ಜಿಎಸ್‌ಬಿ ಸಭಾ ದಹಿಸರ್-ಬೊರಿವಲಿ: ಉಚಿತ ಕೋವಿಡ್ ಲಸಿಕೆ ಶಿಬಿರ
Team Udayavani, Jul 7, 2021, 12:36 PM IST
ಮುಂಬಯಿ: ಜಿಎಸ್‌ಬಿ ಸಭಾ ದಹಿಸರ್-ಬೊರಿವಲಿ ಸಂಸ್ಥೆಯಿಂದ ಸಾರ್ವ ಜನಿಕರಿಗಾಗಿ ಉಚಿತ ಕೋವಿಡ್ ಲಸಿಕೆ ಶಿಬಿರವು ಜು. 4ರಂದು ದಹಿಸರ್ ಪೂರ್ವದ ವಿದ್ಯಾ ಮಂದಿರ ಶಾಲಾ ಸಭಾಗೃಹದಲ್ಲಿ ನಡೆಯಿತು.
ಜಾಗತಿಕವಾಗಿ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಈ ಮಹಾಮಾರಿಯು ಶೀಘ್ರವೇ ಕೊನೆಯಾಗುವಂತೆ ಪ್ರಾರ್ಥಿಸಿ ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಕೃಪೆ ಮತ್ತು ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹದೊಂದಿಗೆ ಜಿಎಸ್‌ಬಿ ಸಭಾ ದಹಿಸರ್ – ಬೊರಿವಲಿ ಅಧ್ಯಕ್ಷ ಎಂ. ಉದಯ ಪಡಿಯಾರ್, ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ಸ್ಥಾನೀಯ ಮಾಜಿ ಶಾಸಕ ವಿನೋದ್ ಘೊಸಾಳ್ಕರ್ ಮತ್ತು ದಹಿಸರ್ ಕಾರ್ಪೊರೇಟರ್ ಜಗದೀಶ್ ಓಜಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನೆಮ್ಮದಿಯಿಂದ ಬಾಳುವಂತಾಗಲಿ
ಕುಲದೇವರು, ಶ್ರೀ ಕಾಶೀ ಮಠದ ಶ್ರೀ ವಿಟuಲ ರುಖುಮಾಯಿ ಮತ್ತು ಪರಿವಾರ ದೇವತೆಗಳಿಗೆ ಶಿವಾನಂದ ಭಟ್ ಪೂಜೆ ನೆರವೇರಿಸಿ ಎಲ್ಲರೂ ನೆಮ್ಮದಿಯಿಂದ ಬಾಳು ವಂತಾಗಲಿ. ಯೋಗಕ್ಷೇಮಕ್ಕಾಗಿ ಹರಿ ಗುರುವಿನ ಪಾದಾರವಿಂದಕ್ಕೆ ನಾವೆಲ್ಲರೂ ಪ್ರಾರ್ಥಿಸೋಣ ಎಂದು ಎಂದು ತಿಳಿಸಿದರು.
ಜಿಎಸ್‌ಬಿ ಸಮಾಜದ ಹಿತೈಷಿಗಳು, ದಾನಿಗಳು, ಪ್ರಾಯೋಜಕರು ಮತ್ತು ಸಾರ್ವಜನಿ ಕರ ಸಹಯೋಗದೊಂದಿಗೆ ನಡೆಸಲ್ಪಟ್ಟ ಕಾರ್ಯ ಕ್ರಮದಲ್ಲಿ ಸಭಾದ ಸ್ವಯಂ ಸೇವಕರು ನಿಸ್ವಾರ್ಥ ಸೇವೆಗೈದರು. ಸರಕಾರ, ಬಿಎಂಸಿ ಮತ್ತು ಮತ್ತಿತರ ಇಲಾಖೆಗಳ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಎಂದು ಎಂದು ಜಿಎಸ್‌ಬಿ ಸಭಾ ದಹಿಸರ್-ಬೊರಿವಲಿ ಉಪಾಧ್ಯಕ್ಷ ಸಾಣೂರು ಮನೋಹರ್ ವಿ. ಕಾಮತ್ ತಿಳಿಸಿ ಸರ್ವರಿಗೂ ಶುಭ ಹಾರೈಸಿದರು.
ಸುರಾನಾ ಗ್ರೂಪ್ ಆಫ್ ಹಾಸ್ಪಿಟಲ್ಸ್ ತಂಡದ ವೈದ್ಯರು ಮತ್ತು ದಾದಿಯರು ಲಸಿಕೆ ಹಾಕಲು ಸಹಕರಿಸಿದರು. ಜಿ. ಎಸ್. ಬಿ. ಸಭಾ ದಹಿಸರ್- ಬೊರಿವಲಿ ಗೌರವ ಪ್ರಧಾನ ಕಾರ್ಯದರ್ಶಿ ವಿಷ್ಣು ಆರ್. ಕಾಮತ್, ಗೌರವ ಕೋಶಾಧಿಕಾರಿ ಮೋಹನ್ ಎ. ಕಾಮತ್, ಜತೆ ಕಾರ್ಯದರ್ಶಿ ಗುರುಪ್ರಸಾದ್ ಪೈ, ಜತೆ ಕೋಶಾಧಿಕಾರಿ ಪ್ರಭಾಕರ್ ಕಾಮತ್ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಸೇವಾಕರ್ತರು ಉಪಸ್ಥಿತರಿದ್ದರು.
ಚಿತ್ರ–ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.