ವಿಂಬಲ್ಡನ್ ಪಂದ್ಯಾಟ : ಮೂರನೇ ಸುತ್ತಿಗೇರಿದ ನೊವಾಕ್ ಜೊಕೋವಿಕ್
Team Udayavani, Jun 30, 2021, 10:40 PM IST
ಲಂಡನ್ : ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ ನೇರ ಸೆಟ್ ಜಯಗಳಿಸುವ ಮೂಲಕ ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ವಿಂಬಲ್ಡನ್ ಪಂದ್ಯಾವಳಿಯ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಅವರು 6-3, 6-3, 6-3 ಅಂತರದ ಮೇಲುಗೈ ಸಾಧಿಸಿದರು.
ಇದು 2018ರ ಫೈನಲ್ ಪಂದ್ಯದ ಪುನರಾವರ್ತನೆ ಆಗಿತ್ತು. ಆ್ಯಂಡರ್ಸನ್ 2 ಗ್ರಾನ್‌ಸ್ಲಾಮ್ ಪಂದ್ಯಾವಳಿಯ ರನ್ನರ್ ಅಪ್ ಆಗಿದ್ದಾರೆ. ಇಲ್ಲಿ ಕೇವಲ ಒಂದು ಗಂಟೆ, 41 ನಿಮಿಷಗಳಲ್ಲಿ ಶರಣಾಗತಿ ಸಾರಿದರು.
ಇದೇ ವೇಳೆ ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್, ಜೋರ್ಡನ್ ಥಾಮ್ಸನ್; ಅಮೆರಿಕದ ನೂರಿ, ಇಟಲಿಯ ಬೆರೆಟಿನಿ, ಬಲ್ಗೇರಿಯಾದ ಡಿಮಿಟ್ರೋವ್, ಫ್ರಾನ್ಸ್‌ನ ಮಾನ್‌ಫಿಲ್ಸ್, ಜಪಾನಿನ ಯೊಶಿಹಿಟೊ ನಿಶಿಯೋಕ ಮೊದಲ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ನಿಶಿಯೋಕ ಅಮೆರಿಕದ ಬಿಗ್ ಸರ್ವರ್ ಖ್ಯಾತಿಯ ಜಾನ್ ಇಸ್ನರ್‌ಗೆ ಸೋಲುಣಿಸಿ ಅಚ್ಚರಿಯ ಫಲಿತಾಂಶ ದಾಖಲಿಸಿದರು.
ಇದನ್ನೂ ಓದಿ :ದೇಶದ ಆರ್ಥಿಕತೆ ಕುಸಿತ ಹಿನ್ನೆಲೆ : ವೆಚ್ಚ ಕಡಿತಕ್ಕೆ ಕೇಂದ್ರ ಹಣಕಾಸು ಇಲಾಖೆ ಸೂಚನೆ
ಸ್ವಿಟೋಲಿನಾ ಮುನ್ನಡೆ
ವನಿತಾ ಸಿಂಗಲ್ಸ್‌ನಲ್ಲಿ 3ನೇ ಶ್ರೇಯಾಂಕದ ಎಲೆನಾ ಸ್ವಿಟೋಲಿನಾ 6-3, 2-6, 6-3 ಅಂತರದಿಂದ ಬೆಲ್ಜಿಯಂನ ಅಲಿಸನ್ ವಾನ್ ವಿಟ್ವಾಂಕ್ ವಿರುದ್ಧ ಜಯ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.