ಕಾರ್ಮಿಕರ ಆಶ್ರಯಕ್ಕೆ ನವಜೀವನ ಸಜ್ಜು
Team Udayavani, Jul 7, 2021, 9:24 AM IST
ಹುಬ್ಬಳ್ಳಿ: ದೂರದ ಊರುಗಳಿಂದ ಕೆಲಸ ಅರಸಿ ವಾಣಿಜ್ಯ ನಗರಿಗೆ ಬರುವ ವಲಸೆ ಕಾರ್ಮಿಕರಿಗೆ ಉಚಿತವಾಗಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸುವ “ನವಜೀವನ’ ನಗರ ವಸತಿ ರಹಿತರ ಆಶ್ರಯ ಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದು, ಕೈಯಲ್ಲಿ ಕೆಲಸವಿಲ್ಲದೆ, ವಸತಿ ಸೌಲಭ್ಯವಿಲ್ಲದೆ ಎಲ್ಲೆಲ್ಲೋ ಉಳಿದು ಸಂಕಷ್ಟ ಎದುರಿಸುವ ಕಾರ್ಮಿಕರಿಗೆ ಈ ಕೇಂದ್ರ ನೆರವಾಗಲಿದ್ದು, ಈ ಕೇಂದ್ರ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ.
ಕೆಲಸ ಅರಿಸಿ ನಿತ್ಯವೂ ದೂರದ ಊರುಗಳಿಂದ ಕಾರ್ಮಿಕರು ನಗರಕ್ಕೆ ಬರುತ್ತಾರೆ. ಆದರೆ ಬಂದಾಕ್ಷಣ ಕೆಲಸ ಸಿಗಲ್ಲ. ವಸತಿ ಸೌಲಭ್ಯವಂತೂ ದೂರದ ಮಾತು. ಹೀಗಾಗಿ ಕಾರ್ಮಿಕರು ಅನಿವಾರ್ಯವಾಗಿಬಸ್ ನಿಲ್ದಾಣ, ಫುಟ್‌ಪಾತ್, ಉದ್ಯಾನಗಳು, ರೈಲ್ವೆ ನಿಲ್ದಾಣದಲ್ಲೋ ಕಾಲ ಕಳೆಯುವ ಪರಿಸ್ಥಿತಿಯಿದೆ. ಇನ್ನು ದುಡಿದ ಜೀವ ಕೊಂಚ ನಿದ್ರೆಗೆ ಜಾರೋಣ ಎಂದರೆ ಪೊಲೀಸರು ಬಿಡಲ್ಲ. ಕೊಂಚ ಯಾಮಾರಿದರೆ ಕಳ್ಳರ ಕಾಟ. ಈ ಎಲ್ಲಾತಾಪತ್ರಯಗಳಿಗೆ ತಿಲಾಂಜಲಿ ಇಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯ ದೀನದಯಾಳ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ(ಡೇ-ನಲ್ಮ್) ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ.
46 ಕಾರ್ಮಿಕರಿಗೆ ವಸತಿ: ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಒಂದು ಲಕ್ಷ ಜನರಿರುವ ನಗರ ಪ್ರದೇಶಗಳಲ್ಲಿನಗರ ಯೋಜನೆಯಡಿಯಲ್ಲಿ ವಲಸೆ ಕಾರ್ಮಿಕರಿಗಾಗಿತಾತ್ಕಾಲಿಕ ಆಶ್ರಯ ತಾಣ ಕಲ್ಪಿಸುವುದು ಕಡ್ಡಾಯವಾಗಿದೆ. ಹೀಗಾಗಿ ಇಲ್ಲಿನ ಹೊಸೂರು ಗಣೇಶ ವಿಸರ್ಜನಾ ಬಾವಿ ಪಕ್ಕದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಭವ್ಯವಾದ ಆಶ್ರಯ ಕೇಂದ್ರನಿರ್ಮಾಣಗೊಂಡಿದೆ. ಇಲ್ಲಿ 46 ಕಾರ್ಮಿಕರಿಗೆಏಕಕಾಲಕ್ಕೆ ಆಶ್ರಯ ನೀಡಬಹುದಾಗಿದ್ದು, ಇದರಲ್ಲಿ 23 ಪುರುಷ, 23 ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕಾಮಗಾರಿ ಕೋವಿಡ್‌ನಿಂದವಿಳಂಬವಾಗಿತ್ತು ಇದೀಗ ಬಣ್ಣ, ಎಲೆಕ್ಟ್ರಿಕ್ ಕೆಲಸ ಸೇರಿದಂತೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಇನ್ನೇನು ಉದ್ಘಾಟನೆ ಮಾತ್ರ ಬಾಕಿ ಉಳಿದಿದೆ.
ಸುಸಜ್ಜಿತ ಕೇಂದ್ರ: ಬೇರೆ ಊರುಗಳಿಂದ ಕೆಲಸ ಹುಡುಕಿಕೊಂಡು ಬರುವ ಕಾರ್ಮಿಕರುವ ಮಾತ್ರಗರಿಷ್ಠ 6 ತಿಂಗಳು ಮಾತ್ರ ಇಲ್ಲಿ ನೆಲಸಬಹುದಾಗಿದೆ.ನಂತರ ವಸತಿ ಸೌಲಭ್ಯ ನೋಡಿಕೊಂಡು ಸ್ಥಳಾಂತರ ಗೊಳ್ಳಬೇಕು. ಪುರುಷ-ಮಹಿಳಾ ಕಾರ್ಮಿಕರಿಗಾಗಿ ಪ್ರತ್ಯೇಕವಾಗಿ ವಾಸ್ತವ್ಯದ ವ್ಯವಸ್ಥೆಯಿದೆ. ಶೌಚಾಲಯ, ಅಡುಗೆ ಕೋಣೆಯಿದ್ದು ಬೇಕಾದವರು ಅಡುಗೆ ಮಾಡಿಕೊಳ್ಳಬಹುದಾಗಿದೆ. ಟಿವಿ, ದಿನಪತ್ರಿಕೆ ಸೌಲಭ್ಯ, ಇದರೊಂದಿಗೆಕಾಲಕಾಲಕ್ಕೆ ಆರೋಗ್ಯ ತಪಾಸಣೆ ಇರುತ್ತದೆ. ಇತರೆ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಗ್ರಂಥಾಲಯ ಆರಂಭಿಸುವ ಚಿಂತನೆಯಿದೆ. ಈ ಕೇಂದ್ರದ ನಿರ್ವಹಣೆಯನ್ನು ಉತ್ತಮ ಎನ್‌ಜಿಒ ಸಂಸ್ಥೆಗೆ ವಹಿಸಲಿದ್ದು, ಇದಕ್ಕೊಬ್ಬ ಮ್ಯಾನೇಜರ್, ನಿರ್ವಹಣಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
ಆಯ್ಕೆಗಾಗಿ ಸಮೀಕ್ಷೆ: 2011 ರವರೆಗೆ ಇಂತಹ ವಲಸೆ ಕಾರ್ಮಿಕರಿಗೆ ರಾತ್ರಿ ವಸತಿ ನೀಡುವ ವ್ಯವಸ್ಥೆ ಮಾತ್ರವಿತ್ತು. ನಂತರದಲ್ಲಿ ವಲಸೆ ಕಾರ್ಮಿಕರ ಸಂಕಷ್ಟ ಅರಿತ ಸುಪ್ರಿಂ ಕೋರ್ಟ್ ದಿನ 24 ಗಂಟೆಯೂ ವಸತಿ ಸೌಲಭ್ಯ ನೀಡುವ ಕುರಿತು ಆದೇಶಿಸಿದೆ. ಡೇ-ನಲ್ಮ್ ಯೋಜನೆಯಡಿ ಆರಂಭವಾಗುತ್ತಿರುವ ಹೊಸ ಕೇಂದ್ರಕ್ಕೆ ಅರ್ಹರನ್ನುಆಯ್ಕೆ ಮಾಡುವ ಉದ್ದೇಶದಿಂದ ಒಂದು ತಂಡರಾತ್ರಿ 10:00 ರಿಂದ ಬೆಳಿಗ್ಗೆ 4:00 ಗಂಟೆಯವರೆಗೆ ನಗರದಲ್ಲಿ ವಿವಿಧೆಡೆ ಸಂಚಾರ ಮಾಡಿ ವಸತಿರಹಿತ ವಲಸೆ ಕಾರ್ಮಿಕರನ್ನು ಗುರುತಿಸುವ ಕೆಲಸ ಮಾಡಲಿದೆ. ಆಯ್ಕೆಗೆ ಮಾನದಂಡಗಳು ಇರದಿದ್ದರೂ ಅರ್ಹರಿಗೆ ಅವಕಾಶ ದೊರೆಯುವ
ನಿಟ್ಟಿನಲ್ಲಿ ಗುರುತಿಸಲಾಗುತ್ತದೆ. ಇಲ್ಲಿ ಆಶ್ರಯ ಪಡೆದ ಕಾರ್ಮಿಕರ ಕೌಶಲ ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವೂ ಆಗಲಿದೆ. ಮದ್ಯ ಸೇವನೆ ಮಾಡುವವರನ್ನು ಕೇಂದ್ರಕ್ಕೆ ಸೇರಿಸದಂತೆ ನಿರ್ಧರಿಸಲಾಗಿದೆ.
ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದ ಕಾರಣ ಹಿಂದೆ ನೆಹರು ಮೈದಾನದಲ್ಲಿ ಈ ಕೇಂದ್ರನಡೆಯುತ್ತಿತ್ತು. ಅಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿಶ್ರೀ ಸಿದ್ಧಾರೂಢಮಠಕ್ಕೆ ಸ್ಥಳಾಂತರಗೊಂಡಿದ್ದು, ತಾತ್ಕಾಲಿಕವಾಗಿ ಅಲ್ಲಿ ನಡೆಯುತ್ತಿದೆ. ಸದ್ಯಕ್ಕೆ 13 ವಲಸೆ ಕಾರ್ಮಿಕರು ಆಶ್ರಯ ಪಡೆದಿದ್ದಾರೆ.
ಚಿಕ್ಕಪುಟ್ಟ ಕೆಲಸಗಳು 3-4 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಎಲ್ಲವೂಪೂರ್ಣಗೊಳ್ಳುತ್ತಿದ್ದಂತೆ ಒಂದೆರಡು ವಾರದಲ್ಲಿ ಉದ್ಘಾಟಿಸಲಾಗುವುದು. ಇದೊಂದು ವಿಶೇಷ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಕಾರ್ಮಿಕರನ್ನು ಸದಾ ಚಟುವಟಿಕೆಯಲ್ಲಿಡುವ ನಿಟ್ಟಿನಲ್ಲಿ ಒಂದಿಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದೆ.ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಅನುಷ್ಠಾನ ಮಾಡಲಾಗುವುದು.– ಡಾ| ಸುರೇಶ ಇಟ್ನಾಳ,ಆಯುಕ್ತರು, ಹು-ಧಾ ಮಹಾನಗರ ಪಾಲಿಕ
ಕೆಲಸ ಅರಸಿ ಬರುವ ಜನರು ನಗರ ಪ್ರದೇಶದಲ್ಲಿ ವಸತಿ ಸೌಲಭ್ಯ ಕಂಡುಕೊಳ್ಳುವುದು ಕಷ್ಟ.ಹೀಗಾಗಿ ಇಂತಹ ಕಾರ್ಮಿಕರನ್ನುಗುರುತಿಸಿ ಗರಿಷ್ಠ ಆರು ತಿಂಗಳುಈ ಕೇಂದ್ರದಲ್ಲಿ ಉಚಿತವಾಗಿ ಆಶ್ರಯ ನೀಡಬಹುದಾಗಿದೆ. ಸದ್ಯ ಸಿದ್ಧಾರೂಢ ಮಠದಲ್ಲಿ ಕಾರ್ಮಿಕರು ಆಶ್ರಯ ಪಡೆದಿದ್ದಾರೆ. ಕೇಂದ್ರ ಉದ್ಘಾಟನೆಗೊಂಡ ನಂತರ ಅವರನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು. ಆಶ್ರಯದೊಂದಿಗೆ ಅವರ ಕೌಶಲ ಗುರುತಿಸಿ ಮುಖ್ಯವಾಹಿನಿಗೆತರುವ ಕೆಲಸ ಆಗಲಿದೆ.- ರಮೇಶ ನೂಲ್ವಿ, ಸಮುದಾಯ ಸಂಘಟನಾಧಿಕಾರಿ, ಹು-ಧಾ ಮಹಾನಗರ ಪಾಲಿಕೆ
–ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.