ಗೋಡಂಬಿ ಹೆಸರಲ್ಲಿ ಕಳಪೆ ಅಡಕೆ ಆಮದು: ಕ್ರಮಕ್ಕೆ ಒತ್ತಾಯ
Team Udayavani, Jul 3, 2021, 5:12 PM IST
ರಿಪ್ಪನ್‌ಪೇಟೆ: ದೇಶದಲ್ಲಿನ ಅಡಕೆ ವ್ಯಾಪಾರಿಗಳ ವಂಚಕರ ಜಾಲವುಗೋಡಂಬಿ ಹೆಸರಿನಲ್ಲಿಕಳಪೆ ಗುಣಮಟ್ಟದಅಡಕೆಯನ್ನು ಇಂಡೋನೇಷಿಯಾದಿಂದ ಅಮದುಮಾಡುವ ಮೂಲಕ ದೇಶದ ಅಡಕೆ ಬೆಳೆಗಾರರು ಅರ್ಥಿಕ ಸಂಕಷ್ಟದಲ್ಲಿಸಿಲುಕುವಂತೆ ಮಾಡಿದ್ದಾರೆ. ಕಳೆಪೆ ಅಡಕೆ ಅಮದುಗಾರ ವರ್ತಕರ ಮೇಲೆ ಕಠಿಣ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳುವಂತೆ ಶಾಸಕ ಮತ್ತು ಗೃಹಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಡಕೆವ್ಯಾಪಾರಿಗಳ ವಂಚಕರ ಜಾಲವು ಇಂಡೋನೇಷಿಯ ಮತ್ತು ವಿವಿಧದೇಶಗಳಿಂದ ಕಳಪೆ ಗುಣಮಟ್ಟದ ಅಡಕೆಗಳನ್ನು ಅಮದು ಮಾಡಿ ದೇಶದ ಅಡಕೆ ಗ್ರಾಹಕರಿಗೆ ವಂಚಿಸುವುದರ ಜೊತೆಗೆ ಸರ್ಕಾರಕ್ಕೆ ಸುಂಕದಲ್ಲಿಸಹ ಸಾವಿರಾರು ಕೋಟಿ ರೂ. ಗಳನ್ನು ವಂಚಿಸಿರುವ ಹಿನ್ನೆಲೆಯಲ್ಲಿಮುಂಬಯಿ ಉಚ್ಚ ನ್ಯಾಯಾಲಯದನಾಗಪುರ ಪೀಠದಲ್ಲಿ 16 ಸಾವಿರಕೋಟಿ ರೂ.ಗಳ ಸುಂಕದ ಅವ್ಯವಹಾರಸಾಬೀತಾದ ಕಾರಣ ಸಿಬಿಐ ತನಿಖೆಗೆ ಒಳಪಡಿಸಲಾಗಿದೆ.
ತನಿಖೆಯಲ್ಲಿಯೂ ಅರೋಪ ಸಾಬೀತಾಗಿದೆ. ದೇಶದಲ್ಲಿನಗುಣಮಟ್ಟದ ಅಡಕೆ ಮತ್ತುಅಡಕೆ ಬೆಳೆಗಾರರಿಗೆ ಉತ್ತಮ ಧಾರಣೆ ಸಿಗದೆ ವಂಚಿತರನ್ನಾಗಿಸಿದೆಎಂದು ವಿಷಾದ ವ್ಯಕ್ತಪಡಿಸಿದರು.ಈ ಬಗ್ಗೆ ಕೇಂದ್ರ ಸರ್ಕಾರಪರಿಶೀಲನೆ ನಡೆಸಬೇಕು.ಕಳಪೆ ಗುಣಮಟ್ಟದ ಅಡಕೆ ಅಮದುದೇಶದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದುಈ ಕೃತ್ಯದಲ್ಲಿ ತೊಡಗಿರುವ ಕೇಂದ್ರದ ಸುಂಕದ ಅಧಿಕಾರಿಗಳು ಹಾಗೂ ಅಡಕೆ ಅಮದು ಮಾಡುವ ವಂಚಕ ವರ್ತಕರಿಗೆ ಹೊರದೇಶದಿಂದ ಅಡಕೆ ಅಮದು ಮಾಡಿಕೊಳ್ಳುವುದನ್ನು ನಿಷೇಧಿಸಿ ದೇಶದ ಅಡಕೆ ಬೆಳೆಗಾರರ ಹಿತ ರಕ್ಷಣೆಗೆ ಮುಂದಾಗುವುದರಜೊತೆಗೆ ಭ್ರಷ್ಟ ಅಧಿಕಾರಿಗಳುಮತ್ತು ವಂಚಕ ಅಡಕೆ ವರ್ತಕರ ಮೇಲೆ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಬೆಳ್ಳೂರು ತಿಮ್ಮಪ್ಪ,ನಂದನ್, ಕಗ್ಗಲಿ ಲಿಂಗಪ್ಪ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.