ಅಂಗಮಾರಿ ನಿಯಂತ್ರಿಸಿ ಉತ್ತಮ ದಾಳಿಂಬೆ ಬೆಳೆದ ರೈತ

­4 ಎಕರೆ ಪ್ರದೇಶದಲ್ಲಿ 1500 ಗಿಡ ನಾಟಿ ­7 ಟನ್‌ ಇಳುವರಿ ನಿರೀಕ್ಷೆ

Team Udayavani, Jul 4, 2021, 9:44 PM IST

3-kst-3

ಕುಷ್ಟಗಿ: ದುಂಡಾಣು ಅಂಗಮಾರಿ ರೋಗವನ್ನು ಕಾಲ ಕಾಲಕ್ಕೆ ಔಷಧ ಕ್ರಮಗಳಿಂದ ನಿಯಂತ್ರಿಸಿಕೊಂಡು ಈ ಬೆಳೆ ಬೆಳೆಯುವುದು ರೈತರಿಗೆ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಕುಷ್ಟಗಿಯ ರೈತ ರಮೇಶ ಕೊನಸಾಗರ ಅವರು, ದುಂಡಾಣು ಅಂಗಮಾರಿ ನಿಯಂತ್ರಿಸಿಕೊಂಡು ಈ ಬಾರಿ ಭರ್ಜರಿ ದಾಳಿಂಬೆ ಬೆಳೆದಿದ್ದಾರೆ.

ತಾಲೂಕಿನ ನಿಡಶೇಸಿ ಸೀಮಾದಲ್ಲಿ 13 ಎಕರೆ ಜಮೀನಿನಲ್ಲಿ 4 ಎಕರೆ ಪ್ರದೇಶದಲ್ಲಿ ದಾಳಿಂಬೆಗೆ ಕಾಡುವ ದುಂಡಾಣು ಅಂಗಮಾರಿ ರೋಗ ಹಾವಳಿ ಮಧ್ಯೆಯೂ ಉತ್ತಮ ಇಳುವರಿ ಸಾಧ್ಯವಾಗಿದೆ. ಹಿರಿಯ ರೈತರಾದ ಜಗನ್ನಾಥ ಗೋತಗಿ, ಕುಂಬಾರ, ಶಂಕರ್‌ ಮೊದಲಾದವರ ಮಾರ್ಗದರ್ಶನದಲ್ಲಿ ಈ ಬೆಳೆ ಬೆಳೆದಿದ್ದು ಈ ಬಾರಿ ಸರಾಸರಿ 20 ಟನ್‌ ಇಳುವರಿ ನಿರೀಕ್ಷೆಯಲ್ಲಿದ್ದಾರೆ ರಮೇಶ.

ಕಳೆದ 2019ರ ಜೂನ್‌ ತಿಂಗಳಿನಲ್ಲಿ ಗುಜರಾತ್‌ ರಾಜ್ಯದ ಕೇಡಲ್‌ನಿಂದ ಪ್ರತಿ ಸಸಿಗೆ 32 ರೂ. ನಂತೆ ಖರೀದಿ ಸಿ 4 ಎಕರೆ ಪ್ರದೇಶದಲ್ಲಿ 1500 ಗಿಡಗಳನ್ನು ನಾಟಿ ಮಾಡಿದ್ದಾರೆ. ಆರಂಭದಿಂದಲೂ ಹಂತ ಹಂತವಾಗಿ ನಿರ್ವಹಣೆ ವೆಚ್ಚ 6 ಲಕ್ಷ ರೂ. ಖರ್ಚಾಗಿದೆ. ಕಳೆದ 2020ರಲ್ಲಿ ವರ್ಷದ ಗಿಡಕ್ಕೆ ದಾಳಿಂಬೆ ಕಾಯಿ ಭಾರ ಆಗದಂತೆ ಹೆಚ್ಚುವರಿ ಕಾಯಿಗಳನ್ನು ತೆಗೆದು ಹಾಕಿದಾಗ್ಯೂ, ಮೊದಲ ಪ್ರಾಯೋಗಿಕ ಕಟಾವಿಗೆ 7 ಟನ್‌ ಇಳುವರಿಯಲ್ಲಿ ಪ್ರತಿ ಕೆ.ಜಿ. 90ರಿಂದ 100 ರೂ.ವರೆಗೆ 6 ಲಕ್ಷ ರೂ. ಆದಾಯ ಬಂದಿದೆ. ಈ ಬಾರಿ ಪ್ರತಿ ಗಿಡ ಹೊರಲಾರದಂತಹ ಇಳುವರಿ ಕಾಣಬಹುದು.

ಗಿಡಗಳಿಗೆ ಭಾರ ಕವಲು ಕಟ್ಟಿಗೆ ಸಹಾಯದಿಂದ ತಂತಿಗೆ ಎಳೆದು ಕಟ್ಟಿದ್ದರೂ, ಸಹ ಗಿಡಗಳು ಹಣ್ಣಿನ ಬಾರಕ್ಕೆ ಜೋತು ಬಿದ್ದಿವೆ. ದುಂಡಾಣು ಅಂಗಮಾರಿ ರೋಗದ ಮಧ್ಯೆ, ಗಾಳಿ-ಮಳೆ ಸಂದರ್ಭದಲ್ಲಿ ಬೆಳೆ ಕಟಾವು ನಿರ್ವಹಿಸಬೇಕಾದ ಅನಿವಾರ್ಯತೆ ರೈತ ರಮೇಶ ಕೊನಸಾಗರ ಅವರಿಗೆ ಇದೆ. ಈ ಹಿನ್ನೆಲೆಯಲ್ಲಿ 15 ದಿನಗಳಲ್ಲಿ ಕಟಾವು ಮಾಡಲು ನಿರ್ಧರಿಸಿರುವ ಅವರಿಗೆ ಈಗಾಗಲೇ ಬೆಂಗಳೂರು ಇತರೆಡೆಗಳಿಂದ ಪ್ರತಿ ಕೆಜಿಗೆ 80ರಿಂದ 90 ರೂ.ಗೆ ಖರೀ  ದಿಸಲು ಮುಂದಾಗಿದ್ದಾರೆ.

ಟಾಪ್ ನ್ಯೂಸ್

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

4-gangavathi

Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.