ಕಾರವಾರ-ಹೊನ್ನಾವರ-ಭಟ್ಕಳ ಠಾಣೆ ಮೇಲ್ದರ್ಜೆಗೆ

ಮುಂದಿನ ತಿಂಗಳೊಳಗೆ ಸರ್ಕಾರದ ಆದೇಶ ಜಿಲ್ಲೆಯಲ್ಲಿ ಅನುಷ್ಠಾನ: ಎಸ್ಪಿ ಶಿವಪ್ರಕಾಶ್‌ ದೇವರಾಜ್‌

Team Udayavani, Jul 1, 2021, 8:55 PM IST

30kwr01a

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ ಹಾಗೂ ಭಟ್ಕಳ ಪೊಲೀಸ್‌ ಠಾಣೆಯನ್ನು ಶೀಘ್ರದಲ್ಲೇ ಪೊಲೀಸ್‌ ಇನ್‌ಸ್ಪೆಕ್ಟರ್‌ ಠಾಣೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲು ಸಿದ್ಧತೆ ನಡೆದಿದೆ. ಸರ್ಕಾರದ ಆದೇಶದ ಪ್ರಕಾರ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಎಸ್ಪಿ ಶಿವಪ್ರಕಾಶ್‌ ದೇವರಾಜು ತಿಳಿಸಿದ್ದಾರೆ.

ಕಾರವಾರ ಸಿಪಿಐ ಅಡಿ ಪ್ರತ್ಯೇಕವಾಗಿ ಗ್ರಾಮೀಣ, ನಗರ ಹಾಗೂ ಸಂಚಾರ ಠಾಣೆಗಳಿದ್ದವು. ಹಾಗೆ ಹೊನ್ನಾವರ ಸಿಪಿಐ ಅಡಿಯಲ್ಲಿ ಮಂಕಿ ಪೊಲೀಸ್‌ ಠಾಣೆ ಇದ್ದು, ಭಟ್ಕಳ ಸಿಪಿಐ ಅಡಿಯಲ್ಲಿ ನಗರ, ಗ್ರಾಮೀಣ ಹಾಗೂ ಮುಡೇìಶ್ವರ ಠಾಣೆಗಳಿದ್ದವು. ಇದೀಗ ಈ ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ ಏರುತ್ತಿವೆ. ಕೆಲ ತಿಂಗಳ ಹಿಂದೆ ರಾಜ್ಯ ಸರ್ಕಾರ ಹಲವು ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಿದ್ದು, ಅದರಂತೆ ಕಾರವಾರ, ಹೊನ್ನಾವರ ಹಾಗೂ ಭಟ್ಕಳ ಸಿಪಿಐ ಠಾಣೆಯನ್ನು ಪೊಲೀಸ್‌ ಇನ್‌ಸ್ಪೆಕ್ಟರ್‌ ಠಾಣೆಯನ್ನಾಗಿ ಮಾಡಿ ಪರಿವರ್ತಿಸಿ ಆದೇಶಿಸಿತ್ತು.

ಕಾರವಾರ ನಗರ ಠಾಣೆಗೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಮುಖ್ಯಸ್ಥರಾಗಿದ್ದು, ಸಂಚಾರ ಠಾಣೆಯನ್ನು ಅವರ ಅಧೀನಕ್ಕೆ ಒಳಪಡಿಸಿ ಆದೇಶಿಸಿತ್ತು. ಹಾಗೆಯೇ ಕಾರವಾರ ಗ್ರಾಮೀಣ ಠಾಣೆಗೂ ಪೊಲೀಸ್‌ ಇನ್‌ಸ್ಪೆಕ್ಟರನ್ನು ಮುಖ್ಯಸ್ಥರನ್ನಾಗಿ ಮಾಡಿ ಪರಿವರ್ತಿಸಲು ಸೂಚಿಸಿತ್ತು. ಇನ್ನೊಂದೆಡೆ ಹೊನ್ನಾವರ ಠಾಣೆಯನ್ನ ಸಹ ಪೊಲೀಸ್‌ ಇನ್‌ಸ್ಪೆಕ್ಟರ್‌ ಠಾಣೆಯನ್ನಾಗಿ ಮಾಡಲಾಗಿದೆ. ಭಟ್ಕಳ ಗ್ರಾಮೀಣ ಠಾಣೆ ವೃತ್ತ ನಿರೀಕ್ಷಕರ ಠಾಣೆಯನ್ನಾಗಿ ಮಾಡಿ ಅದರಡಿ ಹೊನ್ನಾವರ ವೃತ್ತ ನಿರೀಕ್ಷಕರ ಅಡಿಯಲ್ಲಿದ್ದ ಮಂಕಿ, ಮುಡೇìಶ್ವರ ಠಾಣೆ ಸೇರ್ಪಡೆ ಮಾಡಲಾಗುತ್ತಿದೆ.

ಇನ್ನು ಭಟ್ಕಳ ನಗರ ಠಾಣೆಯನ್ನ ಪೊಲೀಸ್‌ ಇನ್‌ಸ್ಪೆಕ್ಟರ್‌ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಆದೇಶದಲ್ಲಿ ಸೂಚಿಸಿತ್ತು. ಅದರಂತೆ ಮುಂದಿನ ತಿಂಗಳ ಒಳಗೆ ಈ ಎಲ್ಲಾ ಠಾಣೆಗಳನ್ನು ವಿಂಗಡಿಸಿ, ಮೇಲ್ದರ್ಜೆಗೆ ಏರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ. ಹೆಚ್ಚುವರಿಯಾಗಿ 2 ಸಿಪಿಐ ಹುದ್ದೆ ಸೃಷ್ಟಿ: ಇನ್ನು ಠಾಣೆಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ ಕಾರವಾರ ಹಾಗೂ ಭಟ್ಕಳದಲ್ಲಿ ಇಬ್ಬರು ಇನ್‌ಸ್ಪೆಕ್ಟರ್‌ ಹುದ್ದೆಗಳು ಹೆಚ್ಚುವರಿಯಾಗಿ ಸೃಷ್ಟಿಯಾಗಲಿವೆ, ಸದ್ಯ ಈ ಹುದ್ದೆಗಳಿಗೆ ನೇಮಕ ಮಾಡುವ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಈ ಹಿಂದೆಯೇ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಬೇಕಿತ್ತು. ಕೊರೊನಾ ಇನ್ನಿತರ ಕಾರಣದಿಂದ ತಡವಾಗಿದ್ದು, ಸರ್ಕಾರದ ಆದೇಶದಂತೆ ಶೀಘ್ರದಲ್ಲೇ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

ಗೊಂದಲದ ಆದೇಶ: ಠಾಣೆಗಳನ್ನು ವಿಂಗಡಿಸಿ ಮೇಲ್ದರ್ಜೆಗೆ ಏರಿಸುವ ಸರ್ಕಾರದ ಆದೇಶ ಹೊನ್ನಾವರ ಭಾಗದಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಈ ಹಿಂದೆ ಹೊನ್ನಾವರ ತಾಲೂಕಿನ ಮಂಕಿ ಠಾಣೆ ಹೊನ್ನಾವರ ವೃತ್ತ ನಿರೀಕ್ಷಕರ ಅಡಿಯಲ್ಲಿ ಬರುತ್ತಿತ್ತು. ಸದ್ಯ ಹೊನ್ನಾವರ ಠಾಣೆ ಮೇಲ್ದರ್ಜೆಗೆ ಏರಲಿದ್ದು, ಭಟ್ಕಳ ಗ್ರಾಮೀಣ ವೃತ್ತ ನಿರೀಕ್ಷಕರ ಠಾಣೆಯಡಿ ಮಂಕಿ ಠಾಣೆ ಸೇರಿಸಲು ಆದೇಶಿಸಲಾಗಿದೆ. ಮಂಕಿ ಠಾಣಾ ವ್ಯಾಪ್ತಿಯಲ್ಲಿ ಇಡಗುಂಜಿ ಸೇರಿದಂತೆ ಬಹುತೇಕ ಪ್ರದೇಶ ಹೊನ್ನಾವರ ತಾಲೂಕಿನಲ್ಲಿಯೇ ಬರಲಿದೆ. ಆದರೆ ಭಟ್ಕಳ ಗ್ರಾಮೀಣ ವೃತ್ತ ನಿರೀಕ್ಷಕರ ಅಡಿಯಲ್ಲಿ ಠಾಣೆ ಸೇರಿಸಲಿರುವುದರಿಂದ ಹೊನ್ನಾವರ ತಾಲೂಕಿನ ಜನರು ವೃತ್ತ ನಿರೀಕ್ಷರ ಕೆಲಸಕ್ಕಾಗಿ ಭಟ್ಕಳಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಸಣ್ಣಪುಟ್ಟ ವಿಚಾರಕ್ಕೂ ವೃತ್ತ ನಿರೀಕ್ಷಕರ ಕಚೇರಿಗಾಗಿ ದೂರದ ಭಟ್ಕಳಕ್ಕೆ ತೆರಳುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಎದ್ದಿದೆ. ಹೊನ್ನಾವರ ಪೊಲೀಸ್‌ ಠಾಣೆಯನ್ನ ಮೇಲ್ದರ್ಜೆಗೆ ಏರಿಸುವ ಅಗತ್ಯವೇ ಇರಲಿಲ್ಲ. ಈಗಿರುವ ವೃತ್ತ ನಿರೀಕ್ಷಕರ ಕಚೇರಿ ಅಡಿಯಲ್ಲೇ ಮಂಕಿ, ಇಡಗುಂಜಿ ಪ್ರದೇಶ ಉಳಿಯಬೇಕು ಎಂಬ ಅಭಿಪ್ರಾಯ ಸಹ ಕೇಳಿ ಬಂದಿದೆ.

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.