ಹಾರುವ ಸಿಕ್ಖ್ ನ ಜೀವನ ಓಟ


Team Udayavani, Jul 3, 2021, 3:37 PM IST

ಹಾರುವ ಸಿಕ್ಖ್ ನ ಜೀವನ ಓಟ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 13 ವರ್ಷಗಳಾಗುವಷ್ಟರಲ್ಲೇ ಒಲಂಪಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದ ಕ್ರೀಡಾಪಟುವೊಬ್ಬನ ಸಾಧನೆ ಕ್ರಮೇಣ ಮರೆಯಾಗುವ ಹಾದಿಯಲ್ಲಿತ್ತು. ಆಲ್‌ ಇಂಡಿಯಾ ರೇಡಿಯೋ ಎಷ್ಟೇ ಬಾರಿ ಆತ ಒಲಂಪಿಕ್ಸ್‌ಗೆ ಆಯ್ಕೆಯಾದ ಸುದ್ದಿಯನ್ನು ಉದ್ಘೋಷಿಸಿದರೂ ಆಧುನಿಕ ಪೀಳಿಗೆ ಕಣ್ಣು ತೆರೆಯುವ ಹೊತ್ತಿಗೆ ಕಪಿಲ್‌ ದೇವ್‌, ಪಿ.ಟಿ. ಉಷಾರಂತಹ ಸಾಧಕರು ತೆರೆಯ ಮೇಲಿದ್ದರು. ಬಹುಶಃ ಆ ತೆರೆಮರೆಯ ಸಾಧಕನ ಪ್ರತಿಭೆ ಜಗತ್ತಿಗೆ ತಿಳಿಯಬೇಕಾದರೆ ಸಿನೆಮಾ ತೆರೆ ಕಾಣಬೇಕಾಯಿತು.

ಕ್ರಿಕೆಟ್‌ನಲ್ಲಿ ಸಚಿನ್‌, ಶೂಟಿಂಗ್‌ನಲ್ಲಿ ಅಭಿನವ್‌ ಬಿಂದ್ರಾ, ಚೆಸ್‌ನಲ್ಲಿ ವಿಶ್ವನಾಥನ್‌ ಆನಂದ್‌ ಹೇಗೆ ನಂಬರ್‌ ಒನ್‌ ಆಗಿದ್ದರೋ ಅದೇ ರೀತಿ ಓಟದಲ್ಲಿ ದಾಖಲೆ ಬರೆದಿರುವ “ಹಾರುವ ಸಿಕ್ಖ್’ ಖ್ಯಾತಿಯ ಮಿಲ್ಖಾ ಸಿಂಗ್‌ ಹೆಸರುವಾಸಿಯಾಗಿದ್ದರು.

ಇಂದಿನ ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯಕ್ಕೆ ಸೇರಿರುವ ಗೋವಿಂದಪುರದಲ್ಲಿ 1935ರಲ್ಲಿ ಜನಿಸಿದ ಮಿಲ್ಖಾ ಸಿಂಗ್‌, ಭಾರತದಿಂದ ಪಾಕಿಸ್ಥಾನ ವಿಭಜನೆಗೊಂಡ ವೇಳೆ ನಡೆದ ಕೋಮು ಗಲಭೆಯಲ್ಲಿ 12ನೇ ವಯಸ್ಸಿಗೆ ತಂದೆ ತಾಯಿಯನ್ನು ಕಳೆದುಕೊಂಡರು. ಅಂದು ಜೀವ ಉಳಿಸಿಕೊಳ್ಳಲು ಓಡಲು ಶುರು ಮಾಡಿದ ಅವರು ಮುಂದೆ  ಆ್ಯತ್ಲೆಟಿಕ್ಸ್‌ನಲ್ಲಿ ತ್ರಿವರ್ಣಧ್ವಜ ಹಾರಿಸಲು ಓಡಿದರು.

1947ರ ಹಳೆಯ ದಿಲ್ಲಿಯ ಪುರಾನಾ ಕಿಲಾ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಅತ್ತ ತ್ರಿವರ್ಣ ಧ್ವಜ ಹಾರುತ್ತಿದ್ದರೆ, ಪುರಾನಾ ಕಿಲಾದ ಜನರಿಗೆ ಆ ಸಂತೋಷವೇ ಇರಲಿಲ್ಲ. ಏಕೆಂದರೆ ದೇಶ ವಿಭಜನೆಯ ಹೊತ್ತಿಗೆ ಪಾಕಿಸ್ಥಾನದಿಂದ ನಿರ್ಗತಿಕರಾಗಿ ಬಂದಂತಹ ಜನರಿಗೆ ಆಶ್ರಯ ನೀಡಿತ್ತು ಆ ಹಳೆಯ ಕೋಟೆ. ಪಂಜಾಬ್, ಮುಲ್ತಾನ್‌, ಸಿಂಧ್‌ ಮುಂತಾದ ಕಡೆಗಳಿಂದ ಬಂದವರೆಲ್ಲ ಸೇರಿ ಇನ್ನೊಂದು ರೀತಿಯ ಭಾರತವೇ ನಿರ್ಮಾಣವಾದಂತಿತ್ತು. ಆ ಜನರ ನಡುವೆ ತಂದೆ ತಾಯಿಯನ್ನು ಕಳೆದುಕೊಂಡ ಮಿಲ್ಖಾ ಸಿಂಗ್‌ನಂತಹ ಸಣ್ಣ ಬಾಲಕನ ಕೈಗೆ  ಸಂಘಟನೆಗಳು ನೀಡುವ ಆಹಾರ ಪೊಟ್ಟಣ ಕೂಡ ಕೈಗೆಟಕುತ್ತಿರಲಿಲ್ಲ. ಎಂತಹ ಶೋಚನೀಯ ಪರಿಸ್ಥಿತಿ ಅಲ್ಲವೇ..!

ಹತ್ತಾರು ದಾಖಲೆಗಳ ವೀರ ಮಿಲ್ಖಾ ಸಿಂಗ್‌:

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಿಲ್ಖಾ ಸಿಂಗ್‌ ಆ್ಯತ್ಲೆಟಿಕ್ಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನೂ ಪಡೆದರು. ಏಷ್ಯನ್‌ ಹಾಗೂ ಕಾಮನ್‌ವೆಲ್ತ್  ಗೇಮ್ಸ್‌ನ 400 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಏಕೈಕ ಆ್ಯತ್ಲಿಟ್‌ ಎನ್ನುವ ಹಿರಿಮೆ ಮಿಲ್ಖಾರದ್ದು. 1958, 1962 ಏಷ್ಯನ್‌ ಗೇಮ್ಸ್‌ಗಳಲ್ಲೂ ಮಿಲಾV ಚಿನ್ನದ ಪದಕಗಳನ್ನು ಗೆದ್ದಿದ್ದರು. ಈ ದಾಖಲೆಯು 50 ವರ್ಷಗಳಿಗೂ ಹೆಚ್ಚಿನ ಕಾಲ ಉಳಿದಿತ್ತು.  1956, 1960, 1964ರ ಒಲಿಂಪಿಕ್ಸ್‌ನಲ್ಲಿ ಮಿಲ್ಖಾ ಭಾರತವನ್ನು ಪ್ರತಿನಿಧಿಸಿದ್ದರು. 1960ರ ಒಲಿಂಪಿಕ್ಸ್‌ ನಲ್ಲಿ 400 ಮೀ. ಓಟದಲ್ಲಿ ಮಿಲ್ಖಾ ಕೂದಲೆಳೆಯ ಅಂತರದಲ್ಲಿ ಪದಕದಿಂದ ವಂಚಿತರಾಗಿ 4ನೇ ಸ್ಥಾನ ಪಡೆದಿದ್ದರು. ಭಾರತ ಸರಕಾರ ಅವರಿಗೆ 1959ರಲ್ಲಿ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.  ಭಾರತದಲ್ಲಿ ಕ್ರೀಡೆಗೆ ಪೂರಕ ವಾತಾವರಣವೇ ಇಲ್ಲದ ಹೊತ್ತಿನಲ್ಲಿ ಅವರು ಇಡೀ ದೇಶವನ್ನೇ ತನ್ನತ್ತ ಸೆಳೆದರು. ಅವರಿಂದ ದೇಶದಲ್ಲಿ ಓಟಗಾರರ ದೊಡ್ಡ ಪಡೆಯೇ ಸಿದ್ದವಾಗಿತ್ತು. ಮಿಂಚಿನಂತಹ ಓಟವನ್ನು ನೋಡಿದ ಜನ ಅವರನ್ನು “ಹಾರುವ ಸಿಕ್ಖ್ ‘ ಎಂದೇ ಗೌರವದಿಂದ ಕರೆಯುತ್ತಿದ್ದರು.

ಮಿಲ್ಖಾ ಸಿಂಗ್‌ ಅವರು ಭಾರತ ವಾಲಿಬಾಲ್‌ ತಂಡದ ಮಾಜಿ ನಾಯಕಿ ನಿರ್ಮಲ್‌ ಕೌರ್‌ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮೂರು ಹೆಣ್ಣು ಸೇರಿ ನಾಲ್ಕು ಜನ ಮಕ್ಕಳಿದ್ದಾರೆ. ಇವರ ಪುತ್ರ ಜೀವ್‌, 14 ಅಂತಾರಾಷ್ಟ್ರೀಯ ಗಾಲ್ಫ್  ಟೂರ್ನಿಗಳಲ್ಲಿ ಗೆಲುವು ಸಾಧಿಸಿದ್ದಾರೆ. ಜತೆಗೆ ಪದ್ಮ ಶ್ರೀ ಪ್ರಶಸ್ತಿ ವಿಜೇತ ಕೂಡ ಹೌದು.

ಮಿಲಾV ಸಿಂಗ್‌ ಜೀವನದ ಕುರಿತು ಬಾಲಿವುಡ್‌ನ‌ಲ್ಲಿ ಭಾಗ್‌ ಮಿಲಾV ಭಾಗ್‌’ ಸಿನೆಮಾ ತೆರೆ ಕಂಡು ಬ್ಲಾಕ್‌ಬಸ್ಟರ್‌ ಹಿಟ್‌ ಆಗಿತ್ತು. ಭಾರತದಲ್ಲಿ 60ಕ್ಕೂ ಹೆಚ್ಚು ವಸಂತಗಳೇ ಉರುಳಿದರೂ ಇನ್ನೂ ಆ್ಯತ್ಲೆಟಿಕ್ಸ್‌ನಲ್ಲಿ ಅವರಂತಹ ಮತ್ತೂಬ್ಬ ಆ್ಯತ್ಲೀಟ್‌ನ್ನು ಕಂಡುಕೊಳ್ಳಲಾ ಗದಿರುವುದು ಶೋಚನೀಯ ಸಂಗತಿಯಾಗಿದೆ.

ಒಲಿಂಪಿಕ್ಸ್‌ನಲ್ಲಿ ಭಾರತದ ಆ್ಯತ್ಲೀಟ್‌ಗಳು ಪದಕ ಗೆಲ್ಲುವುದನ್ನು ನೋಡಬೇಕೆಂಬುದು ಮಿಲಾV ಸಿಂಗ್‌ ಅವರ ಬಹುವರ್ಷಗಳ ಬಯಕೆಯಾಗಿತ್ತು. ಮಿಲಾV ಆದರೆ ಜೀವನದ ಓಟ ವನ್ನೇ ನಿಲ್ಲಿಸಿದ ಮೇಲೆ ದೇಶದ ಆ್ಯತ್ಲೀಟ್‌ಗಳು ಪದಕ ಗೆಲ್ಲುವ ಭವಿಷ್ಯದ ದಿನಗಳನ್ನಷ್ಟೇ ಎದುರು ನೋಡಬೇಕಿದೆ.

 

 ದುರ್ಗಾ ಭಟ್‌ ಕೆದುಕೋಡಿ

ಆಳ್ವಾಸ್‌ ಕಾಲೇಜು, ಮೂಡುಬಿದಿರೆ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.