ಇಂದು ಪ್ರಜ್ವಲ್ ಬರ್ತ್‌ಡೇ: ಸಿನಿಮಾಗಳ ಟೈಟಲ್, ಟೀಸರ್, ಪೋಸ್ಟರ್ ರಿಲೀಸ್
Team Udayavani, Jul 4, 2021, 8:30 AM IST
ಡೈನಾಮಿಕ್ ಪ್ರಿನ್ಸ್ ನಟ ಪ್ರಜ್ವಲ್ ದೇವರಾಜ್‌ಗೆ ಇಂದು (ಜು.4) ಜನ್ಮದಿನದ ಸಂಭ್ರಮ. ಪ್ರತಿವರ್ಷ ಪ್ರಜ್ವಲ್ ದೇವರಾಜ್ ತಮ್ಮ ಜನ್ಮದಿನವನ್ನು ಅಭಿಮಾನಿಗಳು, ಸ್ನೇಹಿತರು ಮತ್ತುಕುಟುಂಬ ವರ್ಗದ ಜೊತೆ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದರು. ಆದರೆ ಕಳೆದ ವರ್ಷದಿಂದ ಕೊರೊನಾ ಆತಂಕ ಪ್ರಜ್ವಲ್ ದೇವರಾಜ್ ಅದ್ಧೂರಿ ಬರ್ತ್‌ಡೇ ಸೆಲೆಬ್ರೇಷನ್‌ಗೆ ಬ್ರೇಕ್ ಹಾಕಿದೆ.
ಕೊರೊನಾ ಲಾಕ್‌ಡೌನ್‌ನಿಂದ ಕಳೆದ ವರ್ಷ ತಮ್ಮ ಬರ್ತ್‌ಡೇಯನ್ನು ಪ್ರಜ್ವಲ್ ದೇವರಾಜ್ ಸರಳವಾಗಿ ಆಚರಿಸಿಕೊಂಡಿದ್ದರು. ಇನ್ನೂ ಈ ವರ್ಷ ಕೂಡ ಕೊರೊನಾ ಎರಡನೇ ಅಲೆಯ ಆತಂಕ ಮುಂದುವರೆದಿರುವುದರಿಂದ, ಈ ಬಾರಿಯೂ ಪ್ರಜ್ವಲ್ ತಮ್ಮ ಹುಟ್ಟುಹಬ್ಬದ ಅದ್ಧೂರಿ ಆಚರಣೆಯಿಂದ ದೂರವಿರುವ ನಿರ್ಧಾರಕ್ಕೆ ಬಂದಿದ್ದಾರೆ. “ಅಭಿಮಾನಿಗಳು ಕೊರೊನಾ ಸಂತ್ರಸ್ಥರಿಗೆ ಸಹಾಯ ಹಸ್ತ ನೀಡುವ ಮೂಲಕ ನನ್ನ ಹುಟ್ಟು ಹಬ್ಬಕ್ಕೆ ಹರಸಿ ಹಾರೈಸಿ ಎಂದುಕೇಳಿಕೊಳ್ಳುತ್ತೇನೆ’ ಎಂದು ಪ್ರಜ್ವಲ್ ಅಭಿಮಾನಿಗಳಲ್ಲಿ ಪ್ರಜ್ವಲ್ ಮನವಿ ಮಾಡಿದ್ದಾರೆ.
ಇನ್ನು, ಬರ್ತ್‌ಡೇ ಪ್ರಯುಕ್ತ ನಟ ಪ್ರಜ್ವಲ್ ದೇವರಾಜ್ ಅಭಿನಯದ ಮುಂಬರುವ ಹಲವು ಸಿನಿಮಾ ತಂಡಗಳು ತಮ್ಮ ಸಿನಿಮಾಗಳ ಟೀಸರ್, ಪೋಸ್ಟರ್, ಫಸ್ಟ್‌ಲುಕ್, ಟೈಟಲ್ ಬಿಡುಗಡೆ ಮಾಡುವ ಮೂಲಕ ತಮ್ಮ ನಾಯಕ ನಟನಿಗೆ ಜನ್ಮದಿನದ ಶುಭಾಶಯ ಕೋರುತ್ತಿವೆ. ಸದ್ಯಕೈಯಲ್ಲಿ ಐದಕ್ಕೂ ಹೆಚ್ಚು ಸಿನಿಮಾಗಳಿವೆ.
“ವೀರಂ’ಟೀಸರ್ ಔಟ್: ಪ್ರಜ್ವಲ್ ದೇವರಾಜ್ ಆ್ಯಕ್ಷನ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ “ವೀರಂ’ ಚಿತ್ರದ ಫಸ್ಟ್ ಟೀಸರ್, ಪ್ರಜ್ವಲ್ ಬರ್ತ್‌ಡೇ ಪ್ರಯುಕ್ತ “ಆನಂದ್ ಆಡಿಯೋ’ ಯು-ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. “ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಶಶಿಧರಕೆ.ಎಂ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ವೀರಂ’ ಚಿತ್ರಕ್ಕೆ ಕುಮಾರ್ ರಾಜ್ (ಖದರ್) ನಿರ್ದೇಶನವಿದೆ. ಚಿತ್ರದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ರಚಿತಾ ರಾಮ್ ಜೋಡಿಯಾಗಿದ್ದಾರೆ. ಶ್ರೀನಗರ ಕಿಟ್ಟಿ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ “ವೀರಂ’ ಟೀಸರ್ ಮಾಸ್ ಆಡಿಯನ್ಸ್ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:ಭೋಜಪುರಿ ಮತ್ತೊಂದು ಚಿತ್ರದಲ್ಲಿ ಬ್ಯುಝಿಯಾದ ನಟಿ ಹರ್ಷಿಕಾ ಪೂಣಚ್ಚ
“ಮಾಫಿಯಾ’ದಲ್ಲಿ ಖಡಕ್ ಲುಕ್: ಪ್ರಜ್ವಲ್ ದೇವರಾಜ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ಅಭಿನಯಿಸುತ್ತಿರುವ, ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ “ಮಾಫಿಯಾ’ ಎಂದು ಟೈಟಲ್ ಇಡಲಾಗಿದೆ. ಪ್ರಜ್ವಲ್ ಬರ್ತ್‌ಡೆ ಪ್ರಯುಕ್ತ ಚಿತ್ರತಂಡ “ಮಾಫಿಯಾ’ ಸಿನಿಮಾ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದೆ. ಇದುಕೂಡ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರದ ಚಿತ್ರವಾಗಿದ್ದು, “ಮಾಫಿಯಾ’ ಟೈಟಲ್ ಪೋಸ್ಟರ್ ಮಾಸ್ ಆಡಿಯನ್ಸ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರವನ್ನು ಕುಮಾರ್ ಬಿ. ನಿರ್ಮಿಸುತ್ತಿದ್ದಾರೆ.
ಅಬ್ಬರ: ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸುತ್ತಿರುವ, ಕೆ. ರಾಮನಾರಾಯಣ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ “ಅಬ್ಬರ’ ಎಂದು ಹೆಸರಿಡಲಾಗಿದ್ದು, ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ” ಸಿ ಆ್ಯಂಡ್ ಎಂ ಮೂವೀಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಬಸವರಾಜ್ ಮಂಚಯ್ಯ ನಿರ್ಮಾಣವಿದೆ. ಇದರ ಜತೆಗೆ ಪ್ರಜ್ವಲ್ ಅವರ ಹೊಸ ಸಿನಿಮಾವು ಇಂದು ಅನೌನ್ಸ್ ಆಗಲಿದ್ದು, ನವೀನ್ ಕುಮಾರ್ ಎನ್ನುವವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ
ನಂದಕಿಶೋರ್ ಜೊತೆ ಆ್ಯಕ್ಷನ್ ಚಿತ್ರ: “ರಶ್ಮಿ ಫಿಲಂಸ್’ ಬ್ಯಾನರ್‌ನಲ್ಲಿ ಸುಮಂತ್ ಕ್ರಾಂತಿ ನಿರ್ಮಾಣದ ಎರಡನೇ ಚಿತ್ರದಲ್ಲಿ ಪ್ರಜ್ವಲ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದುಈ ಚಿತ್ರಕ್ಕೆ “ಪೊಗರು’ ಖ್ಯಾತಿಯ ನಂದಕಿಶೋರ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಪ್ರಜ್ವಲ್ ಬರ್ತ್‌ಡೇ ಪ್ರಯುಕ್ತ ಚಿತ್ರತಂಡ ಚಿತ್ರವನ್ನು ಘೋಷಣೆ ಮಾಡಿದ್ದು, ಸದ್ಯ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರದ ಟೈಟಲ್ ಮತ್ತು ಫಸ್ಟ್‌ಲುಕ್ ಶೀಘ್ರದಲ್ಲೇ ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ರಿಲೀಸ್‌ಗೆ ರೆಡಿ ಅರ್ಜುನ್ ಗೌಡ: ಪ್ರಜ್ವಲ್ ದೇವರಾಜ್ ಅಭಿನಯದ “ಅರ್ಜುನ್ ಗೌಡ’ ಶೀಘ್ರದಲ್ಲಿಯೇ ತೆರೆಗೆ ಬರಲಿದೆ. ಈಗಾಗಲೇ “ಅರ್ಜುನ್ ಗೌಡ’ ಟೈಟಲ್, ಲುಕ್, ಟೀಸರ್, ಟ್ರೇಲರ್ ಮಾಸ್‌ಆಡಿಯನ್ಸ್ ಗಮನ ಸೆಳೆದಿದ್ದು, ಕೋಟಿ ನಿರ್ಮಾಪಕ ರಾಮು ನಿರ್ಮಾಣದ ಈ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಚಿತ್ರಕ್ಕೆ ಲಕ್ಕಿ ಶಂಕರ್ ನಿರ್ದೇಶನವಿದ್ದು, ಚಿತ್ರದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ಅಭಿನಯಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.