ಕೋವಿಡ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯಿರಿ
Team Udayavani, Jun 30, 2021, 6:45 PM IST
ಬೆಂಗಳೂರು: ಮನೆಯಲ್ಲಿ ಆರೈಕೆಮಾಡಿಕೊಳ್ಳದೆ ಕೋವಿಡ್ ಸೆಂಟರ್‌ಗೆಬಂದು ಚಿಕಿತ್ಸೆ ಪಡೆಯುವಂತೆ ಕೊರೊನಾಸೋಂಕಿತರಲ್ಲಿ ವಸತಿ ಸಚಿವ ವಿ.ಸೋಮಣ್ಣಮನವಿ ಮಾಡಿದರು.
ಗೋವಿಂದರಾಜ ನಗರ ವಿಧಾನಸಭಾಕ್ಷೇತ್ರದ ಡಾ.ರಾಜ್‌ಕುಮಾರ್ ವಾರ್ಡ್‌ವ್ಯಾಪ್ತಿಯ ಕೆಂಪೇಗೌಡ ಸಮುದಾಯಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಬಡಕುಟುಂಬಗಳಿಗೆ ಆಹಾರಪದಾರ್ಥ ವಿತರಿಸಿ ಮಾತನಾಡಿದರು.ಕೋವಿಡ್ ಸೋಂಕಿನ ಬಗ್ಗೆ ಮುಚ್ಚಿಟ್ಟರೆನಿಮ್ಮ ಮನೆಯಲ್ಲಿರುವ ಕುಟುಂಬಸದಸ್ಯರೆಲ್ಲರೂ ಇದರ ಪರಿಣಾಮವನ್ನುಎದುರಿಸಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿಮುಜುಗರಕ್ಕೊಳಗಾಗಿದೆ ಧೈರ್ಯದಿಂದರೋಗವನ್ನು ಗುಣಪಡಿಸಿಕೊಳ್ಳಿ ಎಂದುಸಲಹೆ ನೀಡಿದರು.
ಕ್ಷೇತ್ರದಲ್ಲಿ ಸುಮಾರು 1ಲಕ್ಷ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನುವಿತರಿಸುವ ಯೋಜನೆ ರೂಪಿಸಲಾಗಿದೆ.ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದ್ದುಇನ್ನೂ ಹಂತಹಂತವಾಗಿ ವಿತರಿಸುವಕಾರ್ಯವನ್ನು ಮುಂದುವರಿಸಲಾಗುತ್ತದೆಎಂದು ಹೇಳಿದರು.ಈಗಾಗಲೇ ಶೇ.70ರಿಂದ 78ರಷ್ಟುವ್ಯಾಕ್ಸಿನೇಷನ್ ಕ್ಷೇತ್ರದಲ್ಲಿ ನೀಡಲಾಗಿದೆ.18ರಿಂದ 44 ವರ್ಷದೊಳಗಿನವರಿಗೆಸಾವಿರಾರು ಸಂಖ್ಯೆಯಲ್ಲಿ ವ್ಯಾಕ್ಸಿನೇಷನ್‌ಹಾಕಲಾಗಿದ್ದು ಉದಾಸೀನ ಮಾಡದೆಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆಜನರಲ್ಲಿ ಮನವಿ ಮಾಡಿದರು.
ಪಾಲಿಕೆ ಮಾಜಿ ಸದಸ್ಯರಾದರೂಪಾಲಿಂಗೇಶ್ವರ ಮಾತನಾಡಿ, ಲಾಕ್‌ಡೌನ್ ಯಿಂದ ತೊಂದರೆಗೊಳಗಾದವರಿಗೆಆಹಾರದ ಕಿಟ್ ವಿತರಣೆಮಾಡುತ್ತಿರುವುದು ಸಚಿವ ಸೋಮಣ್ಣಅವರು ಬಡವರ ಮೇಲಿನ ಕಾಳಜಿತೋರಿಸುತ್ತದೆ ಎಂದರು.ರಾಜ್ಯ ಬಿಜೆಪಿಯುವ ಮೋರ್ಚಾ ಅಧ್ಯಕ್ಷ ಡಾ.ಅರುಣ್‌ಸೋಮಣ್ಣ ಗೋವಿಂದರಾಜನಗರ ಕ್ಷೇತ್ರದಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್‌ಗೌಡಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.