ಇಂದಿನಿಂದ ಅರಮನೆ ನಗರಿ ಅನ್‌ಲಾಕ್
Team Udayavani, Jul 5, 2021, 6:13 PM IST
ಮೈಸೂರು: ಸತತ 70 ದಿನದಿಂದ ಜಾರಿಯಲ್ಲಿದ್ದಲಾಕ್‌ಡೌನ್ ಸೋಮವಾರ ಕೊನೆಯಾಗಲಿದ್ದು,ಸಾಂಸ್ಕೃತಿಕ ನಗರಿ ಮೈಸೂರು ಸೋಮವಾರದ ಅನ್‌ಲಾಕ್ ಸ್ವಾಗತಿಸಲು ಸಜ್ಜಾಗಿದೆ.
ಕೊರೊನಾ ಲಾಕ್‌ಡೌನ್ ಹಿನ್ನೆಲೆ ಏಪ್ರಿಲ್ ಕೊನೆವಾರದಲ್ಲಿ ಬಂದ್ ಆಗಿದ್ದ ಮೈಸೂರಿನ ಪ್ರವಾಸಿತಾಣಗಳಾದ ಮೃಗಾಲಯ, ಅರಮನೆ, ಚಾಮುಂಡಿ ಬೆಟ್ಟ,ನಂಜನಗೂಡು ಸೇರಿದಂತೆ ಹಲವು ಪ್ರೇಕ್ಷಣೀಯಸ್ಥಳಗಳು 70 ದಿನಗಳ ಬಳಿಕ ಸಾರ್ವಜನಿಕರು,ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿವೆ. ಜತೆಗೆಜಿಲ್ಲೆಯ ಎಲ್ಲಾ ವಾಣಿಜ್ಯ ಮಳಿಗೆಗಳು ವ್ಯಾಪಾರನಡೆಸಲು ಸಿದ್ಧತೆ ನಡೆಸಿವೆ.
ಮೈಸೂರು ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದಪಾಸಿಟಿವಿಟಿ ದರ ನಿರಂತರವಾಗಿ ಕಡಿಮೆಯಾಗಿರುವಹಿನ್ನೆಲೆ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇಲಾಕ್‌ಡೌನ್ ನಿರ್ಬಂಧ ಸಡಿಲಿಕೆಯಾಗಲಿದೆ.ರಾಜಕೀಯ, ಧಾರ್ಮಿಕ ಸಭೆ-ಸಮಾರಂಭ, ಕ್ರೀಡಾಚಟುವಟಿಕೆ ಹಾಗೂ ಪ್ರತಿಭಟನೆಗಳಿಗೆ ನಿರ್ಬಂಧಮುಂದುವರಿಸಲಾಗಿದೆ.
ಕ್ರೀಡಾಂಗಣಗಳನ್ನುಅಭ್ಯಾಸದ ಉದ್ದೇಶಕ್ಕೆ ಬಳಸಲು ಅವಕಾಶಕಲ್ಪಿಸಲಾಗಿದೆ.ಜವಳಿ ಅಂಗಡಿ, ಸೂಪರ್ ಮಾರ್ಕೇಟ್, ಶಾಪಿಂಗ್‌ಕಾಂಪ್ಲೆಕ್ಸ್‌ಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೋಟೆಲ್‌ಗಳಲ್ಲಿ ಕುಳಿತು ಆಹಾರಸೇವಿಸಲು, ಬಾರ್‌ಗಳಲ್ಲಿ ಮದ್ಯ ಸೇವಿಸಲು ಅವಕಾಶ ನೀಡಲಾಗಿದೆ.
ಈಗಾಗಲೇ ನಗರ-ಗ್ರಾಮಾಂತರಸಾರಿಗೆ ಬಸ್‌ಗಳ ಸಂಚಾರ ಆರಂಭವಾಗಿದ್ದು,ಇಂದಿನಿಂದ ಸಾರಿಗೆ ಸೇವೆ ಮತ್ತಷ್ಟು ಹೆಚ್ಚಾಗುವಸಾಧ್ಯತೆ ಇದೆ.ಲೈಬ್ರೆರಿ ಓಪನ್: ಸಾರ್ವಜನಿಕ ಗ್ರಂಥಾಲಯತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿಆದೇಶಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಎಲ್ಲಾಸಾರ್ವಜನಿಕ ಗ್ರಂಥಾಲಯಗಳು ಜು.6ರಿಂದಓದುಗರಿಗೆ ಮುಕ್ತವಾಗಲಿವೆ. ಆದ್ದರಿಂದ ಜಿಲ್ಲಾಕೇಂದ್ರ ಗ್ರಂಥಾಲಯ, ವ್ಯಾಪ್ತಿಯ ಎಲ್ಲಾಗ್ರಂಥಾಲಯಗಳು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸಮಯದಂತೆ ಕಾರ್ಯನಿರ್ವಹಿಸಲಿವೆ.
ಸಾರ್ವಜನಿಕರು ಕೋವಿಡ್-19 ನಿಯಮ ಪಾಲಿಸಿಗ್ರಂಥಾಲಯ ಸೇವೆ ಪಡೆಯುವಂತೆ ಜಿಲ್ಲಾ ಕೇಂದ್ರಗ್ರಂಥಾಲಯ ಉಪನಿರ್ದೇಶಕ ಬಿ.ಮಂಜುನಾಥ್‌ಮನವಿ ಮಾಡಿದ್ದಾರೆ.ಭರದಿಂದ ಸಾಗಿದ ಸಿದ್ಧತೆ: ಅನ್‌ಲಾಕ್ ಘೋಷಣೆಬೆನ್ನಲ್ಲೇ ಮೈಸೂರಿನ ಪ್ರಮುಖ ಪ್ರವಾಸಿ ತಾಣ,ವಾಣಿಜ್ಯ ಕೇಂದ್ರ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿಭಾನುವಾರ ಸ್ಯಾನಿಟೈಸ್ ಮಾಡುವ ಕಾರ್ಯಭರದಿಂದ ನಡೆಯಿತು. ಜತೆಗೆ ಸಾಮಾಜಿಕ ಅಂತರಕಾಯ್ದುಕೊಳ್ಳುವ ಸಲುವಾಗಿ ಮಾರ್ಗಸೂಚಿ ಫಲಕ,ಬಾಕ್ಸ್ ನಿರ್ಮಾಣ, ಭದ್ರತಾ ಸಿಬ್ಬಂದಿ ನಿಯೋಜನೆಸೇರಿದಂತೆ ಹಲವುಕೆಲಸಗಳು ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.