. ಕೋವಿಡ್ ನ ಕಾರನದಿಂದಾದಗಿ ವ್ಯಾಪಾರ ಹಾಗೂ ಮಾರಾಟದ ವಹಿವಾಟಿನ ಮೇಲೆ ಭಾರಿ ಪ್ರಮಾಣದಲ್ಲಿ ಆಘಾತ ಉಂಟಾಗಿದೆ ಎಂಬ ಕಾರಣಕ್ಕೆ ವಾಹನಗಳ ಉತ್ಪಾದಕ ಸಂಸ್ಥೆಗಳು ಈಗ ಬೆಲೆ ಏರಿಕೆಗೆ ಮೊರೆ ಹೋಗಿವೆ.
ಹೌದು, ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಈ ಹಿಂದೆ ಘೋಷಿಸಿತ್ತು. ಈಗ ಹೀರೋ ಮೊಟೊಕಾರ್ಪ್ ನ ಸರದಿ.
ಇದನ್ನೂ ಓದಿ : ಕೋವಿಡ್ – ಮೃತಪಟ್ಟ ಕುಟುಂಬ ಸದಸ್ಯರಿಗೆ ಪರಿಹಾರ: 6 ವಾರಗಳಲ್ಲಿ ಮಾರ್ಗಸೂಚಿ ರೂಪಿಸಿ: ಸುಪ್ರೀಂ
ನಾಳೆ ಅಂದರೆ ಜುಲೈ 1 ರಿಂದ ಭಾರತದಾದ್ಯಂತ ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ತನ್ನ ಬೈಕ್ ಸ್ಕೂಟರ್ ಗಳ ಮೇಲೆ ಸುಮಾರು 3,000ಗಳಷ್ಟು ಹೆಚ್ಚಿಸುವುದಾಗಿ ಕಂಪನಿ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಕೋವಿಡ್ ಹಾಗೂ ಕಚ್ಚಾ ವಸ್ತುಗಳು ದುಬಾರಿಯಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆ :
ಕೋವಿಡ್ ಬಿಕ್ಕಟ್ಟು ಹಾಗೂ ಕಚ್ಚಾ ವಸ್ತುಗಳು ಮತ್ತು ಸರಕುಗಳ ಬೆಲೆಯಲ್ಲಿ ನಿರಂತರ ಹೆಚ್ಚಳ ಕಂಡು ಬಂದ ಹಿನ್ನೆಲೆಯಲ್ಲಿ ಸ್ಕೂಟರ್, ಬೈಕ್ ಗಳ ಬೆಲೆಯಲ್ಲಿಯೂ ಹೆಚ್ಚಳ ಮಾಡಬೇಕಾದ ಅನಿವಾರ್ಯದ ಸ್ಥಿತಿಯಲ್ಲಿ ಕಂಪೆನಿ ಇದೆ. ಹಾಗಾಗಿ ತನ್ನ ಉತ್ಪನ್ನಗಳ ಮೇಲೆ ಮೂರು ಸಾವಿರ ದ ತನಕ ಬೆಲೆ ಏರಿಕೆ ಮಾಡುವುದಾಗಿ ಹೇಳಿಕೊಂಡಿದೆ
ಮಾಸಿಕ ಮಾರಾಟದಲ್ಲಿ 50.83 ರಷ್ಟು ಕುಸಿತ :
ಇನ್ನು, ಮೇ 2021 ರಲ್ಲಿ, ಕಂಪನಿಯ ಮಾಸಿಕ ಮಾರಾಟವು 50.83 ಪ್ರತಿಶತದಷ್ಟು ಕುಸಿದಿದೆ. ಇದೀಗ ಮತ್ತೆ ಬೆಲೆ ಏರಿಕೆ ಮಾಡಿರುವುದು ಮಾರಾಟದ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : ಯೂರೋ ಕಪ್ ಫುಟ್‌ಬಾಲ್; ವಿಶ್ವ ಚಾಂಪಿಯನ್ನರಿಗೆ ಸೋಲುಣಿಸಿದ ಸ್ವಿಟ್ಸರ್ಲೆಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.