ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರಬೇಕು : ತಜ್ಞರ ಅಭಿಮತ


Team Udayavani, Jul 1, 2021, 6:30 AM IST

ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರಬೇಕು : ತಜ್ಞರ ಅಭಿಮತ

ಕಲಿಕೆಯ ಆಧಾರದಲ್ಲಿ ಮೌಲ್ಯಮಾಪನ ವ್ಯವಸ್ಥೆ

ಕೊರೊನಾದಿಂದ ಶೈಕ್ಷಣಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿದ್ದಿದೆ. ಭೌತಿಕ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಶೈಕ್ಷಣಿಕ ಅಸುರಕ್ಷೆಯ ಭಾವದ ಜತೆಗೆ ಮಕ್ಕಳು ಶಿಕ್ಷಕರ ನಡುವಿನ ಬಾಂ ಧವ್ಯ, ಒಡನಾಟದ ಭಾವನೆ ಕಾಣುತ್ತಿಲ್ಲ. ಅಜೀಂ ಪ್ರೇಮ್‌ ಜೀ ವಿಶ್ವ ವಿದ್ಯಾ ನಿಲಯದಿಂದ ಐದು ರಾಜ್ಯದ ಸುಮಾರು 16 ಸಾವಿರ ಮಕ್ಕಳನ್ನು ಒಳ ಗೊಂಡ ಒಂದು ಸಮೀಕ್ಷೆ ನಡೆಸಿ ದ್ದೆವು. ಆ ಸಮೀಕ್ಷೆ ಯಲ್ಲಿ ಮಕ್ಕಳ ಕಲಿಕೆಯ ಅಂತರವನ್ನು ಗುರುತಿ ಸ ಲಾಗಿದೆ. ಶೇ.92ರಷ್ಟು ಮಕ್ಕ ಳಿಗೆ ಭಾಷಾ ವಿಷಯ ಮತ್ತು ಶೇ.82ರಷ್ಟು ಗಣಿತ ವಿಷಯದ ಅನೇಕ ಸಂಗತಿಗಳು ಮರೆತು ಹೋಗಿ ವೆ. ಹೀಗಾಗಿ ಕಲಿಕಾ ಅಂತರ ನಿವಾರಣೆಗೆ ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಆನ್‌ಲೈನ್‌ ಶಿಕ್ಷಣ ಅತ್ಯಂತ ಪರಿಣಾಮಕಾರಿಯಾಗಿಲ್ಲ. ಶೇ.80 ರಷ್ಟು ಆನ್‌ಲೈನ್‌ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಭಾವನಾತ್ಮಕ ಸಂಬಂಧ ಇಲ್ಲವಾಗಿದೆ. ಶೇ.60ಕ್ಕೂ ಅಧಿಕ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣಕ್ಕೆ ಅಗತ್ಯವಾದ ಸ್ಮಾರ್ಟ್‌ ಫೋನ್‌ ಲಭ್ಯವಿಲ್ಲ.

ವಿದ್ಯಾಗಮ ಕಾರ್ಯ ಕ್ರಮವನ್ನು ಅಗತ್ಯವಾಗಿ ಅನುಷ್ಠಾನಕ್ಕೆ ತರಬೇಕು. ಹಾಗೆಯೇ ಸಮುದಾಯ ಆಧಾರಿತ ಕಲಿಕಾ ವ್ಯವಸ್ಥೆಗೆ ಹಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಕಲಿಕೆಯ ಆಧಾರದಲ್ಲಿ ಮೌಲ್ಯಮಾಪನ ವ್ಯವಸ್ಥೆ ಬರಬೇಕು.

– ಎಸ್‌.ವಿ.ಮಂಜುನಾಥ್‌, ಸಹಾಯಕ ನಿರ್ದೇಶಕ, ಅಜೀಂ ಪ್ರೇಮ್‌ ಜೀ ವಿಶ್ವವಿದ್ಯಾನಿಲಯ, ಬೆಂಗಳೂರು 
**
ಪಾಠ ಬೋಧನೆಯ ಜತೆಗೆ ಬೌದ್ಧಿಕ ಬೆಳವಣಿಗೆ ಮುಖ್ಯ

ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ಅವಲೋಕನ, ಗ್ರಹಿಕೆ, ಸಂವಹನ, ಪ್ರಯೋಗಶೀಲತೆ, ಸಾಮಾಜೀಕರಣ ಹೀಗೆ ಎಲ್ಲವೂ ಮುಖ್ಯವಾಗುತ್ತದೆ. ಭೌತಿಕ ತರಗತಿಯಲ್ಲಿ ವಿದ್ಯಾರ್ಥಿಗಳು ಒಬ್ಬರು ಇನ್ನೊಬ್ಬರೊಂದಿಗೆ ಬೆರೆಯುವುದ ರಿಂದ ಸಾಮಾಜೀಕರಣ ಸುಲಭವಾಗಿ ಆಗುತ್ತದೆ. ಆದರೆ, ಆನ್‌ಲೈನ್‌ ತರಗತಿ ಯಲ್ಲಿ ಸಾಮಾಜೀಕರಣ ಅಷ್ಟು ಸುಲಭವಿಲ್ಲ. ವಿದ್ಯಾರ್ಥಿಗಳು ಮುಖ್ಯ ವಾಗಿ ಬೆಳೆಯಲು ಸಾಧ್ಯವಾಗು ವುದಿಲ್ಲ. ಆಯಾ ತರಗತಿ ವಿದ್ಯಾರ್ಥಿ ಗಳು ಹೊರತುಪಡಿಸಿ, ಬೇರೆ ತರಗತಿ ಗಳು, (ಹಿರಿಯ, ಕಿರಿಯ) ವಿದ್ಯಾರ್ಥಿ ಗಳ ಮಾಹಿತಿಯೇ ಇರುವುದಿಲ್ಲ. ಪಾಠ ಬೋಧನೆಯ ಜತೆಗೆ ಬೌದ್ಧಿಕ ಬೆಳವಣಿಗೆಯೂ ಅತಿ ಮುಖ್ಯವಾಗುತ್ತದೆ. ಓದು, ಬರೆಹ ಹಾಗೂ ಲೆಕ್ಕ ಅತೀ ಮುಖ್ಯವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಭೌತಿಕ ತರಗತಿ ಆರಂಭಿಸಲು ಸಾಧ್ಯವಾಗದೇ ಇದ್ದರೂ ವಿದ್ಯಾಗಮ ಆರಂಭಿಸಬೇಕು. ಶಿಕ್ಷಣ ಮೂಲವು ಇದರಲ್ಲೇ ಇರುವುದರಿಂದ ಈ ಮೂರು ಅಂಶಗಳ ಬಗ್ಗೆ ವಿಶೇಷ ಆದ್ಯತೆ ನೀಡಬೇಕಾಗುತ್ತದೆ. ವಸತಿ ಪ್ರದೇಶಗಳನ್ನು ಘಟಕವಾಗಿ ಪರಿಗಣಿಸಿ, ವಿದ್ಯಾರ್ಥಿಗಳ ತಂಡ ರಚನೆ ಮಾಡಿ, ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ವಿದ್ಯಾಗಮ ಪುನಃ ಆರಂಭಿಸಿ, ಓದು, ಬರೆಹ ಹಾಗೂ ಲೆಕ್ಕ (ಗಣಿತ)ಕ್ಕೆ ಆದ್ಯತೆ ನೀಡಬೇಕು.

– ಮುಕುಂದ ಪಿ., ಶಿಕ್ಷಣ ತಜ್ಞರು, ಸೇವಾ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ತೀರ್ಥಹಳ್ಳಿ
**
ಆನ್‌ಲೈನ್‌ ಶಿಕ್ಷಣದ ಬಗ್ಗೆ ಧನಾತ್ಮಕ ಭಾವನೆ ಬೆಳೆಸಿ

ಗ್ರಾಮೀಣ ಭಾಗದ ನೆಟ್‌ವರ್ಕ್‌ ಸಮಸ್ಯೆ, ವಿದ್ಯುತ್‌ ಕಡಿತ, ಮೊಬೈಲ್‌ ಬಳಕೆಯ ಮಾಹಿತಿ ಕೊರತೆ ಸೇರಿದಂತೆ ಹಲವು ಕಾರಣಗಳಿಗೆ ಆನ್‌ಲೈನ್‌ ತರಗತಿಗಳು ಸಮರ್ಪಕವಾಗಿ ನಡೆ ಯುತ್ತಿಲ್ಲ. ಆನ್‌ಲೈನ್‌ ತರಗತಿ ನಡೆಯುತ್ತಿದ್ದರೂ ವಿದ್ಯಾರ್ಥಿ ಗಳಿಗೆ ಪಾಲ್ಗೊಳ್ಳಲು ಆಗುತ್ತಿಲ್ಲ. ಸ್ಮಾರ್ಟ್‌ ಫೋನ್‌ ಇಲ್ಲದ ಪಾಲಕ, ಪೋಷಕರ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಸಾಧ್ಯವೇ ಇಲ್ಲ. ಆನ್‌ಲೈನ್‌ ಶಿಕ್ಷಣದಲ್ಲಿ ತರಗತಿ ಕೋಣೆಯ ವಾತಾವರಣ ಬರಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಪರಸ್ಪರ ಮಾತುಗಾರಿಕೆ ಇರಬೇಕು. ಹೆತ್ತವರಿಗೆ ಆನ್‌ಲೈನ್‌ ತರಗತಿಯ ಬಗ್ಗೆ ಅರಿವು, ಮಾಹಿತಿ ನೀಡಬೇಕು. ಎಲ್ಲ ವಿಷಯಗಳ ಚಟುವಟಿಕೆ ಆನ್‌ಲೈನ್‌ ತರಗತಿಯಲ್ಲೂ ನಡೆಯಬೇಕು. ಎರಡು ಗಂಟೆಗಳ ಸಮಯ ನಿಗದಿ ಮಾಡಿ ವಿದ್ಯಾರ್ಥಿಗೆ ಎಲ್ಲ ವಿಷಯ ದ ಸಮಗ್ರ ಮಾಹಿತಿ ಒದಗಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳು ಅಭ್ಯಾಸ ಪುಸ್ತಕದ ಬಳಕೆ ನಿರಂತರವಾಗಿ ಮಾಡುವಂತೆ ಆಗಬೇಕು. ಬರೆವಣಿಗೆಗೆ ಹೆಚ್ಚಿನ ಆದ್ಯತೆ ನೀಡ ಬೇಕು. ಇನ್ನು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಸ್ಟಾರ್‌ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಸ್ಟಾರ್‌ ನೀಡುವು ದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವ ಜತೆಗೆ ಪ್ರೋತ್ಸಾಹವೂ ಸಿಕ್ಕಂತಾಗುತ್ತದೆ. ಆನ್‌ನ್‌ ಶಿಕ್ಷಣದ ಬಗ್ಗೆ ಆದಷ್ಟು ಧನಾತ್ಮಕ ಭಾವನೆ ಬೆಳೆಸಬೇಕು. ಫೀಡ್‌ ಬ್ಯಾಕ್‌ ಪಡೆಯುವ ವ್ಯವಸ್ಥೆ ತರಬೇಕು. ಕ್ಲಸ್ಟರ್‌ ಮಟ್ಟದಲ್ಲಿ ಕಲಿಕೆಗೆ ಬೇಕಾದ ಅಗತ್ಯ ಯೋಜನೆಗಳನ್ನು ಸಿದ್ಧಪಡಿಸಬೇಕು.

– ಧನಲಕ್ಷ್ಮೀ ಬಿ.ಕೆ., ನಿವೃತ್ತ ಮುಖ್ಯಶಿಕ್ಷಕಿ ಹಾಗೂ ವಿಷಯ ತಜ್ಞರು, ಉಡುಪಿ

ಟಾಪ್ ನ್ಯೂಸ್

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.