ತಟ್ಟೆಗೆ ಬಂದದ್ದು ಹೊಟ್ಟೆಗೆ ಬರಲಿಲ್ಲ
Team Udayavani, Jul 6, 2021, 4:11 PM IST
ಈ ಪ್ರಸಂಗ ನಾ ಕಂಡು ಸುಮಾರು ದಿನಗಳೇನು ಆಗಿರಲಿಕ್ಕಿಲ್ಲ. ಆಗತಾನೆ ನನ್ನ ಯುಜಿ ಮುಗಿದು ಪಿಜಿಗೆ ಕಾಲಿಟ್ಟಿದ್ದಾಗ ನಡೆದಂತಹ ಘಟನೆ. ನನ್ನ ಪದವಿ ಮುಗಿದ ಅನಂತರ ನನ್ನ ನಡೆ ಕನ್ನಡ ವಿಶ್ವವಿದ್ಯಾನಿಲಯದ ಕಡೆಗೆ ಸಾಗಿತ್ತು. ನನಗೆ ಮತ್ತು ನನ್ನಂತಹ ಅನೇಕ ಯುವ ಪೀಳಿಗೆಯವರಿಗೆ ನವನವೀನತೆಯ ಹುರುಪು, ಉತ್ಸಾಹದ ಮನಃಸ್ಥಿತಿ ಸರ್ವೇ ಸಾಮಾನ್ಯ.
ನಾವು ಸೇರಲು ಹೋಗುತ್ತಿರುವ ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಬಗೆಗಿನ ಕುತೂಹಲ ಯಾವ ಯಾವ ವಿದ್ಯಾರ್ಥಿ ಎಲ್ಲಿಂದ ಬಂದಿರುತ್ತಾರೊ? ಅವರ ನಡೆ, ನುಡಿ ಹೇಗೋ? ನಾವು ಅವರ ಜತೆ ಹೊಂದಿ ಕೊಳ್ಳುತ್ತೇವೆಯೋ? ಇಲ್ಲವೋ? ಹಾಗೆ ಅಲ್ಲಿಯ ವಾತಾವರಣ, ಜನರ ಒಡನಾಟ, ಇನ್ನೊಂದೆಡೆ ಶಿಕ್ಷಕರು ಹೇಗೋ? ಅವರ ಪಾಠ ಪ್ರವಚನದ ಶೈಲಿ ನಮ್ಮ ತಲೆಯೊಳಗೆ ತಮ್ಮ ಸ್ಥಾನ ಪಡೆದುಕೊಳ್ಳುತ್ತದೋ? ಇಲ್ಲವೋ? ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಿತು ನನ್ನ ಹುಚ್ಚು ಮನಸ್ಸು.
ಪಿಜಿಯ ಮೊದಲ ವರ್ಷ ಮೊದಲ ಸೆಮಿಸ್ಟರ್‌ನೊಂದಿಗೆ ನನ್ನ ಬದುಕಿನ ಜಟಕಾ ಬಂಡಿಯ ಹತ್ತಿದೆ. ಮೊದಲನೇ ದಿನ ನಮಗಾಗಲಿ ನಮ್ಮ ಬುರುಡೆಗಾಗಲಿ ಕೆಲಸ ಕೊಡಲಿಲ್ಲ ನಮ್ಮ ಗುರುಗಳು. ನಮ್ಮ ಪರಿಚಯದ ಜತೆಗೆ ನಮ್ಮ ನೆಚ್ಚಿನ ಹವ್ಯಾಸಗಳು, ಮುಂದಿನ ಕನಸು, ಗುರಿಗಳ ಬಗ್ಗೆ ಕೇಳಿದರು. ಇದಾದ ಮರುದಿನವು ಸಹ ಹೀಗೆ ತರಗತಿಗಳು ನಡೆದವು.
ಮಾರನೇ ದಿನ ನಮಗಾಗಿ ಸ್ವಾಗತ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಆ ಕಾರ್ಯಕ್ರಮದ ಕೇಂದ್ರಬಿಂದು ನಾವಾಗಿದ್ದೆವು. ಮುಂದೆ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದವು.
ಐಕ್ಯೂಎಸಿ ಕೋಶದಿಂದ ಸಿಬಿಸಿಯಸ್ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು. ಮೊದಲು ಈ ವಿಷಯದ ಕುರಿತಂತೆಯೇ ಕಾರ್ಯಗಾರದಲ್ಲಿ ನಾವು ಭಾಗವಹಿಸಿದ್ದ ಕಾರಣ ಮತ್ತೂಮ್ಮೆ ಕೂರಲು ಮನಸ್ಸು ಒಪ್ಪುತ್ತಿರಲಿಲ್ಲ . ಆದರೆ ಅಲ್ಲಿ ಕುಳಿತುಕೊಳ್ಳುವುದು ಅನಿವಾರ್ಯವಾಗಿಬಿಟ್ಟಿತ್ತು. ಇತ್ತ ನುಂಗುವ ಹಾಗಿಲ್ಲ, ಅತ್ತ ಉಗುಳುವ ಹಾಗೂ ಇರಲಿಲ್ಲ . ನೀರಿನಿಂದ ತೆರೆದ ಮೀನಿನಂತಾಗಿತ್ತು ನಮ್ಮ ಪರಿಸ್ಥಿತಿ. ಕೊನೆಗೂ ಒಲ್ಲದ ಮನಸ್ಸಿನಿಂದ ಕುಳಿತುಕೊಂಡೆವು. ಆದರೆ ಅದರಲ್ಲಿ ಎಷ್ಟು ಜನ ತೂಕಡಿಸುತ್ತಿದ್ದರೋ? ಅದೆಷ್ಟು ಜನ ನಿದ್ದೆ ಹೋಗಿದ್ದರೋ?ಎಚ್ಚರ ನಿದ್ರೆಗೆ ಜಾರಿದವರೆಷ್ಟೋ? ಇನ್ನು ಕೆಲವರು ಇರುತ್ತಾರೆ. ತುಂಬಾ ಜಾಣರು ಹಗಲು ನಿದ್ರೆ ಮಾಡುವವರು, ಕಣ್ಣುಗಳ ತೆರೆದಿಟ್ಟುಕೊಂಡೆ ಮಲಗುವವರು, ಬಾಡಿ ಇಸ್ ಪ್ರಸೆಂಟ್, ಮೈಂಡ್ ಇಸ್ ಆ್ಯಬೆÕಂಟ್ ತರ ಕುಳಿತವರೆಷ್ಟೋ ಮಂದಿ.
ಕೊನೆಗೂ ಬರಗಾಲದಲ್ಲಿ ಮಳೆ ಬಂದಂತೆ ನಮಗೆ ಊಟಕ್ಕೆ ಬಿಟ್ಟರು. ಭೋಜನ ಪ್ರಿಯರಿಗಂತೂ ಹಬ್ಬದ ಕಳೆ. ಅದರಲ್ಲಿ ನಾನು ಒಬ್ಬಳು. ಮೆನುವಿನಲ್ಲಿ ಅನ್ನ, ಸಾಂಬಾರು, ಚಪಾತಿ, ಪಲ್ಯ, ಮಾವಿನ ಉಪ್ಪಿನ ಕಾಯಿ, ಹಪ್ಪಳ ಜತೆಗೆ ಮಜ್ಜಿಗೆ ಸವಿಯಲು ಸಿದ್ಧವಿದ್ದವು. ಬಂದಂತಹ ಅತಿಥಿಗಳು, ಪ್ರಾಧ್ಯಾಪಕರ ವೃಂದದವರ ಅನಂತರ ನಾವು ಊಟ ಹಾಕಿಸಿಕೊಂಡೆವು ಜೇನಿನ ಗೂಡು ಹೇಗೆ ಒಟ್ಟಿಗೆ ಇರುತ್ತವೋ ಹಾಗೇ ನಮ್ಮ ಗೆಳೆಯರ ತಂಡ ಊಟಕ್ಕೆ ಕುಳಿತಿತ್ತು. ಕ್ಯಾಂಪಸ್ ಊರ ಹೊರಗಿರುವುದರಿಂದ ಇಲ್ಲಿ ವಾಯುದೇವನ ಆರ್ಭಟ ಅಗಾಧವಾಗಿದೆ. ಇಂಥದ್ದರಲ್ಲಿ ನಮ್ಮ ಸಹಪಾಠಿಯೊಬ್ಬರ ಹಪ್ಪಳ ಹಾರಿಹೋಯಿತು. ಆಗ ಎಲ್ಲರು ಎಚ್ಚರಗೊಂಡರು. ಇಲ್ಲವಾದಲ್ಲಿ ತಟ್ಟೆಗೆ ಬಂದ ಹಪ್ಪಳ ಹೊಟ್ಟೆಗೆ ಬಾರದಂತಾಗುತ್ತಿತ್ತು. ನಮಗೆ ಸಿಕ್ಕ ಅವಕಾಶಗಳನ್ನ ಸರಿಯಾದ ಸಮಯಕ್ಕೆ ಉಪಯೋಗಿಸಿಕೊಳ್ಳದಿದ್ದರೆ ದೇವರು ಪ್ರತ್ಯಕ್ಷವಾದರೂ ಕೂಡ ದೇವರೆಂದು ತಿಳಿಯಲು ಸಾಧ್ಯವಾಗುವುದಿಲ್ಲ.
ಮುಬೀನಾ ಪಿ.
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.