ನಿವೇಶನ ಕೊಡಿ ಇಲ್ಲವೆ ದಯಾಮರಣಕ್ಕೆ ಅವಕಾಶ ನೀಡಿ!
Team Udayavani, Jul 7, 2021, 5:51 PM IST
ರಾಮನಗರ: ಜಿಲ್ಲೆಯಕನಕಪುರ ತಾಲೂಕಿನ ಅಳ್ಳಿಮಾರನಹಳ್ಳಿ ಗ್ರಾಮದಲ್ಲಿ ವಾಸವಿರುವ ಸುಮಾರು 50 ಪರಿಶಿಷ್ಟಕುಟುಂಬಗಳಿಗೂ ಇಲ್ಲಿಯವರೆಗೂ ಒಂದು ತುಂಡುಭೂಮಿಯೂ ಇಲ್ಲ. ವಾಸಕ್ಕೆ ಭೂಮಿ ಕೊಡಿ, ಇಲ್ಲವೆದಯಾ ಮರಣಕ್ಕೆ ವಕಾಶ ಕೊಡಿ ಎಂದುಅಳ್ಳಿಮಾರನಹಳ್ಳಿಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆಮನವಿಸಲ್ಲಿಸಿದ್ದಾರೆ.
ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ 20ಕ್ಕೂ ಹೆಚ್ಚು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನುಭೇಟಿ ಮಾಡಿದ್ದರು. ತಮಗಾಗಿ ಗುರುತಿಸಲಾಗಿದ್ದಭೂಮಿಯಲ್ಲಿ ಅಲ್ಲಿನ ಗ್ರಾಮಪಂಚಾಯ್ತಿ ಆಶ್ರಯಯೋಜನೆಯಡಿಯಲ್ಲಿ ನಿವೇಶನಗಳನ್ನು ವಿಂಗಡಿಸುತ್ತಿದೆ. ಆದ್ಯತೆ ಮೇರೆಗೆ ತಮ್ಮ ಕುಟುಂಬಗಳಿಗೂ ನಿವೇಶನಕೊಡಿಸಿ ಎಂದು ಮನವಿ ಮಾಡಿದ್ದಾರೆ.
ಐದಾರು ಮಂದಿಗೆ ಮಾತ್ರ ನಿವೇಶನ:ಅಳ್ಳಿಮಾರನಹಳ್ಳಿ ಗ್ರಾಮದಲ್ಲಿ ಎಲ್ಲ ಕುಟುಂಬಗಳುಭೂ ರಹಿತರಾಗಿದ್ದಾರೆ. ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. 1972ರಲ್ಲಿ ಸದರಿ ಗ್ರಾಮದ ಸರ್ವೆನಂಬರ್ 40ರ ಗೋಮಾಳದಲ್ಲಿ ಅಂದು ವಾಸಿಸುತ್ತಿದ್ದಸುಮಾರು30 ಪರಿಶಿಷ್ಟ ಕುಟುಂಬಗಳಿಗೆ ತಲಾ ಎರಡುಎಕರೆ ಜಮೀನು ಹಾಗೂ ಸರ್ವೆ ನಂಬರ್ 14ರಲ್ಲಿತಲಾ ಒಂದೊಂದು ನಿವೇಶನಗಳನ್ನು ಕೊಡಲುತಾಲೂಕು ಆಡಳಿತ ನಿರ್ಧರಿಸಿತ್ತು.
ಇದನ್ನು ಸಹಿಸದಕೆಲವು ಮೇಲ್ಜಾತಿಯವರು ತಮ್ಮನ್ನು ಕೂಲಿ ಕೆಲಸದಿಂದಲು ಕಿತ್ತು ಹಾಕಿದರು. ಅವರ ಜಮೀನಿನ ಮೇಲೆಓಡಾಡುವುದನ್ನು ನಿಷೇಧಿಸಿದರು. ಈ ಅಪ್ಪಣೆ ಮೀರಿದವರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದುಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿನೋವು ತೋಡಿಕೊಂಡಿದ್ದಾರೆ. ಹೀಗೆ ನಿರಂತರದೌರ್ಜನ್ಯ, ಸಾಮಾಜಿಕ ಬಹಿಷ್ಕಾರಕ್ಕೆ ಹೆದರಿ ಕೆಲವುಕುಟುಂಬಗಳು ಊರನ್ನು ತೊರೆದಿದ್ದಾರೆ. ಇನ್ನು ಕೆಲವರು ತಮಗೆ ಭೂಮಿ ಬೇಡ ಎಂದು ಬರೆದುಕೊಟ್ಟಿದ್ದಾರೆ.
ಐದಾರು ಮಂದಿಗೆ ಮಾತ್ರ ನಿವೇಶನಗಳು ಸಿಕ್ಕಿವೆಎಂದು ಗ್ರಾಮಸ್ಥರು ಮನವಿಯಲ್ಲಿ ದೂರಿದ್ದಾರೆ.ಇದೀಗ ಸರ್ವೆ ಸಂಖ್ಯೆ 40ರ ಗೋಮಾಳದಜಾಗದಲ್ಲಿ ಆಶ್ರಯ ಯೋಜನೆಯಡಿ ನಿವೇಶನಗಳನ್ನುನಿರ್ಮಾಣ ಮಾಡಲು ಸ್ಥಳೀಯ ಗ್ರಾಮ ಪಂಚಾಯ್ತಿಮುಂದಾಗಿದೆ. ಸರ್ವೆ ಸಂಖ್ಯೆ 40ರ ಭೂಮಿ ಪರಿಶಿಷ್ಟರಿಗೆ ಹಂಚಿಕೆಯಾಗಲು ಮೀಸಲಿಟ್ಟಿದ್ದ ಭೂಮಿ.ಹೀಗಾಗಿ ಇಲ್ಲಿ ಆದ್ಯತೆ ಮೇರೆಗೆ ತಮಗೆ ನಿವೇಶನಗಳನ್ನು ಕೊಡಬೇಕು, ಇಲ್ಲವಾದರೆ ಯಾತನೆಯಲ್ಲಿಜೀವನ ಸಾಗಿಸುತ್ತಿರುವ ತಮಗೆ ದಯಾಮರಣಕ್ಕೆ ಅವಕಾಶಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.