ನಿರಂತರ ಪರಿಶ್ರಮದಿಂದ ಪ್ರತಿಭೆಗೆ ಅವಕಾಶ: ಪ್ರದೀಪ್ ಬಡೆಕ್ಕಿಲ
Team Udayavani, Jul 3, 2021, 12:59 PM IST
ತಮ್ಮ ಧ್ವನಿಯಿಂದಲೇ ವೀಕ್ಷಕರ ಮನ ಗೆದ್ದಿರುವ ಪ್ರದೀಪ್ ಬಡೆಕ್ಕಿಲ ಉದಯವಾಣಿ ಫೇಸ್ ಬುಕ್ ಲೈವ್ ‘ತೆರೆದಿದ ಮನೆ ಬಾ ಅತಿಥಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಯಣದ ಹೆಜ್ಜೆಯನ್ನು ನೆನಪಿಸಿಕೊಂಡದ್ದು ಹೀಗೆ :
ಕಾರ್ಯಕ್ರಮದ ಆಯ್ದ ಭಾಗ ಇಲ್ಲಿದೆ..
ಆ್ಯಂಕರಿಂಗ್ ಬರುವ ಮುನ್ನ ನಿಮ್ಮ ಜೀವ ಹೇಗಿತ್ತು ?
ಆ್ಯಂಕರಿಂಗ್ ಅಥವಾ ಹಿನ್ನಲೆ ಧ್ವನಿ ನೀಡುವ ಮುಂಚೆ. ನಾನು ನಾನಾ ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಕನ್ನಡ ತಮಿಳಿನ ಸೀರಿಯಲ್ ನಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಆಗಾಗ ಕೆಲ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದೆ.
ವಾಯ್ಸ್ ಓವರ್ ನಲ್ಲಿ ಹೇಗೆಲ್ಲಾ ಅವಕಾಶಗಳಿವೆ ?
ವಾಯ್ಸ್ ಓವರ್ ಇಂಡಸ್ಟ್ರಿಯಲ್ಲಿ ಉತ್ತಮ ಅವಕಾಶಗಳಿವೆ. ಇಲ್ಲಿ 100 ರೂಪಾಯಿಂದ 10 ಸಾವಿರದವರೆಗೂ ಬಹುಬೇಗನೇ ದುಡಿಯಬಹುದು. ಇಲ್ಲಿ ದುಡ್ಡು ಮಾಡಬಹದು. ಅದು ನಿಮ್ಮನ್ನು ನೀವು ಹೇಗೆ ಜನರಿಗೆ ಕನೆಕ್ಟ್ ಆಗ್ತೀರಿ ಅನ್ನೋದರ ಮೇಲೆ ನಿರ್ಧರಿತವಾಗುತ್ತದೆ. ನಿಮ್ಮೊಳಗಿನ ಪ್ರತಿಭೆಯನ್ನು ಹೇಗೆ ಹೊರ ತರುತ್ತಿರಿ ಅನ್ನೋದು ಮುಖ್ಯ. ನಿರಂತರ ಪರಿಶ್ರಮದಿಂದ ಇದು ಸಾದ್ಯ ಎನ್ನುತ್ತಾರೆ ಪ್ರದೀಪ್.
ವಾಯ್ಸ್ ಓವರ್ ನಲ್ಲಿ ಬರುವ ಏರಿಳಿತಗಳ ಸವಾಲಗಳನ್ನು ಹೇಗೆ ಸ್ವೀಕರಿಸಿದ್ದೀರಿ?
ನನ್ನ ಪ್ರಕಾರ ಯಾವುದೋ ಒಂದು ಕಾರ್ತಕ್ರಮಕ್ಕೆ ವಾಯ್ಸ್ ಓವರ್ ನೀಡುವಾಗ. ನಮ್ಮನ್ನು ನಾವು ಒಬ್ಬ ನಟನಂತೆ ಪಳಗಿಸಿಕೊಳ್ಳಬೇಕು. ಹೇಗೆ ಒಬ್ಬ ನಟ ಕಥೆಯ ಪರಿಸ್ಥಿತಿಗೆ ಅನುಗುಣವಾಗಿ ತನ್ನ ಮಾತು,ಭಾವನೆ, ವರ್ತನೆಯನ್ನು ಹೊಂದಿಸಿಕೊಂಡು ನಟಿಸುತ್ತಾನೋ, ಹಾಗೆಯೇ ವಾಯ್ಸ್ ಓವರ್ ನಲ್ಲಿ ಕೂಡ ಆಯಾ ಕಾರ್ಯಕ್ರಮದ ಥೀಮ್ ಅನ್ನು ನಾವು ನಮ್ಮ ಧ್ವನಿಯನ್ನೇ ನಟನೆಯ ಹಾಗೆ ಬಳಸಿಕೊಳ್ಳಬೇಕು.
ಸಾಧನೆಗೆ ಊರಿಂದ ಹೊರಗೆ ಹೋಗುವುದು ಮುಖ್ಯವೂ ಅಥವಾ ಹೊರಗೆ ?
ನಾನು ಮನೆಯಿಂದ 19 ವರ್ಷ ಮನೆಯ ಹೊರಗೆ ಇದ್ದೆ. ಇದರಲ್ಲಿ 12 ವರ್ಷ ಬೆಂಗಳೂರಿನಲ್ಲಿ ಇದ್ದೆ. ಈ ಸಮಯದಲ್ಲಿ ನನ್ನ ಪ್ರತಿಭೆಯನ್ನು ತೋರಿಸಿಕೊಳ್ಳಲು ಸಿನಿಮಾದಲ್ಲಿ ನಟಿಸುವ ಅವಕಾಶ, ಧಾರಾವಾಹಿನಲ್ಲಿ ಅಭಿನಯ, ನಿರೂಪಣೆ ಹಾದಿಯಲ್ಲಿ ನಡೆಯುವ ಅವಕಾಶಗಳು ಸಿಕ್ಕಿತ್ತು. ಈಗ ಅದೆಲ್ಲಾವನ್ನೂ ಪಡೆದು, ಅದೇ ಉತ್ಸಾಹ,ಹುಮ್ಮಸ್ಸಿನಿಂದ ಮನೆಯಿಂದನೇ ಕಳೆದ 4 ವರ್ಷದಿಂದ ಊರಿನಲ್ಲಿದ್ದೇನೆ. ಈಗಿನ ಸಿಟಿಗಳು ಹಿಂದೆ ಹಳ್ಳಿ ಆಗಿತ್ತು. ಈಗ ಡೆವೆಲಪ್ ಆಗಿವೆ. ತಂತ್ರಜ್ಞಾನ ಬೆಳೆದಿರುವುದರಿಂದ. ನಮ್ಮನ್ನು ನಾವು ಒಂದು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ. ಅದಕ್ಕೆ ಊರಾಗಲಿ ಅಥವಾ ಸಿಟಿಯಾಗಲಿ ಯಾವ ಸ್ಥಳವೂ ಸೂಕ್ತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tragedy: ಲಿವಿಂಗ್ ಸಂಗಾತಿಯನ್ನೇ ಕೊಂದು ದೇಹವನ್ನು 40 ತುಂಡು ಮಾಡಿ ಎಸೆದ ಪಾಪಿ…
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.