ನ್ಯಾಯವಾದಿ-ನ್ಯಾಯಾಧೀಶರ ಸಂಬಂಧ ಅನ್ಯೋನ್ಯವಾಗಿರಲಿ
Team Udayavani, Jun 30, 2021, 10:10 PM IST
ಹರಪನಹಳ್ಳಿ: ನ್ಯಾಯಾಲಯದ ಕಲಾಪದಲ್ಲಿ ನ್ಯಾಯಾ ಧೀಶರ ಹಾಗೂ ನ್ಯಾಯವಾದಿಗಳ ಸಂಬಂಧ ಅನ್ಯೋನ್ಯವಾಗಿರಲಿ ಎಂದು ಜೆಎಂಎಫ್‌ಸಿ ನ್ಯಾಯಾಲಯದ ನೂತನ ಹಿರಿಯ ನ್ಯಾಯಾ ಧೀಶೆ ಎಂ. ಭಾರತಿ ಪ್ರತಿಪಾದಿಸಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ತಾಲೂಕು ವಕೀಲರ ಸಂಘದ ಕಚೇರಿಯಲ್ಲಿ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಕೀಲರ ಹಾಗೂ ನ್ಯಾಯಾ ಧೀಶರ ಮಧ್ಯೆ ಅನ್ಯೋನ್ಯ ಸಂಬಂಧ ಹೊಂದಿರಬೇಕು. ನ್ಯಾಯಾಲಯದಲ್ಲಿ ಸಣ್ಣಪುಟ್ಟ ನೂನ್ಯತೆಗಳು ಕಂಡು ಬಂದಲ್ಲಿ ನ್ಯಾಯಾಲಯದ ಕಲಾಪದಲ್ಲೇ ಬಗೆಹರಿಸಿಕೊಳ್ಳಬೇಕು ಎಂದರು.
ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಅನೇಕ ತಾಲೂಕುಗಳಲ್ಲಿ ನ್ಯಾಯಾಧಿಧೀಶರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಹರಪನಹಳ್ಳಿ ತಾಲೂಕು ನನಗೆ ಹೊಸದು. ನಾನು ಮ್ಯಾಪ್ ನೋಡಿ ಹರಪನಹಳ್ಳಿ ತಾಲೂಕಿಗೆ ಬಂದಿದ್ದೇನೆ. ನ್ಯಾಯಾವಾದಿಗಳು ಹಾಗೂ ಸಿಬ್ಬಂ ದಿಯವರು ಸ್ವಲ್ಪದಿನ ನನಗೆ ಸಹಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರೇಗೌಡ್ರು ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಟಿ. ವೆಂಕಟೇಶ್, ಕಾರ್ಯದರ್ಶಿ ಬಸವರಾಜ್, ಸಹ ಕಾರ್ಯದರ್ಶಿ ಎಂ. ಮೃತೃಂಜಯ್ಯ, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್‌ಗೌಡ, ಗಂಗಾಧರ್ ಗುರುಮs…, ಎಂ.ಅಜ್ಜಪ್ಪ, ಸರ್ಕಾರಿ ಅಭಿಯೋಜಕರಾದ ಮಿನಾಕ್ಷಿ, ನಿರ್ಮಲಾ, ಕೆ. ಜಗದಪ್ಪ, ಕೆ. ಬಸವರಾಜ್, ರುದ್ರಮನಿ, ಆರುಂಡಿ ನಾಗರಾಜ್, ಜಗ ದೀಶ್ ಗೌಡ್ರು, ಬಿ. ಗೋಣಿಬಸಪ್ಪ, ಶಾಂತವೀರನಾಯ್ಕ, ಮಂಜುನಾಥ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್