ಉರಿ ಬಾಳಿಗೆ ತಂಪೆರೆಯುತ್ತಿದ್ದ ಸಂಜೆಯ ಆ ಸಮಯ


Team Udayavani, Jul 4, 2021, 9:45 PM IST

desiswara article

ತ್ಯಾಗರಾಜ ನಗರ ಮತ್ತು  ಅದರ ಸುತ್ತಮುತ್ತಲಿನ ಪರಿಸರವನ್ನು ಇಂದು ನೆನೆದರೂ ಮನಸ್ಸು ಆಹ್ಲಾದಗೊಳ್ಳುತ್ತದೆ. ಡಿವಿಜಿ ರಸ್ತೆಯ ಓಡಾಟ, ಸೌತ್‌ ಎಂಡ್‌ ವೃತ್ತದಲ್ಲಿದ್ದ ಸರಕಾರಿ ಗ್ರಂಥಾಲಯದಿಂದ ತಂದು ಓದುತ್ತಿದ್ದ ಪುಸ್ತಕಗಳು, ಕಾಲೋನಿಯ ಮೂಲೆ ಅಂಗಡಿಯಿಂದ ತಪ್ಪದೆ ತಂದು ಓದುತ್ತಿದ್ದ ಪತ್ರಿಕೆ, ಪ್ರತಿ ಸೋಮವಾರ ಹೋಗಿಬರುತ್ತಿದ್ದ  ಗವಿ ಗಂಗಾಧರ ದೇವಸ್ಥಾನ… ಒಟ್ಟಾರೆ ಅಂದಿನ ಪರಿಸರವೇ  ಜೀವನ ಪ್ರೀತಿಯನ್ನು  ಹೊಮ್ಮಿಸುವಂತಿದ್ದವು. ಕುಸಿದುಹೋಗಿದ್ದ ಆತ್ಮವಿಶ್ವಾಸ ಮತ್ತೆ ತಲೆ ಎತ್ತಿದ್ದು ನಮ್ಮ ಆ  ಹೊಸ ಬಿಡಾರದಲ್ಲಿ. ಮುಕ್ತ ವಾತಾವರಣದಲ್ಲಿ ಬದುಕುವ ಖುಷಿಯ ಮುಂದೆ ಪ್ರಪಂಚದ ಯಾವ ಸುಖವೂ ಹೆಚ್ಚಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದಿದ್ದು ಅÇÉೇ.ಮಾಯಾಮೃಗದ ಮರುಪ್ರಸಾರ ಕೆಲವು ದಿನಗಳ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗತೊಡಗಿತ್ತು.

ಈಗಾಗಲೇ ನೋಡಿದ್ದರೂ ಮತ್ತೆ ಪ್ರಸಾರಗೊಳ್ಳಲಿದ್ದ ಧಾರಾವಾಹಿಗಾಗಿ ನಿರೀಕ್ಷೆ ಹೆಚ್ಚಾಗುವಂತೆ ಮಾಡಿತ್ತು. ಇಪ್ಪತ್ತೆರಡು ವರ್ಷಗಳ ಹಿಂದೆ ದೂರದರ್ಶನದಲ್ಲಿ ಮೂಡಿಬಂದ ಸದಭಿರುಚಿಯ ಸುಂದರ ಧಾರಾವಾಹಿ ಇದು. ಈಗಿನಂತೆ ನೂರೆಂಟು ಚಾನೆಲ್‌ಗ‌ಳು ಇರದಿದ್ದ ಕಾಲದಲ್ಲಿ, ಮನೆ ಮನೆಗಳಲ್ಲೂ ಸಂಜೆ ನಾಲ್ಕರ ಹೊತ್ತಿಗೆ ಮೊಳಗುತ್ತಿದ್ದ ಶೀರ್ಷಿಕೆ  ಗೀತೆ “ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ?..’ ಧಾರಾವಾಹಿಗಿಂತ ಮೊದಲು ಬರುತ್ತಿದ್ದ ಆ ಗೀತೆಯೇ ಬಹಳ ಆಕರ್ಷಕವೆನ್ನಿಸಿತ್ತು. ಯಾಕೆಂದರೆ,  ಒಂದಲ್ಲ ಒಂದು ಆಸೆ, ಆಮಿಷಗಳ ಮಾಯಾಮೃಗದ ಬೆನ್ನು ಹತ್ತಿ ಬಳಲಿದವರೇ ನಾವೆಲ್ಲರು!

ಹನಿಹನಿಯಾಗಿ ಆನಂದಿಸುತ್ತಾ ಮೂರೋ ನಾಲ್ಕೋ ಗುಟುಕಿಗೆ ಮುಗಿದುಹೋಗಿ ಮರುದಿನದ ಕಂತಿಗಾಗಿ ಕಾತರದಿಂದ ಕಾಯುವಂತೆ ಮಾಡುತ್ತಿತ್ತು ಆ ಧಾರಾವಾಹಿ. ಯಾವುದೇ ಹಾಡು, ಸಿನೆಮಾ, ಕತೆ, ಕಾದಂಬರಿಯಾಗಲಿ ಅದರ ನೆನಪುಗಳು ಅದನ್ನು ಕೇಳಿದ, ನೋಡಿದ, ಓದಿದ ದಿನಗಳಲ್ಲಿ ನಾವಿದ್ದ ಪರಿಸ್ಥಿತಿಯೊಂದಿಗೆ ತಳುಕು ಹಾಕಿಕೊಂಡಿರುತ್ತವೆ. ಹಾಗಾಗಿ, ಮಾಯಾಮೃಗದ ಮೊದಲ ಕಂತುಗಳನ್ನು ನೋಡುತ್ತಿದ್ದಂತೆ ನಾನೂ ಕೂಡ ಅಂತಹುದ್ದೇ ನಾಸ್ಟಾಲ್ಜಿಯಾ ಎಂದು ಕರೆಸಿಕೊಳ್ಳುವ ನೆನಪುಗಳ ಅಲೆಯಲ್ಲಿ ತೇಲಿ ಹೋದೆ.

ನಾವು ಆಗಷ್ಟೇ ತ್ಯಾಗರಾಜ ನಗರದ ವಠಾರವೊಂದರಲ್ಲಿ ಸಣ್ಣ ಮನೆ ಹಿಡಿದು, ಎರಡು ಪುಟ್ಟ ಮಕ್ಕಳೊಂದಿಗೆ ಬಿಡಾರ ಹೂಡಿದ್ದೆವು. ಗಂಡನ ಸರಕಾರಿ ಕೆಲಸದಿಂದ ಬರುತ್ತಿದ್ದ  ಸಂಬಳದಿಂದ ತೃಪ್ತಿಯ ಬದುಕು ನಡೆಸಬಹುದಾಗಿದ್ದರೂ ಅವಿವೇಕದಿಂದ ಮಾಡಿಕೊಂಡಿದ್ದ ಅನಗತ್ಯ ಸಾಲಗಳು ಮನಸ್ಸಿನ ನೆಮ್ಮದಿ ಯನ್ನು  ಕಸಿದುಕೊಂಡಿದ್ದವು. ಈ ಮನೆಗೆ ಬರುವ ಮೊದಲು ನಾನಿದ್ದ ಕೌಟುಂಬಿಕ ವಾತಾವರಣ ಉಸಿರು ಗಟ್ಟಿಸುವಂತಿದ್ದು, ನನ್ನೆಲ್ಲ ಜೀವನೋತ್ಸಾಹವನ್ನೇ ಬಸಿದು ಬೆಂಡಾಗಿಸಿತ್ತು. ನನ್ನ ಲೇಖನಿಗೂ ಗ್ರಹಣ ಹಿಡಿದು, ಬರವಣಿಗೆ ನಿಂತೇ ಹೋಗಿತ್ತು.

ಇಲ್ಲಿ ಕಳೆದ ದಿನಗಳು ನನ್ನ ಬದುಕಿನ ರಮ್ಯ ಚೈತ್ರ ಕಾಲವೆನ್ನಬಹುದು. ತ್ಯಾಗರಾಜ ನಗರ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಇಂದು ನೆನೆದರೂ ಮನಸ್ಸು ಆಹ್ಲಾದಗೊಳ್ಳುತ್ತದೆ. ಡಿವಿಜಿ ರಸ್ತೆಯ ಓಡಾಟ, ಸೌತ್‌ ಎಂಡ್‌ ವೃತ್ತದಲ್ಲಿದ್ದ ಸರಕಾರಿ ಗ್ರಂಥಾಲಯದಿಂದ ತಂದು ಓದುತ್ತಿದ್ದ ಪುಸ್ತಕಗಳು, ಕಾಲೋನಿಯ ಮೂಲೆ ಅಂಗಡಿಯಿಂದ ತಪ್ಪದೆ ತಂದು ಓದುತ್ತಿದ್ದ ಹಾಯ್‌ ಬೆಂಗಳೂರು ಪತ್ರಿಕೆ,  ಪ್ರತಿ ಸೋಮವಾರ ಹೋಗಿಬರುತ್ತಿದ್ದ ಗವಿ ಗಂಗಾಧರ ದೇವಸ್ಥಾನ… ಒಟ್ಟಾರೆ ಅಂದಿನ ಪರಿಸರವೇ ಜೀವನ ಪ್ರೀತಿಯನ್ನು ಹೊಮ್ಮಿಸುವಂತಿದ್ದವು. ಕುಸಿದುಹೋಗಿದ್ದ ಆತ್ಮವಿಶ್ವಾಸ ಮತ್ತೆ ತಲೆ ಎತ್ತಿದ್ದು ನಮ್ಮ ಆ  ಹೊಸ ಬಿಡಾರದಲ್ಲಿ. ಮುಕ್ತ ವಾತಾವರಣದಲ್ಲಿ ಬದುಕುವ ಖುಷಿಯ ಮುಂದೆ ಪ್ರಪಂಚದ ಯಾವ ಸುಖವೂ ಹೆಚ್ಚಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದಿದ್ದು ಅÇÉೇ.

ಒಂದೇ ಕೋಣೆಯ ಆ ಬಾಡಿಗೆ ಮನೆ. ಅಡುಗೆ ಮನೆ, ಒಂದು ಹಾಲ…. ಮನೆಯಿಂದ ಹೊರಗೆ ಪುಟ್ಟ ಬಚ್ಚಲು. ಆರೆಂಟು ಮನೆಗಳಿಗೆ ಸೇರಿ ಎರಡು ಟಾಯ್ಲೆಟ್‌ಗಳು!

ಕೋಣೆ ಇತ್ತು ಅದರೆ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಉಗ್ರಾಣದಂಥದ್ದು. ಸಮಸ್ತವೂ ಹಜಾರ ಅಥವಾ ಹಾಲ್‌ನಲ್ಲಿಯೇ ಆಗಬೇಕು. ಆ ಪುಟ್ಟ ಹಾಲಿನ ಮೂಲೆಯಲ್ಲಿ ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ ಆ ಮನೆಯ ಇರಸರಿಕೆಗೆ ಹೊಂದದೆ ಪ್ರತ್ಯೇಕವಾಗಿ ಕಾಣುತ್ತಿದ್ದ, ಆ ಕಾಲಕ್ಕೆ ಅಪರೂಪವೆನ್ನಿಸಿದ್ದ ಇಪ್ಪತ್ತೂಂಬತ್ತು ಇಂಚಿನ ದೊಡ್ಡ ಬಿಪಿಎಲ್‌ ಟಿವಿ. ಕ್ರಿಕೆಟ್‌ ಮ್ಯಾಚ್‌ ಪ್ರಸಾರದ ದಿನಗಳಲ್ಲಂತೂ ನಮ್ಮ ಮನೆಯೇ ಒಂದು ಪುಟ್ಟ ಥಿಯೇಟರ್‌ ಆಗಿ ಪರಿವರ್ತನೆಯಾಗಿರುತ್ತಿತ್ತು. ವಠಾರದಲ್ಲಿದ್ದ ನಮ್ಮ ನೆರೆಹೊರಯವರು ಸರಳ ಮನಸ್ಸಿನ ಸುಂದರ ಜನ. ಯಾವ ಹೊತ್ತಿಗೂ ಯಾವುದೇ ಸಹಾಯಕ್ಕೆ ಸಿದ್ಧರಾಗಿರುತ್ತಿದ್ದ ಉಪಕಾರಿ ಮನೋಭಾವದ ಅವರೆಲ್ಲರನ್ನೂ ಇಂದಿಗೂ ಸ್ಮರಣೀಯರೇ ಆಗಿದ್ದಾರೆ.

ಮೂರು ಮತ್ತು ಐದು ವರ್ಷದವರಾಗಿದ್ದ ಮಕ್ಕಳನ್ನು ಸನಿಹದ ಆಚಾರ್ಯ ಪಾಠಶಾಲೆಗೆ ಸೇರಿಸಿದ್ದೆವು. ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟರೆ ಮಧ್ಯಾಹ್ನ 2.30ಗೆ ವಾಪಸ್‌. ಆಟೋ ಗೊತ್ತು ಮಾಡಿದರೆ ಅದಕ್ಕೆ ಕೊಡಬೇಕಿದ್ದ 125 ರೂಪಾಯಿಗಳನ್ನು ಉಳಿಸಲು ನಾನೇ ಪ್ರತಿದಿನ ಅವರನ್ನು ಕರೆತರುತ್ತಿದೆ. ಮಾಯಾಮೃಗ ಶುರುವಾಗುವುದರೊಳಗೆ ಮನೆ ಸೇರುವ ಧಾವಂತ. ಅದೂ ಇದೂ ಮಾತಾಡುತ್ತಾ ಪುಟ್ಟ ಹೆಜ್ಜೆಗಳನ್ನಿಡುತ್ತಾ ಬರುವ ಮಕ್ಕಳಿಬ್ಬರನ್ನು ಮನೆ ಸೇರಿಸಿ, ಅವರ  ಊಟ-ಉಪಚಾರ ಮುಗಿಸುವುದರೊಳಗೆ  ಆ ಹೊತ್ತು ಸಮೀಪಿಸಿಯೇ ಬಿಟ್ಟಿರುತ್ತಿತ್ತು.

ಹಾಲಿನಲ್ಲಿ ಚಾಪೆ ಹಾಸಿ, ದಿಂಬು ಹಾಕಿ,  ಮಕ್ಕಳನ್ನು ಅಕ್ಕಪಕ್ಕ ಮಲಗಿಸಿಕೊಂಡು ಟಿವಿ ಹಾಕಿದರೆ “ಮಾಯಾಮೃಗ’  ಶೀರ್ಷಿಕೆ ಗೀತೆ ಪ್ರಾರಂಭವಾಗುತ್ತಿತ್ತು.  ಆಹಾ! ಅದೆಂಥಾ ನೆಮ್ಮದಿಯ ಕ್ಷಣಗಳವು!  ನಿ¨ªೆ ಹೋಗಲು ಒಲ್ಲದೆ ಏಳಲು ಹವಣಿಸುತ್ತಿದ್ದ ಮಕ್ಕಳ ಹಣೆಯ ಮೇಲೆ ಮೆಲ್ಲನೆ ತಟ್ಟುತ್ತಾ ನಾನು ಧಾರಾವಾಹಿ ನೋಡಲು ಶುರುಮಾಡುತ್ತಿ¨ªೆ. ಮೂರು ವರ್ಷದ ಮಗ ಬೆಳಗಿನಿಂದ ಆಗಿದ್ದ ದಣಿವಿಗೆ ಕ್ಷಣದÇÉೇ ನಿದ್ರೆಗೆ ಜಾರಿರುತ್ತಿದ್ದ. ಮಗಳು ನಿದ್ರೆಗೆ ಒಪ್ಪದೆ ಕೊಸರಾಡುತ್ತಾ ನನ್ನೊಂದಿಗೆ ಟಿವಿಗೆ ಕಣ್ಣು ಹೂಡುತ್ತಿದ್ದಳು.

ಧಾರಾವಾಹಿ ಮುಗಿಯುವ ಹೊತ್ತಿಗೆ ನನಗೂ ಸಣ್ಣಗೆ ಕಣ್ಣೆಳೆಯಲು ಶುರುವಾಗಿದ್ದನ್ನು ಗಮನಿಸಿದ ಮಗಳು ಎದ್ದು ಮೆಲ್ಲನೆ ಬಾಗಿಲು ತೆರೆದು ಹೊರಗೆ ಓಡಿರುತ್ತಿದ್ದಳು. ಅವಳಿಗಾಗಿ ವಠಾರದ ಮಕ್ಕಳ ದಂಡು ಆಡಲು ಕಾದಿರುತ್ತಿತ್ತು. ಒಂದು ಸಣ್ಣ ನಿದ್ರೆಯಿಂದ ಎ¨ªಾಗಲೂ ಮನಸ್ಸಿನಲ್ಲಿ ಮಾಯಾಮೃಗ.. ಮಾಯಾಮೃಗ.. ಮಾಯಾಮೃಗವೆಲ್ಲಿ?.. ಸುಳಿದಾಡುತ್ತಿತ್ತು.

ಅನಂತರ ನಾವು ಹೊಸ ಕನಸುಗಳನ್ನು ಹೊತ್ತು ಅಮೆರಿಕಕ್ಕೆ ಬಂದೆವು.  ಇಲ್ಲಿ ಬಂದಿಳಿದ ಪ್ರಾರಂಭದಲ್ಲಿ ಎದುರಾಗಿದ್ದು ಮತ್ತೆ ಅಸ್ಥಿರ, ಅಭದ್ರತೆಯ ದಿನಗಳೇ!  ಹೇಗೋ ಒಂದು ನೆಲೆ ಕಂಡುಕೊಂಡಿದ್ದ, ಆ ಬದುಕನ್ನು ತೊರೆದು ಇದಾವ ಮಾಯಾಮೃಗವನ್ನರಸಿ ಇಲ್ಲಿಗೆ ಬಂದೆವು? ಎಂಬ ದುಗುಡ ಮನವನ್ನು ಆವರಿಸದ ದಿನಗಳಿಲ್ಲ. ಆ ದಿನಗಳೂ ಸರಿದವು.

ಹೊಸ  ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಾ ಮುಂದೆ ಸಾಗಿದಂತೆ ಬದುಕು ಹೂ ಹಾದಿಯನ್ನೇ ನಮ್ಮೆದುರು ತೆರೆಯಿತು. ಅಂದು ನನ್ನ ಹಿಂದೆಮುಂದೆ  ಸುತ್ತಾಡುತ್ತಾ, ಬಾಂದಳದಲಿ ಮೆರೆಯುತ್ತಿದೆ ಮಾಯಾಮೃಗ ಚರ್ಮ ಎಂದು ತಮಗೆ ತಿಳಿದಂತೆ ಜೋರಾಗಿ  ಹಾಡಿಕೊಳ್ಳುತ್ತಿದ್ದ ಮಕ್ಕಳು ಇಂದು ಬೆಳೆದಿದ್ದಾರೆ. ಓದು ಮುಗಿಸಿ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ.

ಯೂಟ್ಯೂಬ್‌ನಲ್ಲಿ ಮಾಯಾಮೃಗದ ಮೊದಲ ಕೆಲವು ಎಪಿಸೋಡುಗಳನ್ನು ನೋಡುತ್ತಿರುವಂತೆ ನನ್ನ ಬದುಕೇ ಮತ್ತೂಮ್ಮೆ ಮನದ ಪರದೆಯ ಮೇಲೆ ಮರುಕಳಿಸಿದಂತಯಿತು. ನನ್ನಂತೆಯೇ ಬದುಕಿನ ಬೇಗೆಯಲ್ಲಿ ಬೆಂದು ಹೋಗುತ್ತಿದ್ದ ಅನೇಕರ ಬಾಳಿಗೆ ನೆಮ್ಮದಿ ಹನಿಸುತ್ತಿದ್ದ ಮಾಯಾಮೃಗ ಪ್ರಸಾರವಾಗುತ್ತಿದ್ದ ಆ ದಿನಗಳ ನೆನಪೇ ಹಿತವೆನ್ನಿಸುತ್ತದೆ.

ಈ ಚಂದದ ಧಾರಾವಾಹಿಯನ್ನು ನಮ್ಮ ಕಣ್ಣುಗಳೆದುರು ತೆರೆದಿಟ್ಟ  ನಿರ್ದೇಶಕ ಟಿ.ಎನ್‌. ಸೀತಾರಾಂ ಮತ್ತವರ ತಂಡ ಇಂದಿಗೂ ಮನೆಮನದಂಗಳದಲ್ಲಿ ನೆಲೆಯಾಗಿದ್ದಾರೆ.

ತ್ರಿವೇಣಿ ಶ್ರೀನಿವಾಸ ರಾವ್‌, 

ಶಿಕಾಗೋ

ಟಾಪ್ ನ್ಯೂಸ್

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.