ಅಮೆಜಾನ್ ಗೆ ತಲೆನೋವಾದ ‘ಅಲೆಕ್ಸಾ’ ಮತ್ತು ‘94% ರಿಯಾಯಿತಿ’
Team Udayavani, Jul 7, 2021, 2:25 PM IST
ಜಗತ್ಪ್ರಸಿದ್ಧ ಅಮೆಜಾನ್ ಇತ್ತೀಚಿಗೆ ಕೆಲವು ಸಲ್ಲದ ಕಾರಣಗಳಿಗೆ ಸುದ್ದಿಯಾಗುತ್ತಿದೆ. ಇಷ್ಟು ದಿನ ಈ ಅಮೆರಿಕಾದ ಬಹುರಾಷ್ಟ್ರೀಯ ಸಂಸ್ಥೆ ಇ ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್, ಡಿಜಿಟಲ್ ಸ್ಟ್ರೀಮಿಂಗ್ , ಮತ್ತು ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಗೆ ಹೆಸರುವಾಸಿಯಾಗಿತ್ತು. ಮಾತ್ರವಲ್ಲದೆ ಅಮೆರಿಕಾದ ಟಾಪ್- 5 ಕಂಪೆನಿಗಳ ಸಾಲಿನಲ್ಲಿ ಸ್ಥಾನ ಪಡೆದಿತ್ತು. ( ಉಳಿದ ನಾಲ್ಕು ಗೂಗಲ್, ಫೇಸ್ ಬುಕ್, ಮೈಕ್ರೊಸಾಫ್ಟ್, ಆ್ಯಪಲ್)
ಹಾಗಾದರೆ ಅಮೆಜಾನ್ ಯಾವ ಸಲ್ಲದ ಕಾರಣಗಳಿಗೆ ಸುದ್ದಿಯಾಗುತ್ತಿದೆ ಎಂಬುದನ್ನು ಗಮನಿಸೋಣ. ಮೊದಲನೆಯದಾಗಿ ಅಮೆಜಾನ್ ವಾಯ್ಸ್ ಅಸಿಸ್ಟೆಂಟ್ ಗಳಲ್ಲಿ ಒಂದಾದ ಅಲೆಕ್ಸಾ ಕಾರಣದಿಂದ. ಇಲ್ಲಿ ಅಲೆಕ್ಸಾ ಯಾವುದೇ ತಾಂತ್ರಿಕ ಅಥವಾ ಇತರೆ ಭದ್ರತಾ ಸಮಸ್ಯೆಗಳಿಂದ ಸುದ್ದಿಯಾಗಿಲ್ಲ. ಬದಲಾಗಿ ‘ಅಲೆಕ್ಸಾ’ ಎಂಬ ಹೆಸರೇ ಅಮೆಜಾನ್ ಗೆ ತಲೆನೋವಾಗಿದೆ.
ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಅಲೆಕ್ಸಾ ಎಂಬ ಹೆಸರು ಸಾಮಾನ್ಯ. ಕೆಲವೊಂದು ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಅಲೆಕ್ಸಾ ಎಂದು ಹೆಸರಿಟ್ಟಿರುತ್ತಾರೆ. ಇದೇ ಕಾರಣದಿಂದಾಗಿ ಅಲೆಕ್ಸಾ ಹೆಸರಿರುವವರನ್ನು ಶಾಲೆಗಳಲ್ಲಿ ಸಹಪಾಠಿಗಳು ಛೇಡಿಸುವ, ವ್ಯಂಗ್ಯವಾಡುವ ಕೆಲಸದಲ್ಲಿ ತೊಡಗಿದ್ದಾರಂತೆ…ಇದರ ಜೊತೆಗೆ ವಾಯ್ಸ್ ಅಸಿಸ್ಟೆಂಟ್ ಅಲೆಕ್ಸಾ ಜೊತೆ ವ್ಯವಹರಿಸುವಂತೆ ಅವರ ಜೊತೆಗೆ ಮಾತನಾಡುವುದರಿಂದ, ಬೇಸತ್ತ ಹಲವರು ಶಾಲೆಯನ್ನು ತೊರೆದಿದ್ದಾರೆ. ಮಾತ್ರವಲ್ಲದೆ ಬೇರೆ ಶಾಲೆಯಲ್ಲಿ ದಾಖಲಾಗಿದ್ದಾರೆ.
ತಮ್ಮ ಮಕ್ಕಳು ಸಹಪಾಠಿಗಳಿಂದ ನಿರಂತರ ಶೋಷಣೆಗೊಳಗಾಗುತ್ತಿರುವುದನ್ನು ಗಮನಿಸಿದ ಪೋಷಕರು, ಅಮೆಜಾನ್ ವಾಯ್ಸ್ ಅಸಿಸ್ಟೆಂಟ್ ಗೆ ಮಾನವರ ಹೆಸರಿನ ಬದಲು ಬೇರೆ ಹೆಸರನ್ನು ಬಳಸುವಂತೆ ಅಮೆಜಾನ್ ಬಳಿ ಕೋರಿಕೊಂಡಿದ್ದಾರೆ. ವಾಯ್ಸ್ ಅಸಿಸ್ಟೆಂಟ್ ಮಾದರಿಯಲ್ಲೆ ತಮ್ಮ ಮಕ್ಕಳನ್ನು ಬಿಂಬಿಸುತ್ತಿರುವುದು, ಅವರ ಮಾನಸಿಕ ಸ್ಥಿತಿಗತಿಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.
ಅಮೆಜಾನ್ ವಾಯ್ಸ್ ಅಸಿಸ್ಟೆಂಟ್ ‘ಅಲೆಕ್ಸಾ’ 2014 ರಿಂದಲೂ ಬಳಕೆಯಲ್ಲಿದೆ. ಇದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇಂದು ಅಮೆರಿಕಾದಲ್ಲೇ 40 ಮಿಲಿಯನ್ ಅಲೆಕ್ಸಾ ಬಳಕೆದಾರರಿದ್ದಾರೆ.
ದುಬಾರಿ ಎಸಿಯನ್ನುಶೇ. 94ರಷ್ಟು ರಿಯಾಯಿತಿ ದರದಲ್ಲಿ ಮಾರಿದ ಅಮೆಜಾನ್!
ಅಮೆಜಾನ್, ತೋಷಿಬಾ ಏರ್‌ಕಂಡೀಷನ್‌ನನ್ನು ಅಚಾತುರ್ಯದಿಂದ ಶೇ. 94ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ಪೇಚಿಗೆ ಸಿಲುಕಿದೆ. 1.8 ಟನ್ ಸಾಮರ್ಥ್ಯದ 5 ಸ್ಟಾರ್ ರೇಟಿಂಗ್ ಇರುವ ಈ ಎಸಿಯ ಅಸಲಿ ಬೆಲೆ 96,700 ರೂ. ಆಗಿದ್ದು ಪ್ರತಿದಿನ ಯಾವ್ಯಾವ ಸಾಮಗ್ರಿಗಳಿಗೆ ತಮ್ಮಲ್ಲಿ ಡಿಸ್ಕೌಂಟ್ ಇದೆಯೆಂದು ಲಿಸ್ಟಿಂಗ್ ಮಾಡುವಾಗ, ಈ ಎಸಿ ಬೆಲೆಯನ್ನು 5,900 ರೂ.ಗಳಿಗೆ ಇಳಿಸಿರುವುದಾಗಿ ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿತ್ತು.
ವೆಬ್‌ಸೈಟ್‌ನಲ್ಲಿ ಇದನ್ನು ನೋಡಿದ ಗ್ರಾಹಕರೊಬ್ಬರು ಕೂಡಲೇ ಆರ್ಡರ್ ಮಾಡಿ ಇದನ್ನು ಕೊಂಡಿದ್ದಾರೆ. ಕಂಪನಿಯ ಈ ಪ್ರಮಾದದಿಂದ ಗ್ರಾಹಕನಿಗೆ ಲಾಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.