ಯೂರೋ ಕಪ್: ಸ್ಪೇನ್-ಇಟಲಿ ಸೆಮಿಫೈನಲ್ ಸೆಣಸಾಟ
Team Udayavani, Jul 3, 2021, 11:59 PM IST
ಸೇಂಟ್ ಪೀಟರ್ಬರ್ಗ್: ಸ್ಪೇನ್ ಮತ್ತು ಇಟಲಿ ಯೂರೋ ಕಪ್ ಫುಟ್‌ಬಾಲ್ ಪಂದ್ಯಾವಳಿಯ ಸೆಮಿಫೈನಲ್‌ಗೆ ನೆಗೆದಿವೆ. ಕ್ರಮವಾಗಿ ಈ ಎರಡು ತಂಡಗಳಿಗೆ ಶರಣಾದ ಸ್ವಿಜರ್‌ಲ್ಯಾಂಡ್ ಮತ್ತು ಬೆಲ್ಜಿಯಂ ಕೂಟದಿಂದ ನಿರ್ಗಮಿಸಿದವು.
ಸೇಂಟ್ ಪೀಟರ್ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಸ್ ಕನಸನ್ನು ಭಗ್ನಗೊಳಿಸಿತು. ಪೂರ್ಣ ಅವಧಿ, ಹೆಚ್ಚುವರಿ ಅವಧಿಯಲ್ಲಿ ಪಂದ್ಯ 1-1 ಸಮಬಲದಲ್ಲಿತ್ತು. ಬಳಿಕ ಶೂಟೌಟ್‌ನಲ್ಲಿ ಸ್ಪೇನ್ 3-1 ಗೋಲುಗಳಿಂದ ವಿನ್ ಆಯಿತು.
ಮ್ಯೂನಿಚ್‌ನಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಇಟಲಿ 2-1 ಗೋಲುಗಳಿಂದ ಬೆಲ್ಜಿಯಂ ಮೇಲೆ ಸವಾರಿ ಮಾಡಿತು. ಇತ್ತಂಡಗಳ ನಡುವಿನ ಸೆಮಿಫೈನಲ್ ಮಂಗಳವಾರ ನಡುರಾತ್ರಿ ಬಳಿಕ ಲಂಡನ್‌ನ “ವೆಂಬ್ಲಿ ಸ್ಟೇಡಿಯಂ’ನಲ್ಲಿ ನಡೆಯಲಿದೆ.
ಇದನ್ನೂ ಓದಿ :ಪ್ಯಾರಾಲಿಂಪಿಕ್ಸ್ ಗೆ ಭಾರತದ 24 ಕ್ರೀಡಾಪಟುಗಳು
ಕೂಟದ ನೆಚ್ಚಿನ ತಂಡವಾಗಿರುವ ಸ್ಪೇನ್ 8ನೇ ನಿಮಿಷದಲ್ಲೇ ಖಾತೆ ತೆರೆದು ಮೇಲುಗೈ ಸಾಧಿಸಿತು. ಡೆನ್ನಿಸ್ ಝಕಿರ ಗೋಲುವೀರ. 68ನೇ ನಿಮಿಷದ ವರೆಗೆ ಸ್ಪೇನ್ ಮುನ್ನಡೆ ಸಾಧಿಸಿದ್ದನ್ನು ಕಂಡಾಗ ನಿಗದಿತ ಅವಧಿಯಲ್ಲೇ ಗೆಲುವು ಸಾಧಿಸುವ ಸೂಚನೆಯೊಂದು ಲಭಿಸಿತು. ಆಗ ಸ್ವಿಸ್ ನಾಯಕ ಜೆರ್ಡಾನ್ ಶಾಕಿರಿ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು.
ಹೆಚ್ಚುವರಿ ಅವಧಿಯಲ್ಲಿ ಯಾವುದೇ ಗೋಲಾಗಲಿಲ್ಲ. ಶಾಕಿರಿ ಹೇಳಿದಂತೆ ತಂಡಕ್ಕೆ ಅದೃಷ್ಟ ಇರಲಿಲ್ಲ. ಹೀಗಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಸ್ ಕನಸು ಠುಸ್ ಆಯಿತು.
ಇಟಲಿ ಭರ್ಜರಿ ಆರಂಭ
ಬೆಲ್ಜಿಯಂ ವಿರುದ್ಧ ಇಟಲಿ ಭರ್ಜರಿ ಆರಂಭವನ್ನೇ ಪಡೆಯಿತು. ಪ್ರಥಮಾರ್ಧದಲ್ಲೇ ಎರಡು ಗೋಲು ಸಿಡಿಸಿ ಮೆರೆಯಿತು. 31ನೇ ನಿಮಿಷದಲ್ಲಿ ನಿಕೋಲೊ ಬರೆಲ್ಲ, 44ನೇ ನಿಮಿಷದಲ್ಲಿ ಲೊರೆಂಜೊ ಇನ್‌ಸೈನ್ ಗೋಲು ಹೊಡೆದರು. 45 ಪ್ಲಸ್ 2ನೇ ನಿಮಿಷದಲ್ಲಿ ಬೆಲ್ಜಿಯಂನ ರೊಮೆಲು ಲುಕಾಕು ಖಾತೆ ತೆರೆಯುವುದರೊಂದಿಗೆ ಪಂದ್ಯದ ತೀವ್ರತೆ ಹೆಚ್ಚಿತು. ಆದರೆ ಗೋಲುಗಳಿಗೆ ಪ್ರಥಮಾರ್ಧದಲ್ಲೇ ವಿರಾಮ ಬಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.