ಅಂಗಾಂಶ ಬಾಳೆಯಿಂದ ರೈತನ ಬಾಳು ಬಂಗಾರ


Team Udayavani, Jun 30, 2021, 7:02 PM IST

bangalore news

ನೆಲಮಂಗಲ:  ಸರ್ಕಾರದ ಯೋಜನೆ ಲಾಭ ಪಡೆದುಕೊಳ್ಳದೇ ಕೃಷಿಯಲ್ಲಿ ಲಾಭವಿಲ್ಲ ಎಂಬ ರೈತ‌ರಿಗೆ ನರೇಗಾ ಯೋಜನೆಯಲ್ಲಿ ಅಂಗಾಂಶ ಬಾಳೆ ಬೆಳೆದ ಬಹಳಷ್ಟು ರೈತರು ಮಾದರಿಯಾಗುವುದು ದುಶ್ಲಾಘನೀಯ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಬಹಳಷ್ಟು ರೈತರು ಅಂಗಾಂಶ ಬಾಳೆಯನ್ನು ¸ಬೆಳೆಯಲು ತೋಟಗಾರಿಕೆ ಅಧಿಕಾರಿಗಳ  ‌ಸಹಕಾರದಿಂದ ‌ ಮಹಾತ್ಮ ಗಾಂಧಿ ರಾಷ್ಟ್ರೀಯಉದ್ಯೋಗ ಖಾತರಿ ಯೋಜನೆಯಡಿ ಗುಂಡಿ ತೆಗೆಯಲು, ಗಿಡ ನೆಡೆಸಲು, ಗೊಬ್ಬರ ಸೇರಿದಂತೆ ವಿವಿಧÖ ‌ಂತ¨ ‌ ¸ ೆÙ ೆಯ ಪೋಷO ೆಗ ೆ ಹಣವನ್ನು ಬಳಕೆಮಾಡಿಕೊಂv ‌ ರೈñ ‌ರು, ಅತಿ ಕಡಿಮೆ ಬಂಡವಾಳದಲ್ಲಿ ಅಂಗಾಂಶ ಬೆಳೆ ಬೆಳೆದು ಮಾದರಿಯಾಗುವ  ‌ಜತೆ ಲಾಭವನ್ನು ಪಡೆದು ಕೊಂಡಿದ್ದಾರೆ.

ಉಚಿತವಾಗಿ ತೋಟ: ಅಂಗಾಂಶ ಬಾಳೆ, ತೆಂಗು,ಅಡಿಕೆ, ಗೇರು, ಕಾಳುಮೆಣಸು, ಮಾವು, ಸಪೋಟಸೇರಿದಂತೆ ಅನೇಕ ಬೆಳೆ ಬೆಳೆಯಲು ಬಂಡವಾಳವಿಲ್ಲಎಂಬ ಕಾರಣಗಳನ್ನು ಹೇಳುವ ರೈತರೇ ಹೆಚ್ಚು. ಆದರೆ,ಸರ್ಕಾರ ರೈತ ತನ್ನ ಜಮೀನಿನಲ್ಲಿ ತಾನು ಮಾಡಿದ ಕೆಲಸಕ್ಕೆ ಕೂಲಿ ನೀಡುವ ಯೋಜನೆ ಮಾಡಿದ್ದರೂ, ರೈತರು ಗಮನವಹಿಸಿರುವುದಿಲ್ಲ.

ಆದರೆ, ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳ ಮಾರ್ಗದರ್ಶನದಿಂದ ಬಹಳಷ್ಟುರೈತರು ಉದ್ಯೋಗ ಖಾತರಿ ಯೋಜನೆಯಡಿ ಲಾಭವನ್ನು ಪಡೆದುಕೊಂಡು ತಮ್ಮ ಜಮೀನಿನಲ್ಲಿ ವಿವಿಧಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸ್ವಂತ ಬಂಡವಾಳವಿಲ್ಲದೆ ತಾನೇ ದುಡಿದು ಸರ್ಕಾರದಿಂದ ಹಣ ಪಡೆಯುವ ಮೂಲಕ ರೈತ ಉಚಿತವಾಗಿ ತೋಟ ಮಾಡಿಕೊಳ್ಳುವ ಉತ್ತಮ ಅವಕಾಶವಿದ್ದು, ರೈತರುಅನುಕೂಲ ಪಡೆದುಕೊಳ್ಳಬಹುದಾಗಿದೆ.ಒಂದು ಹೆಕ್ಟೇರ್‌ಗೆ 2500 ಗಿಡ: ಮಹಾತ್ಮ ಗಾಂಧಿರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಅಂಗಾಂಶ ಬಾಳೆ ಬೆಳೆಯುವ ರೈತನಿಗೆ ಒಂದು ಗಿಡಕ್ಕೆಗುಂಡಿ ತೆಗೆಯುವುದಕ್ಕೆ27.30 ರೂ., ನರ್ಸರಿಗಳಿಂದಸಾಗಾಣಿಕೆ, ತುಂಬುವಿಕೆ, ಇಳಿಸುವಿಕೆಗಾಗಿ 3.27ರೂ., ಗಿಡ ನೆಡುವುದಕ್ಕೆ 5.51 ರೂ., ರಸಗೊಬ್ಬರಕ್ಕೆ1.82 ರೂ., ಕಳೆ ತೆಗೆಯಲು 3.44 ರೂ., ಅಂತರಬೇಸಾಯದ ಉಳುಮೆಗೆ 1110 ಸೇರಿದಂತೆ ಒಂದುಹೆಕ್ಟೇರ್‌ಗೆ ವಿವಿಧ ಹಂತದಲ್ಲಿ ಸಾಮಗ್ರಿ ಹಾಗೂ ಕೂಲಿಹಣಕ್ಕಾಗಿ ಅಂದಾಜು1,50,000 ಲಕ್ಷಕ್ಕೂ ಹೆಚ್ಚು ಹಣವನ್ನು ಸರ್ಕಾರ ನೀಡುತ್ತದೆ.

ಒಂದು ಹೆಕ್ಟೇರ್‌ನಲ್ಲಿ(ಎರಡೂವರೆ ಎಕರೆ) ಒಟ್ಟು 2500 ಗಿಡಗಳನ್ನುಹಾಕಬಹುದಾಗಿದೆ. ನೆಲಮಂಗಲದ ಬೂದಿಹಾಳ್‌, ಟಿ.ಬೇಗೂರು, ತ್ಯಾಮಗೊಂಡ್ಲು,ದೊಡ್ಡಬಳ್ಳಾಪುರ, ದೇವನಹಳ್ಳಿ ಭಾಗದಲ್ಲಿ ರೈತರು ಬಹಳಷ್ಟು ಲಾಭ ಪಡೆದುಕೊಂಡಿದ್ದು, ಮಾರುಕಟ್ಟೆ ಕುಸಿದರು ನಷ್ಟದಿಂದ ದೂರವಾಗಿದ್ದಾರೆ.ಬಾಳೆಗೆ ಉತ್ತಮ ಮಾರುಕಟ್ಟೆ: ಬಡತನದಕುಟುಂಬದಲ್ಲಿರುವ ರೈತರು ಬಾಳೆ ಬೆಳೆಯುವುದು ಹೆಚ್ಚು. ಅಲವಾರು ಜೀವಸತ್ವಗಳನ್ನು,ಪ್ರಮುಖ ಖನಿಜಗಳಿಂದ ಕೂಡಿದ ಸಮೃದ್ಧಿಯಾಗಿದೆಬಾಳೆ ಹಣ್ಣು. ಇದು ಜನರ ಆರೋಗ್ಯಕ್ಕೆ ಉತ್ತಮಹಣ್ಣು. ಬಾಳೆ ಬಹುಶಃ ಎಲ್ಲಾ ಸಮಯದಲ್ಲಿಯೂಉತ್ತಮ ಮಾರುಕಟ್ಟೆ ಹೊಂದಿದೆ. ಬಾಳೆ ಬೆಳೆದರೈತರು ಬಿರುಗಾಳಿ ಸಹಿತ ಮಳೆಯಿಂದ ಬೆಳೆಯನ್ನುರಕ್ಷಿಸಿಕೊಂಡರೆ, ಬಹಳಷ್ಟು ಲಾಭ ಪಡೆದುಕೊಳ್ಳಬಹುದು.

ಬಾಳೆ ಬೆಳೆದ ರೈತನ ಬಾಳು ಬಂಗಾರಎಂಬುದು ಬಾಳೆ ಬೆಳೆದು ಲಾಭ ಪಡೆದ ಕೋನಯ್ಯ,ಸಿದ್ದಗಂಗಮ್ಮ ಅವರ ಅಭಿಪ್ರಾಯವಾಗಿದೆ.ಅಂಗಾಂಶ ಕೃಷಿ ಹೇಗೆ?: ನೀರು ಬಸಿದು ಹೋಗುವಗೋಡು ಮಣ್ಣು ಇದ್ದರೆ ಅಂಗಾಂಶ ಬಾಳೆಗೆ ಉತ್ತಮ.ಅಂಗಾಂಶ ಬಾಳೆಗಿಡ ನೆಡುವಾಗ 1.5 ಮೀಟರ್‌ ಅಂತರದಲ್ಲಿ ಒಂದು ಗಿಡದಿಂದ ಮತ್ತೂಂದುಗಿಡವನ್ನು ನೆಟ್ಟು ಪೋಷಣೆ ಮಾಡಬೇಕು. ಬಾಳೆ ಗಿಡ ನೆಡುವಾಗಗುಂಡಿಗಳಿಗೆ ಬೇವಿನ ಹಿಂಡಿ,ಕೆಂಪು ಮಣ್ಣು ಹಾಗೂಕೊಟ್ಟಿಗೆ ಗೊಬ್ಬರಗಳನ್ನುಸಮ ಪ್ರಮಾಣದಲ್ಲಿಮಿಶ್ರಣ ಮಾಡಿ ಹಾಕಬೇಕು. ಅದರಲ್ಲಿ ಬಾಳೆಸಸಿಗಳನ್ನು ಪಾಲೀಥಿನ್‌ಚೀಲಗಳನ್ನು ಸೀಳಿ ನಾಟಿ ಮಾಡಿ,ಹನಿ ನೀರಾವರಿಯಿಂದ ನೀರು ಹಾಯಿಸಿದರೆ ನೀರಿನ ಮಿತ ವ್ಯಯವಾಗಲಿದೆ. ನಾಟಿ ಮಾಡಿದದಿನದಿಂದ ಪ್ರತಿ 30 ದಿನಗಳು ಹಾಗೂ ಗೊನೆಕಾಣಿಸಿಕೊಂಡಾಗ ಸಾರಜನಕ, ರಂಜಕ ಹಾಗೂಪೋಷಕಾಂಶ ಇರುವ ಗೊಬ್ಬರ ಹಾಕಿದರೆ ಒಳಿತು.ವೆಂಚುರಿ ಉಪಕರಣ ಬಳಸಿ ನೀರಿನ ಮೂಲಕಯೂರಿಯಾ, ಲಘು ಪೋಷಕಾಂಶಗಳು ಗಿಡಗಳಿಗೆಪೂರೈಸಬಹುದು.

ಬಾಳೆಗಳಿಗೆ ಪನಾಮ ಸೊರಗುರೋಗ, ಎಲೆಚುಕ್ಕಿ ರೋಗ, ಚುಟ್ಟದ ತುದಿ ರೋಗಗಳುಬರದಂತೆ ಕಾಲ ಕಾಲಕ್ಕೆ ಔಷಧ ಸಿಂಪಡಿಸಿ, ಬಾಳೆಗೊನೆಸಂಪೂರ್ಣ ಹೊರಬಂದು ಕಾಯಿ ಕಚ್ಚಿದ ಬಳಿಕಹೂವಿನ ಮೂತಿ ಮುರಿದು ತಿಂಗಳಿಗೆ ಎರಡುಬಾರಿಯಂತೆ ಬನಾನಾ ಸ್ಪೆಷಲ್‌ನನ್ನು ಗೊನೆಗಳಿಗೆ ಸಿಂಪಡಿಸಿದರೇ ಕಾಯಿಯಬೆಳವಣಿಗೆಗೆಸಹಾಯವಾಗುತ್ತದೆಎನ್ನುತ್ತಾರೆ ರೈತ ಶಿವಕುಮಾರ್‌.

ಅಂಗಾಂಶ ಬಾಳೆ ಕೃಷಿ ಅನುಕೂಲ: ಒಂದೇ ಬಾರಿಗೆಫ‌ಸಲು ಸಿಗುವುದರಿಂದ ಗೊನೆಗಳ ಮಾರಾಟ ಪ್ರಕ್ರಿಯೆಸುಲಭ. ಬೇರೆ ತಳಿಗಳಿಗಿಂತ ಬೇಗ ಗೊನೆ ಬಿಡುವಹಾಗೂ ಅಧಿಕ ಇಳುವರಿ ನೀಡುವ ಕೆಲಸವಾಗುವುದರಿಂದ ಬೆಳೆ ನಿರ್ವಹಣೆ ಖರ್ಚಿನಲ್ಲಿ ಉಳಿತಾಯವಾಗುತ್ತದೆ. ಕೀಟ ಹಾಗೂ ರೋಗರಹಿತ ಗಿಡಗಳುಲಭ್ಯರುವುದು ದೊಡ್ಡ ಅನುಕೂಲವಾಗಿದೆ. ಅಂಗಾಂಶಕೃಷಿ ತಂತ್ರಜ್ಞಾನದಲ್ಲಿ ಬೆಳೆದ ಮಧುಕರ್‌, ಏಲಕ್ಕಿ ಬಾಳೆ,ರಸಬಾಳೆ, ಕರಿಬಾಳೆ, ಬೂದುಬಾಳೆ, ಕಂದುಬಾಳೆ,ಕೆಂಪುಬಾಳೆ, ಜವಾರಿ, ಪುಟ್ಟಬಾಳೆ ಮೊದಲಾದತಳಿಗಳಲ್ಲಿಯೂ ಅನುಕೂಲ ಕಾಣಬಹುದು.

ಹೊಲಕ್ಕೆ ಬರುವ ವ್ಯಾಪಾರಿಗಳು: ಅಂಗಾಂಶ ಬಾಳೆಬೆಳೆಯಲು ನರೇಗಾ ಸಹಕಾರಿಯಾಗಿದ್ದು, ರೈತರುಮಾರುಕಟ್ಟೆಗೆ ಹೋಗಿ ಬಾಳೆಕಾಯಿ ಮಾರುವ ಅನಿವಾರ್ಯವಿಲ್ಲ. ಇತ್ತೀಚಿಗೆ ಬಾಳೆ ಹಣ್ಣಿಗೆ ಹೆಚ್ಚು ಬೇಡಿಕೆಸೃಷ್ಟಿಯಾಗಿದೆ. ವ್ಯಾಪಾರಿಗಳೇ ತೋಟಗಳಿಗೆ ಬಂದುಖರೀದಿ ಮಾಡುತ್ತಾರೆ. ಬಾಳೆ ಗೊನೆ ಉತ್ತಮವಾಗಿದ್ದರೆ ಹೆಚ್ಚು ಬೆಲೆ ಇರುವುದನ್ನುಕಾಣಬಹುದು.

ಈಗಾಗಲೇ ಕೆ.ಜಿಗೆ30ರಿಂದ40 ರೂ. ಬಾಳೆ ಹಣ್ಣು ಮಾರಾಟವಾಗುತ್ತಿದ್ದು, ರೈತರಿಗೆ ಕೆ.ಜಿ.ಗೆ 20ರಿಂದ 25ರೂ.ಗಿಂತ ಹೆಚ್ಚು ದರ ಲಭ್ಯವಾಗುತ್ತಿದೆ.ಅಧಿಕಾರಿಗಳ ಮಾರ್ಗದರ್ಶನ: ತೋಟಗಾರಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅಂಗಾಂಶ ಬಾಳೆ ಬೆಳೆಯುವ ರೈತರಿಗೆ ಭೂಮಿ ಉಳುಮೆ ಮಾಡಿ, ಗುಂಡಿತೆಗೆದು, ನೆಟ್ಟು, ಔಷಧಿ ಸಿಂಪಡಣೆ, ನಿರ್ವಹಣೆಹಾಗೂ ಕಟಾವು ಮಾಡುವ ಹಂತದವರೆಗೂ ಅಧಿಕಾರಿಗಳ ತಂಡ ಭೇಟಿ ನೀಡಿ ರೈತರಿಗೆ ಮಾರ್ಗದರ್ಶನಮಾಡುತ್ತಿದೆ. ಉದ್ಯೋಗ ಖಾತರಿ ಯೋಜನೆಯಡಿಲಾಭ ಪಡೆಯಲು ಮಾರ್ಗದರ್ಶನ ಮಾಡಿ, ರೈತರಮಾದರಿ ಕೃಷಿಗೆ ಸಹಕಾರಿಯಾಗಿದ್ದಾರೆ.

ಕೊಟ್ರೇಶ್‌.ಆರ್‌

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.