ವಿಂಬಲ್ಡನ್: ಕ್ವಾರ್ಟರ್ ಫೈನಲ್ ಕದನಕ್ಕೆ ಕ್ಷಣಗಣನೆ
Team Udayavani, Jul 6, 2021, 7:00 AM IST
ಲಂಡನ್: ವಿಂಬಲ್ಡನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಕದನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ವನಿತಾ ವಿಭಾಗದಿಂದ ನಂ.1 ಆ್ಯಶ್ಲಿ ಬಾರ್ಟಿ, ಕ್ಯಾರೋಲಿನಾ ಪ್ಲಿಸ್ಕೋವಾ, ಅರಿನಾ ಸಬಲೆಂಕಾ ಮತ್ತು ಓನ್ಸ್ ಜಬೌರ್ ಅಂತಿಮ ಎಂಟರ ಸುತ್ತಿಗೆ ಲಗ್ಗೆ ಇರಿಸಿದ್ದಾರೆ.
ಪುರುಷರ ವಿಭಾಗದಿಂದ ನೊವಾಕ್ ಜೊಕೋವಿಕ್, ಮ್ಯಾಟಿಯೊ ಬೆರೆಟಿನಿ, ಕರೆನ್ ಕಶನೋವ್, ಡೆನ್ನಿಸ್ ಶಪೊವಲೋವ್, ಮಾರ್ಟನ್ ಫುಸ್ಕೋವಿಕ್ಸ್ ಮುನ್ನಡೆದಿದ್ದಾರೆ.
ಮೊದಲ ಕ್ವಾರ್ಟರ್ ಫೈನಲ್ ಖಚಿತಪಡಿಸಿ ಕೊಂಡವರು ಬೆಲರೂಸ್ನ ಅರಿನಾ ಸಬಲೆಂಕಾ ಮತ್ತು ಟ್ಯುನೀಶಿಯಾದ ಓನ್ಸ್ ಜಬೌರ್. ಸಬಲೆಂಕಾ 6-3, 4-6, 6-3 ಅಂತರದಿಂದ ಕಜಾಕ್ಸ್ಥಾನದ ಎಲೆನಾ ರಿಬಾಕಿನಾ ಅವರನ್ನು ಮಣಿಸಿದರು. ಓನ್ಸ್ ಜಬೌರ್ ಅವರಿಗೆ ಶರಣಾದವರು 2020ರ ಫ್ರೆಂಚ್ ಓಪನ್ ಚಾಂಪಿಯನ್, ಪೋಲೆಂಡ್ನ ಐಗಾ ಸ್ವಿಯಾಟೆಕ್. 3 ಸೆಟ್ಗಳ ಕಾದಾಟದ ಬಳಿಕ ಜಬೌರ್ 5-7, 6-1, 6-1 ಅಂತರದಿಂದ ಗೆದ್ದು ಬಂದರು.
8ನೇ ಶ್ರೇಯಾಂಕದ ಜೆಕ್ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ರಶ್ಯದ ಲುದ್ಮಿಲ್ಲಾ ಸ್ಯಾಮೊÕನೋವಾ ಅವರನ್ನು 6-2, 6-3 ನೇರ ಸೆಟ್ಗಳಿಂದ ಮಣಿಸಿ ಮುನ್ನಡೆದರು. ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಫ್ರೆಂಚ್ ಓಪನ್ ಚಾಂಪಿಯನ್ ಬಾಬೊìರಾ ಕ್ರೆಜಿಕೋವಾ ಓಟವನ್ನು 7-5, 6-3ರಿಂದ ಕೊನೆಗೊಳಿಸಿದರು.
ಜೊಕೋ, ಕಶನೋವ್ ಓಟ
ಪುರುಷರ ಸಿಂಗಲ್ಸ್ನಲ್ಲಿ ಹಾಲಿ ಚಾಂಪಿಯನ್ ಜೊಕೋವಿಕ್ ಸುಲಭದಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. ಚಿಲಿಯ ಕ್ರಿಸ್ಟಿಯನ್ ಗ್ಯಾರಿನ್ ವಿರುದ್ಧ 6-2, 6-4, 6-2 ಅಂತರದ ಗೆಲುವು ಕಂಡರು.
ರಶ್ಯದ ಕರೆನ್ ಕಶನೋವ್ ಮತ್ತು ಅಮೆರಿಕದ ಸೆಬಾಸ್ಟಿಯನ್ ಕೋರ್ಡ ನಡುವಿನ ಫೈಟ್ ಅತ್ಯಂತ ರೋಚಕವಾಗಿತ್ತು. 5 ಸೆಟ್ಗಳ ಈ ಮುಖಾಮುಖೀಯನ್ನು ಕಶನೋವ್ 3-6, 6-4, 6-3, 5-7, 10-8 ಅಂತರದಿಂದ ತಮ್ಮದಾಗಿಸಿಕೊಂಡರು.
ಕೆನಡಾದ ಡೆನ್ನಿಸ್ ಶಪೊವಲೋವ್ 6-1, 6-3, 7-5ರಿಂದ ಸ್ಪೇನ್ನ ರಾಬರ್ಟೊ ಬಟಿಸ್ಟ ಅಗುಟ್ಗೆ ಸೋಲುಣಿಸಿದರು. ಹಂಗೇರಿಯ ಮಾರ್ಟನ್ ಫುಸ್ಕೋವಿಕ್ಸ್ 5 ಸೆಟ್ಗಳ ಜಿದ್ದಾಜಿದ್ದಿ ಫೈಟ್ ಮೂಲಕ ರಶ್ಯದ ಆ್ಯಂಡ್ರೆ ರುಬ್ಲೇವ್ ಅವರನ್ನು 6-3, 4-6, 4-6, 6-0, 6-3ರಿಂದ ಮಣಿಸಿದರು. ಇಟಲಿಯ ಬರೆಟಿನಿ 6-4, 6-4, 6-4ರಿಂದ ಸ್ಲೊವೇನಿಯಾದ ಅಲ್ಜಾಜ್ ಬೆಡೆನೆ ಆಟಕ್ಕೆ ತೆರೆ ಎಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.