ಆರ್ಥಿಕ ವರ್ಷ 2021 ರ ಮೊದಲ ತ್ರೈಮಾಸಿಕದಲ್ಲಿ ಅತ್ಯಧಿಕ ರಫ್ತು : ಪಿಯೂಷ್ ಗೋಯಲ್
Team Udayavani, Jul 2, 2021, 4:26 PM IST
ನವ ದೆಹಲಿ : ಭಾರತವು ಆರ್ಥಿಕ ವರ್ಷ 2021 ರ ಮೊದಲ ತ್ರೈಮಾಸಿಕದಲ್ಲಿ ಅತ್ಯಧಿಕ ರಫ್ತು ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಇಂದು(ಶುಕ್ರವಾರ, ಜುಲೈ 2) ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೋಯಲ್, ಈ ಆರ್ಥಿಕ ವರ್ಷದ ಒಟ್ಟು ರಫ್ತುಗಳನ್ನು 95 ಬಿಲಿಯನ್ ಎಂದು ಅಂದಾಜಿಸಲಾಗಿದೆ, ಇದು ಆರ್ಥಿಕ ವರ್ಷ 18-19 ರಲ್ಲಿ ಮೊದಲ ತ್ರೈಮಾಸಿಕದ ರಫ್ತಿಗೆ ಹೋಲಿಸಿದರೆ ಶೇಕಡಾ 16 ರಷ್ಟು ಹೆಚ್ಚಾಗಿದೆ, ಅದು 82 ಬಿಲಿಯನ್ ಆಗಿತ್ತು. ಆರ್ಥಿಕ ವರ್ಷ 20 ರ ನಾಲ್ಕನೇ ತ್ರೈಮಾಸಿಕದಲ್ಲಿ ರಫ್ತು 90 ಬಿಲಿಯನ್ ದಾಟಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಕೋವಿಡ್ ಸೋಂಕಿನ ಹೆಚ್ಚಳದ ಹಿನ್ನೆಲೆ ಮತ್ತೆ ಲಾಕ್ ಡೌನ್ ಮೊರೆ ಹೋದ ಇಂಡೋನೇಷ್ಯಾ
ಉದ್ಯಮದ ಕ್ಷೇತ್ರಗಳ ಭವಿಷ್ಯದ ಬಗ್ಗೆ ಭರವಸೆ ನೀಡಿದ ಅವರು, ಕೋವಿಡ್ 19 ಸಾಂಕ್ರಾಮಿಕದ ಅಪಾಯಕಾರಿ ಪರಿಣಾಮಗಳಿಂದ ಭಾರತೀಯ ಆರ್ಥಿಕತೆಯು ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಎಫ್ ಡಿ ಐ ಮತ್ತು ರಾಷ್ಟ್ರದ ರಫ್ತು ಕಾಲಾಂತರದಲ್ಲಿ ಹೆಚ್ಚಾಗಿದೆ ಮತ್ತು ದೇಶದ ವೈದ್ಯಕೀಯ ಮತ್ತು ಆರ್ಥಿಕ ಮೂಲಸೌಕರ್ಯಗಳನ್ನು ಸುಧಾರಿಸುವ ಪ್ರಯತ್ನಗಳಿಗೆ ನೆರವಾಗಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇನ್ನು, ಆರ್ಥಿಕ ವರ್ಷ 20-21 ರ ಎಫ್ ಡಿ ಐ ಒಳಹರಿವು. 81.72 ಬಿಲಿಯನ್ ಆಗಿದ್ದರೆ, 2021 ರ ಏಪ್ರಿಲ್ ನಲ್ಲಿ ಎಫ್ ಡಿ ಐ ಒಳಹರಿವು 6.24 ಮಿಲಿಯನ್ ಆಗಿದ್ದು, ಇದು ಏಪ್ರಿಲ್ 2020 ಕ್ಕೆ ಹೋಲಿಸಿದರೆ 38 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಆರ್ಥಿಕತೆಯ ಮೇಲೆ ತೀವ್ರವಾದ ಹೊಡೆತ ನೀಡಿದರ ಹೊರತಾಗಿಯೂ, ದೇಶದ ರಫ್ತುಗಳಿಗೆ 2021 ರ ಮೊದಲ ತ್ರೈಮಾಸಿಕದಲ್ಲಿ ಏಪ್ರಿಲ್ ತಿಂಗಳಿನಿಂದ ಜೂನ್ ವರೆಗೆ ಪರಿಣಾಮ ಬೀರಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : “ಪಿಂಕಿ ಎಲ್ಲಿ?’ ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.