ಅಭಿವೃದ್ಧಿ ಹರಿಕಾರ-ಜನರ ಕನಸು ಸಾಕಾರ : ದಣಿವರಿಯದ ಹಿರಿಯ ಶಾಸಕ ಎನ್.ವೈ. ಗೋಪಾಲಕೃಷ್ಣ
ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೆ 70ನೇ ಜನ್ಮದಿನದ ಶುಭಾಶಯಗಳು
Team Udayavani, Jul 3, 2021, 7:30 AM IST
ಶುಭ್ರ ಶ್ವೇತ ವಸ್ತ್ರಧಾರಿ. ಮಂದಸ್ಮಿತ ಮುಖ. ಯಾವುದೇ ಹಮ್ಮು-ಬಿಮ್ಮು ಅರಿಯದ ಸರಳ ವ್ಯಕ್ತಿತ್ವ. “ಜನ ಸೇವೆಯೇ ಜನಾರ್ದನನ ಸೇವೆ’ ಎನ್ನುವ ತತ್ವದಡಿ ನಂಬಿಕೆ ಇಟ್ಟು ಅದನ್ನೇ ತಮ್ಮ ಗುರಿಯಾಗಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದವರು ಹಿರಿಯ ರಾಜಕಾರಣಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ.
ಸಾಮಾಜಿಕ ಸೇವೆ, ನೊಂದವರ ಕಷ್ಟಕ್ಕೆ ಸ್ಪಂದಿಸುವುದು ಹಾಗೂ ಸಮಗ್ರ ಅಭಿವೃದ್ಧಿ ಇದು ರಾಜಕೀಯ ಕ್ಷೇತ್ರದಲ್ಲಿ ದುಡಿಯುವವರ ಮೂಲ ಮಂತ್ರವಾಗಬೇಕು ಎಂಬುದನ್ನು ಚೆನ್ನಾಗಿ ಅರಿತಿರುವ ಎನ್.ವೈ.ಜಿ ಇಂದಿಗೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಮೊದಲು ಬಿಸಿಲುನಾಡು ಬಳ್ಳಾರಿ ಈಗ ಹೊಸ ಜಿಲ್ಲೆ ವಿಜಯನಗರ ವ್ಯಾಪ್ತಿಯ ಕೂಡ್ಲಿಗಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ ಗೋಪಾಲಕೃಷ್ಣ ಅವರು ಕ್ಷೇತ್ರದ ಅಭಿವೃದ್ಧಿ ಹರಿಕಾರ ಎನಿಸಿಕೊಂಡಿದ್ದಾರೆ. ಶಾಸಕರಾದ ನಂತರ ಇಂದಿನವರೆಗೂ ಇಡೀ ಕ್ಷೇತ್ರದಲ್ಲಿ ಸಂಚರಿಸುತ್ತ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತ ಇಡೀ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟು ಕಾರ್ಯೋನ್ಮುಖರಾಗಿದ್ದಾರೆ. ಕಳೆದ ಮೂರು ವರ್ಷದಲ್ಲಿ ಕ್ಷೇತ್ರದಲ್ಲಿ ಆದ ಹಲವು ಅಭಿವೃದ್ಧಿ ಕಾರ್ಯಗಳು ಇವರ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ.
ಅಭಿವೃದ್ಧಿ ಹರಿಕಾರ: ಈ ಹಿಂದೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿದ್ದ ಗೋಪಾಲಕೃಷ್ಣ ಇದೇ ಮೊದಲ ಬಾರಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಕ್ಷೇತ್ರ ಹೊಸದಾದರೂ ಅನುಭವಿ ರಾಜಕಾರಣಿಯಾಗಿರುವ ಅವರಿಗೆ ಇಡೀ ಕ್ಷೇತ್ರದ ಜನರಮಿಡಿತ ಅರಿಯುವುದು ಕಷ್ಟವಾಗಿಲ್ಲ. ಈ ಕ್ಷೇತ್ರದ ಅಭಿವೃದ್ಧಿಗೆ ಆಗಬೇಕಾದ ಕಾರ್ಯ ಏನು? ಇಡೀ ಕ್ಷೇತ್ರದಲ್ಲಿ ಸಾಮೂಹಿಕವಾಗಿರುವ ಸಮಸ್ಯೆ ಯಾವುದು? ಆದ್ಯತೆ ಮೇರೆಗೆ ಯಾವ ಕಾರ್ಯ ಕೈಗೊಳ್ಳಬೇಕು? ಜನರ ಹಾಗೂ ಅಧಿಕಾರಿ ವರ್ಗದ ವಿಶ್ವಾಸ ಗಳಿಸಿ ಹೇಗೆ ಕೆಲಸ ಮಾಡಬೇಕು ಎಂಬುದನ್ನೆಲ್ಲ ಅರಿತು ಕ್ಷೇತ್ರದಲ್ಲಿ ಮುಂದಡಿ ಇಟ್ಟ ಗೋಪಾಲಕೃಷ್ಣ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ್ದಾರೆ. ಕೇವಲ ಮೂರು ವರ್ಷದಲ್ಲಿ ತಮ್ಮ ಯೋಚನೆ, ಹಾಗೂ ಅನೇಕ ಯೋಜನೆಗಳ ಮೂಲಕ ಕ್ಷೇತ್ರದ ಜನರಿಂದ ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಎಲ್ಲ ವರ್ಗದ ಎಲ್ಲ ಸಮುದಾಯದವರ ಪ್ರೀತಿಗೆ ಪಾತ್ರರಾಗಿರುವ ಎನ್.ವೈ.ಜಿ ತಮ್ಮ ಸರಳ ನಡೆ-ನುಡಿ ಹಾಗೂ ವ್ಯಕ್ತಿತ್ವದಿಂದ ಜನಾನುರಾಗಿ ಎನಿಸಿಕೊಂಡಿದ್ದಾರೆ. ಕೇವಲ ಮೂರು ವರ್ಷಗಳ ಅವಧಿಯಲ್ಲೇ ಶಿಕ್ಷಣ, ನೀರಾವರಿ ಸೇರಿ ಎಲ್ಲ ವಿಭಾಗಕ್ಕೂ ಆದ್ಯತೆ ನೀಡುವ ಮೂಲಕ ಆಯಾ ವಲಯದ ಅಭಿವೃದ್ಧಿಯಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದ ಪ್ರಗತಿ, ಗ್ರಾಮೀಣ ರಸ್ತೆ ಸುಧಾರಣೆ, ಕುಡಿವ ನೀರಿನ ಸೌಲಭ್ಯ, ಬಡವರಿಗೆ ಸೂರು, ವಿವಿಧ ಇಲಾಖೆಗಳ ಹೊಸ ಕಟ್ಟಡಗಳ ನಿರ್ಮಾಣ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಎನ್.ವೈ. ಗೋಪಾಲಕೃಷ್ಣ ಒತ್ತು ನೀಡಿದ್ದಾರೆ.
ಅಭಿವೃದ್ಧಿಗೆ ಶಿಕ್ಷಣವೇ ಮೂಲ: ಶೈಕ್ಷಣಿಕ ಪ್ರಗತಿಯೇ ಅಭಿವೃದ್ಧಿಯ ಮೂಲಮಂತ್ರ ಎನ್ನುವುದನ್ನು ಅರಿತ ಸ್ವತಃ ಎಂಬಿಎ ಪದವೀಧರರಾದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಸುಸಜ್ಜಿತವಾದ ಶಾಲಾ ಕೊಠಡಿಗಳು ನಿರ್ಮಾಣ ಆಗಿರುವುದೇ ಅವರ ಶಿಕ್ಷಣ ಪ್ರೇಮಕ್ಕೆ ಸಾಕ್ಷಿ.
ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಒಟ್ಟು 239 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಬಿಸಿಯೂಟ ತಯಾರಿಕೆಯ 30 ಕೊಠಡಿಗಳು, ಶಾಲಾ ಶೌಚಾಲಯದ 21 ಕಟ್ಟಡಗಳು, ಶುದ್ಧ ಕುಡಿಯುವ ನೀರಿನ 10 ಘಟಕಗಳು ಹಾಗೂ 9 ಶಾಲೆಗಳಿಗೆ ಪ್ರಯೋಗಾಲಯಗಳು, ಎರಡು ಶಾಲೆಗಳಿಗೆ ಆಟದ ಸಾಮಗ್ರಿ ವಿತರಣೆ ಹೀಗೆ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಈ ವರೆಗೆ 25.29 ಕೋಟಿ ರೂ. ಅನುದಾನ ಬಳಸಿರುವುದು ಹೆಗ್ಗಳಿಕೆಯ ಸಂಗತಿಯಾಗಿದೆ.ಯಾವುದೇ ಹಳ್ಳಿಯ ಶಾಲೆಗಳಿಗೆ ಭೇಟಿ ನೀಡಿದರೂ ಹೊಸ ಶಾಲಾ ಕೊಠಡಿಗಳು ಕಣ್ಣಿಗೆ ಕಾಣುತ್ತವೆ. ಕ್ಷೇತ್ರದ ಗಡಿಭಾಗದ ಹಳ್ಳಿಗಳಿಗೆ ಹೆಚ್ಚಿನ ಒತ್ತು ನೀಡಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವುದು ಶಾಸಕರ ಉತ್ತಮ ಕಾರ್ಯಕ್ಕೆ ಸಾಕ್ಷಿ ಎಂಬುದು ಅನೇಕರ ಅನಿಸಿಕೆ.
ಹುರುಳಿಹಾಳ್ ಗ್ರಾಮದ ಹತ್ತಿರ ಪರಿಶಿಷ್ಟ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 25 ಕೋಟಿ ರೂ. ಮಂಜೂರಾಗಿದೆ. ಹೊಸಹಳ್ಳಿ ಸಂಗಮೇಶ್ವರ ಬೆಟ್ಟದ ಹತ್ತಿರ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಮಾಡಲು 9.98 ಎಕರೆ ಜಮೀನು ಮಂಜೂರಾಗಿದೆ. ಅಲ್ಲದೆ, ಹಿರೇಹೆಗಾxಳು ಗ್ರಾಮದ ಹತ್ತಿರ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ನಿರ್ಮಾಣ ಮಾಡಲು 8 ಎಕರೆ ಜಮೀನು ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ 20 ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲಿ ಶಂಕುಸ್ಥಾಪನೆಯಾಗಲಿದೆ. ಇನ್ನು, ಹುಡೇಂ ಗ್ರಾಮದ ಹತ್ತಿರ ಏಕಲವ್ಯ ವಸತಿ ಶಾಲೆ ನಿರ್ಮಾಣ ಮಾಡಲು 15 ಎಕರೆ ಜಾಗ ಮಂಜೂರಾಗಿದೆ.
ಇಂದಿನ ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಣವೇ ಶಕ್ತಿ ಎಂಬುದನ್ನು ಅರಿತ ಶಾಸಕರು ತಮ್ಮ ಕ್ಷೇತ್ರದಲ್ಲಿ ಶಿಕ್ಷಣ ಉಳ್ಳವರಿಗಷ್ಟೇ ಸೀಮಿತ ಆಗಬಾರದು. ಬಡವರಿಗೂ ಅಕ್ಷರ ಜ್ಞಾನ ಸಿಗುವುಂತಾಗಬೇಕು ಎಂಬ ಧ್ಯೇಯದೊಂದಿಗೆ ವಸತಿಶಾಲೆ, ಸರಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಾರ್ಯಕ್ಕೆ ಒತ್ತು ನೀಡಿದ್ದಾರೆ. ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ವಿಚಾರಧಾರೆಗಳಿಂದ ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿ ಆಗಿರುವುದಂತು ಸತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.