ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಹಾರುವ ವಸ್ತು ಪತ್ತೆ: ತನಿಖೆ ಚುರುಕು
Team Udayavani, Jul 4, 2021, 9:51 AM IST
ಶ್ರೀನಗರ: ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯ ಬಿರ್ಪುರ್ ಎಂಬಲ್ಲಿ ಶನಿವಾರ ರಾತ್ರಿ ಹಾರುವ ವಸ್ತುವೊಂದು ಪತ್ತೆಯಾಗಿದೆ. ಆದರೆ ತಕ್ಷಣದ ತನಿಖೆಯ ಬಳಿಕ ಯಾವುದೇ ವಸ್ತು ಪತ್ತೆಯಾಗಿಲ್ಲ.
ಕಳೆದ ಭಾನುವಾರ ಜಮ್ಮುವಿನ ವಾಯುಪಡೆ ನಿಲ್ದಾಣದ ಮೇಲೆ ನಡೆದ ದಾಳಿಯ ಬಳಿಕ ಹಲವು ಡ್ರೋನ್ ಗಳು ಪತ್ತೆಯಾಗುತ್ತಿದೆ. ಗಡಿ ಭಾಗ ಸೇರಿದಂತೆ ಕಳೆದ ಒಂದು ವಾರದಂತೆ ಜಮ್ಮುವಿನ ಹಲವು ಭಾಗದಲ್ಲಿ ಈ ಸಂಶಯಾತ್ಮಕ ಡ್ರೋನ್ ಹಾರಾಟ ನಡೆಯುತ್ತಿದೆ.
ಸಾಂಬಾದ ಬಿರ್ಪುರ್ ನಲ್ಲಿ ಪತ್ತೆಯಾದ ಹಾರುವ ವಸ್ತು ಡ್ರೋನ್ ಅಲ್ಲ ಎಂದು ಸಾಂಬಾ ಪೊಲೀಸರು ತಿಳಿಸಿದ್ದಾರೆ.
ಜೂನ್ 27 ರಂದು ಜಮ್ಮು ವಾಯು ಪಡೆ ನಿಲ್ದಾಣದಲ್ಲಿ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟಗಳ ನಡೆದಿತ್ತು. ನಗರದಲ್ಲಿ ಡ್ರೋನ್ಗಳನ್ನು ಐದು ಸಂದರ್ಭಗಳಲ್ಲಿ ಗುರುತಿಸಲಾಗಿದೆ. ಶುಕ್ರವಾರ ಮುಂಜಾನೆ 4: 25 ರ ಸುಮಾರಿಗೆ ಜಮ್ಮುವಿನ ಅರ್ನಿಯಾ ಸೆಕ್ಟರ್ನ ಅಂತಾರಾಷ್ಟ್ರೀಯ ಗಡಿಯ ಬಳಿ ಡ್ರೋನ್ ಪತ್ತೆಯಾಗಿತ್ತು. ಯೋಧರ ಗುಂಡಿನ ದಾಳಿಯ ಬಳಿಕ ಅದನ್ನು ಹಿಮ್ಮೆಟ್ಟಿಸಲಾಗಿತ್ತು.
ಇದನ್ನೂ ಓದಿ:ಮತ್ತೆ ರಫೇಲ್ ಲಡಾಯಿ: ನ್ಯಾಯಾಂಗ ತನಿಖೆಗೆ ನಡೆಸಲು ಮುಂದಾದ ಫ್ರಾನ್ಸ್
ಐಎಎಫ್ ಮೇಲಿನ ದಾಳಿಯ ಒಂದು ದಿನದ ನಂತರ, ಜೂನ್ 27 ಮತ್ತು 28 ರ ಮಧ್ಯರಾತ್ರಿಯಲ್ಲಿ ಎರಡು ಡ್ರೋನ್ಗಳು ಕಲುಚಕ್ ಮಿಲಿಟರಿ ನಿಲ್ದಾಣದ ಮೇಲೆ ಹಾರಾಡುತ್ತಿರುವುದು ಕಂಡುಬಂದಿದೆ. ನಂತರ ಜಮ್ಮು ಪ್ರದೇಶದಲ್ಲಿ, ವಿಶೇಷವಾಗಿ ಸೇನಾ ಕೇಂದ್ರಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ.
ನಂತರ ಜೂನ್ 29 ರಂದು ಮುಂಜಾನೆ 2.30 ರ ಸುಮಾರಿಗೆ ಜಮ್ಮುವಿನ ಕುಂಜ್ವಾನಿ, ಸುಂಜ್ವಾನ್ ಮತ್ತು ಕಲುಚಕ್ ಪ್ರದೇಶಗಳಲ್ಲಿ ಡ್ರೋನ್ ಗಳು ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.