ಎರಡು ವರ್ಷಗಳ ನಿಷೇಧ ಪ್ರಶ್ನಿಸಿ ಸುಮಿತ್ ಮಲಿಕ್ ಮೇಲ್ಮನವಿಗೆ ನಿರ್ಧಾರ
Team Udayavani, Jul 5, 2021, 11:37 PM IST
ಹೊಸದಿಲ್ಲಿ: ತನ್ನ ಎರಡು ವರ್ಷಗಳ ನಿಷೇಧವನ್ನು ಪ್ರಶ್ನಿಸಿ ಕುಸ್ತಿಪಟು ಸುಮಿತ್ ಮಲಿಕ್ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಡೋಪ್ ಟೆಸ್ಟ್ ವೇಳೆ “ಬಿ’ ಸ್ಯಾಂಪಲ್ ಕೂಡ ಪಾಸಿಟಿವ್ ಬಂದ ಕಾರಣ ಕಳೆದ ಶುಕ್ರವಾರ ಸುಮಿತ್ ಮಲಿಕ್ ಅವರಿಗೆ “ಯುನೈಟೆಡ್ ವರ್ಲ್ಡ್ ರೆಸ್ಲಿಂಗ್’ 2 ವರ್ಷಗಳ ನಿಷೇಧ ವಿಧಿಸಿತ್ತು. ಇದನ್ನು ಒಪ್ಪಿಕೊಳ್ಳಲು ಅಥವಾ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಂದು ವಾರದ ಕಾಲಾವಕಾಶವನ್ನೂ ನೀಡಿತ್ತು. ಇದೀಗ ಸುಮಿತ್ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
28 ವರ್ಷದ ಸುಮಿತ್ ಮಲಿಕ್ ಟೋಕಿಯೊ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯ 125 ಕೆ.ಜಿ. ವಿಭಾಗದಲ್ಲಿ ಅರ್ಹತೆ ಸಂಪಾದಿಸಿದ್ದರು. ಆದರೆ ನಿಷೇಧದಿಂದ ಅವರಿಗೆ ಟೋಕಿಯೊ ಟಿಕೆಟ್ ತಪ್ಪಲಿದೆ. ಮುಂದಿನ ವರ್ಷದ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲೂ ಭಾಗವಹಿಸಲು ಸಾಧ್ಯವಾಗದು. ಕಳೆದ ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸುಮಿತ್ ಬಂಗಾರ ಜಯಿಸಿದ್ದರು.
ಇದನ್ನೂ ಓದಿ :ಭುಜದ ನೋವು ಗುಣವಾಗಿದೆ, ಐಪಿಎಲ್ ಆಡುವುದು ಖಚಿತ : ಅಯ್ಯರ್
ವಾಡಾಕ್ಕೆ ಮನವಿ
“ನಾವು ವಾಡಾಕ್ಕೆ ಹೆಚ್ಚಿನ ಮಾಹಿತಿಗಾಗಿ ಮನವಿ ಸಲ್ಲಿಸಿದ್ದೇವೆ. ಸುಮಿತ್ ಮಲಿಕ್ ಅವರ “ಎ’ ಸ್ಯಾಂಪಲ್ ಫಲಿತಾಂಶ ನಗಣ್ಯವೆಂದೇ ಹೇಳಬೇಕು. ಈಗ “ಬಿ’ ಸ್ಯಾಂಪಲ್‌ನ ವಿವರ ಕೇಳಿದ್ದೇವೆ. ಕೊರೊನಾ ಸೋಂಕು ತಗುಲಿದ ವೇಳೆ ಏನೋ ಎಡವಟ್ಟು ಸಂಭವಿಸಿರಬೇಕು. ಸುಮಿತ್ ಖಂಡಿತವಾಗಿಯೂ ಮುಗ್ಧ. ಅವರು ಯಾವ ಕಾರಣಕ್ಕೂ 2 ವರ್ಷಗಳ ನಿಷೇಧಕ್ಕೆ ಅರ್ಹರಲ್ಲ’ ಎಂದು ಭಾರತೀಯ ಕುಸ್ತಿ ಅಸೋಸಿಯೇಶನ್ ಮೂಲವೊಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.