ಅರ್ಧ ದಿನಕಾಯ್ದರೂ ದೊರೆಯದ ಆಹಾರ ಕಿಟ್
Team Udayavani, Jul 6, 2021, 2:50 PM IST
ಚನ್ನರಾಯಪಟ್ಟಣ: ಕಾರ್ಮಿಕ ಇಲಾಖೆ ಯಿಂದ ನೋಂದಾಯಿತ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಬಗ್ಗೆ ಅಧಿಕಾರಿಗಳು ಗೊಂದಲ ಸೃಷ್ಟಿ ಮಾಡಿದ್ದರಿಂದ ಬೆಳಗ್ಗೆ ಆರು ಗಂಟೆಗೆಕಾರ್ಮಿಕರುಕೆಲಸ ಬಿಟ್ಟು ಕೊರೊನಾ ನಿಯಮ ಗಾಳಿಗೆ ತೂರಿ ರಸ್ತೆಯಲ್ಲಿ ಮಧ್ಯಾಹ್ನದ ವರೆಗೆ ನಿಂತು ಪೊಲೀಸರಿಂದ ಗೂಸ ತಿಂದು ಮನೆಗೆ ಬರಿಗೈನಲ್ಲಿ ಹೋಗುವಂತಾಯಿತು.
ತಾಲೂಕಿನಲ್ಲಿ 9,700 ಮಂದಿ ನೋಂದಾಯಿತ ಕಾರ್ಮಿಕರಿದ್ದಾರೆ. ಸರ್ಕಾರ 2,500 ಕಿಟ್‌ಗಳನ್ನು ಮೊದಲ ಹಂತದಲ್ಲಿ ಸರಬರಾಜುಮಾಡಿದ್ದು ಸಾಂಕೇತಿಕವಾಗಿ ಈಗ್ಗೆ ಎರಡು ದಿವಸದ ಹಿಂದೆ ವಿತರಣೆ ಮಾಡಿದ್ದಾರೆ. ವಿಷಯ ತಿಳಿದ ಕಾರ್ಮಿಕರು ಕಚೇರಿಗೆ ಆಗಮಿಸಿ ಆಹಾರ ಕಿಟ್ ಬಗ್ಗೆಕೇಳಿದಾಗಬೆಳಗ್ಗೆಯಿಂದಟೋಕನ್ ನೀಡುವುದಾಗಿ ತಿಳಿಸಿದ್ದರಿಂದ ಮುಂಜಾ ನೆಯೇ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದಾರೆ.
ತಿಂಡಿ, ಊಟವೂ ಇಲ್ಲ: ಬೆಳಗ್ಗೆ 11 ಗಂಟೆಯಾದರೂ ಕಾರ್ಮಿಕ ಇಲಾಖೆ ಅಧಿಕಾರಿ ಪುರುಷೋತ್ತಮ ಕಚೇರಿಗೆ ಆಗಮಿಸದೆ ಆಹಾರ ಕಿಟ್ ವಿತರಣೆ ಮಾಡುವ ಅಂಬೇಡ್ಕರ್ ಭವನಕ್ಕೂ ಆಗ ಮಿಸದೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸದಿದ್ದರಿಂದಕಾರ್ಮಿಕರು ಅಂಬೇಡ್ಕರ್ ಭವನದ ಬಳಿ ಮಧ್ಯಾಹ್ನ12 ಗಂಟೆವರೆಗೆ ತಿಂಡಿ ಊಟು ಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣ ಸೃಷ್ಟಿಸಿದ್ದಾರೆ.
ಬಿಗುವಿನ ವಾತಾವರಣ: ಸಕಾಲಕ್ಕೆ ಕಾರ್ಮಿಕ ಇಲಾಖೆ ಸಿಬ್ಬಂದಿ ಆಗಮಿಸಿ ಕಾರ್ಮಿಕರೊಂದಿಗೆ ಚರ್ಚಿಸಿ ಸರ್ಕಾರ ನೀಡಿರುವ ಕಿಟ್ ವಿತರಣೆ ಮಾಡಿದ್ದರೆ ಗೊಂದಲ ಉಂಟಾಗುತ್ತಿರಲಿಲ್ಲ. ರಸ್ತೆಯಲ್ಲಿ ಜನಸಂದಣಿ ಹೆಚ್ಚಿದ್ದರಿಂದ ವಾಹನ ಸವಾರರಿಗೂ ತೊಂದರೆ ಉಂಟಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದಪೊಲೀಸರು ಕೂಲಿ ಕಾರ್ಮಿಕರ ವಿರುದ್ಧ ಲಾಠಿ ಪ್ರಹಾರಕ್ಕೆ ಮುಂದಾದರು. ಈವೇಳೆ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಸಾಕಷ್ಟು ಮಂದಿ ಅಂಬೇಡ್ಕರ್‌ಭವನದ ಮೆಟ್ಟಿಲ ಮೇಲೆ ಕುಳಿತು ಧರಣಿ ನಡೆಸಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಬೇಜವಾಬ್ದಾರಿಯಿಂದ ಒಂದು ದಿವಸ ಕೂಲಿಯನ್ನು ಬಿಟ್ಟು ಆಹಾರಕಿಟ್ ಪಡೆಯಲು ಆಗಮಿಸಿದ್ದವರಿಗೆಪೊಲೀಸ್ ಲಾಠಿ ರುಚಿ ನೋಡುವಂತಾಯಿತು. ಅನೇಕ ಮಂದಿ ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕಿ ಮನೆಗೆ ಹಿಂತಿರುಗಿದರು. ಸರ್ಕಾರ ನೀಡಿದ ಆಹಾರಕಿಟ್ ನೀಡಲು ಅಧಿಕಾರಿ ಮೀನಾಮೇಷಎಣಿಸುತ್ತಿರುವುದಹಿಂದೆಯಾರಕೈವಾಡ ಇದೆ ಎಂದು ಪ್ರಶ್ನಿಸಿದರು.
ಅನಾರೋಗ್ಯದಕಾರಣ ಕಚೇರಿಗೆ ತಡವಾಗಿ ಆಗಮಿಸಿದೆ. ಅಷ್ಟರಲ್ಲಿ ಸಾವಿರಾರು ಮಂದಿ ಜನ ಜಮಾಯಿಸಿ ಒಂದುಕಿ.ಮೀ ವರೆಗೆ ಸಾಲುಗಟ್ಟಿ ನಿಂತಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಅವರುಕಾರ್ಮಿಕರನ್ನುಮನೆಗೆಕಳುಹಿಸಿದ್ದಾರೆ. ನಿತ್ಯವೂ ಟೋಕನ್ ನೀಡಿ ಮಾರನೇದಿವಸ ಆಹಾರಕಿಟ್ ವಿತರಣೆಮಾಡಲಾಗುವುದು. -ಪುರುಷೋತ್ತಮ್, ಕಾರ್ಮಿಕ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.