ಕೇರಳಕ್ಕೆ ಸಿಗಲಿದೆ ಡ್ರೋನ್ ಲ್ಯಾಬ್ : ಡ್ರೋನ್ ನಿಯಂತ್ರಣ ವ್ಯವಸ್ಥೆ ಅಭಿವೃದ್ಧಿಗೂ ಚಿಂತನೆ
ಸೈಬರ್ ವಿಭಾಗ, ಕ್ಷೇತ್ರ ಪರಿಣತರ ನೆರವಿನ ಜತೆಗೆ ಯೋಜನೆ ಅನುಷ್ಠಾನ
Team Udayavani, Jul 4, 2021, 9:40 PM IST
ತಿರುವನಂತಪುರ: ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನ ಕಳ್ಳ ಡ್ರೋನ್ಗಳ ಹಾರಾಟ ಹೆಚ್ಚಾಗಿರುವಂತೆಯೇ, ಅವುಗಳ ನಿಯಂತ್ರಣ ಲೆಕ್ಕಾಚಾರ ನಡೆದಿದೆ. ಕೇರಳದಲ್ಲಿ ನಿಯಮ ಮೀರಿ ಹಾರಾಡುವ ಡ್ರೋನ್ಗಳ ಛೇದನ ಮತ್ತು ಆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಶೋಧನಾ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಇತ್ತೀಚೆಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಅನಿಲ್ ಕಾಂತ್ ಅವರು ಈ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಡ್ರೋನ್ ಬಳಕೆ ಎನ್ನುವುದು ಮುಂದಿನ ದಿನಗಳಲ್ಲಿ ತಾಂತ್ರಿಕ ಕ್ಷೇತ್ರದ ಬೆದರಿಕೆಯ ವಿಚಾರವಾಗಿ ಪರಿಗಣಿಸಲಿದೆ. ಅದನ್ನು ಎದುರಿಸುವ ನಿಟ್ಟಿನಲ್ಲಿ ಕೇರಳ ಪೊಲೀಸ್ ಇಲಾಖೆಯ ಸೈಬರ್ ವಿಭಾಗ, ಸೈಬರ್ಡೂಮ್ ಸಹಯೋಗದಲ್ಲಿ ಡ್ರೋನ್ ಸಂಶೋಧನೆ ಮತ್ತು ಡ್ರೋನ್ ಫೊರೆನ್ಸಿಕ್ ಲ್ಯಾಬ್ ತೆರೆಯಲು ಉದ್ದೇಶಿಸಲಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರು-ಕಾರವಾರ ರೈಲಿಗೆ ಪಾರದರ್ಶಕ ಬೋಗಿ : ವಾರಕ್ಕೆ 3 ಪ್ರಯಾಣ, ಜು.7ರಿಂದ ಪ್ರಯಾಣ ಆರಂಭ
ಇದರ ಜತೆಗೆ ಡ್ರೋನ್ಗಳನ್ನು ತಡೆಯುವ ಕಾರ್ಯ ವಿಧಾನದ ಬಗ್ಗೆಯೂ ಹೊಸ ವ್ಯವಸ್ಥೆ ಹೊಂದುವ ಬಗ್ಗೆ ಯೋಜಿಸುತ್ತಿದೆ ಎಂದು ನೂತನ ಡಿಜಿಪಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸೈಬರ್ ವಿಭಾಗ ಮತ್ತು ಡ್ರೋನ್ ಕ್ಷೇತ್ರದ ಪರಿಣಿತರ ನೆರವು ಪಡೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಉಗ್ರರಿಂದ ಹೆಚ್ಚುತ್ತಿರುವ ಬೆದರಿಕೆ ಹಿನ್ನೆಲೆಯಲ್ಲಿ ಹಾಲಿ ಇರುವ ಉಗ್ರ ನಿಗ್ರಹ ದಳದ ಬಲವರ್ಧನೆಯನ್ನೂ ಮಾಡಲಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.