ಮುಂಬಯಿ ನಗರಿ ಹಿಂದಿಕ್ಕಿದ ಪುಣೆ
Team Udayavani, Jul 2, 2021, 7:20 AM IST
ಪುಣೆ: ಮಹಾರಾಷ್ಟ್ರದ ಅತೀ ದೊಡ್ಡ ನಗರ ಯಾವುದು? “ಮುಂಬಯಿ’ ಎಂದು ನೀವು ಉತ್ತರಿಸಿದರೆ ಅದು ತಪ್ಪು. ಏಕೆಂದರೆ, ರಾಜ್ಯದ ಅತೀ ದೊಡ್ಡ ನಗರ ಎಂಬ ಪಟ್ಟದಿಂದ “ಮುಂಬಯಿ’ ಈಗ ಕೆಳಗಿಳಿದಿದ್ದು, ಆ ಸ್ಥಾನವನ್ನು “ಪುಣೆ’ ಅಲಂಕರಿಸಿದೆ.
ಹೌದು. ಜೂ.30ರ ಬುಧವಾರ ಪುಣೆಯನ್ನು ಮಹಾರಾಷ್ಟ್ರದಲ್ಲಿ ಅತೀ ದೊಡ್ಡ ನಗರ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಪುಣೆ ನಗರ ಪಾಲಿಕೆ(ಪಿಎಂಸಿ)ಯ ವ್ಯಾಪ್ತಿಯನ್ನು ವಿಸ್ತರಿಸಿ ಮಹಾ ಸರಕಾರ ಆದೇಶ ಹೊರಡಿಸಿದ್ದು, ಪರಿಣಾಮವಾಗಿ ಇನ್ನೂ 23 ಹೊಸ ಗ್ರಾಮಗಳು ಪುಣೆಯ ವ್ಯಾಪ್ತಿಗೆ ಬಂದವು. ಹೀಗಾಗಿ ಮಹಾರಾಷ್ಟ್ರದ ಅತೀ ದೊಡ್ಡ ನಗರ ಮಾತ್ರವಲ್ಲದೇ, ಭೌಗೋಳಿಕ ಪ್ರದೇಶದ ಆಧಾರದಲ್ಲಿ ಪುಣೆಯು ಭಾರತದಲ್ಲೇ 7ನೇ ಅತೀ ದೊಡ್ಡ ನಗರ ಎಂಬ ಖ್ಯಾತಿಗೂ ಪಾತ್ರವಾಯಿತು.
2014ರಲ್ಲಿ ಮಹಾರಾಷ್ಟ್ರ ಸರಕಾರವು ಪಿಎಂಸಿ ವ್ಯಾಪ್ತಿಗೆ 34 ಗ್ರಾಮಗಳನ್ನು ವಿಲೀನಗೊಳಿಸಲು ನಿರ್ಧರಿಸಿತ್ತು. ಆದರೆ ಪ್ರಕ್ರಿಯೆ ವಿಳಂಬವಾದ ಕಾರಣ ಕೇವಲ 11 ಗ್ರಾಮಗಳನ್ನಷ್ಟೇ ಸೇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಲವು ಗ್ರಾಮಗಳು ಕೋರ್ಟ್ ಮೆಟ್ಟಿಲೇರಿದ್ದವು. 2017ರಲ್ಲಿ ಮಧ್ಯಪ್ರವೇಶಿಸಿದ ಬಾಂಬೆ ಹೈಕೋರ್ಟ್, ಗ್ರಾಮಗಳ ವಿಲೀನಕ್ಕೆ ವಿಳಂಬವೇಕೆ ಆಗುತ್ತಿದೆ ಎಂದು ಮಹಾ ಸರಕಾರದಿಂದ ವಿವರಣೆ ಕೇಳಿತ್ತು.
ಪುಣೆ ಪಾಲಿಕೆಯ ಭೌಗೋಳಿಕ ಪ್ರದೇಶದ ವಿಸ್ತೀರ್ಣ- 516.18 ಚದರ ಕಿ.ಮೀ.
ಬೃಹನ್ಮುಂಬಯಿ ನಗರ ಪಾಲಿಕೆ ವಿಸ್ತೀರ್ಣ
– 440 ಚದರ ಕಿ.ಮೀ.
ಹೊಸದಾಗಿ ಪಿಎಂಸಿ ವ್ಯಾಪ್ತಿಗೆ ಬಂದ ಗ್ರಾಮಗಳು- 23
ಈಗ ಪುಣೆ ದೇಶದ ಎಷ್ಟನೇ ಅತೀದೊಡ್ಡ ನಗರ?- 7ನೇ
ಹೊಸ ಪ್ರದೇಶಗಳ ಅಭಿವೃದ್ಧಿಗೆ ಅಗತ್ಯ ವಿರುವ ಮೊತ್ತ- 10,000 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.