ಆಷಾಢ: ಚಾಮುಂಡೇಶ್ವರಿ ದೇಗುಲ ಪ್ರವೇಶ ನಿಷೇಧ
Team Udayavani, Jul 7, 2021, 6:28 PM IST
ಮೈಸೂರು: ಕೊರೊನಾ ಸೋಂಕು ಹಿನ್ನೆಲೆ ಚಾಮುಂಡೇಶ್ವರಿ ದೇವಾಲಯಹಾಗೂ ತ್ರಿಪುರ ಸುಂದರಿ ದೇವಾಲಯಕ್ಕೆಆಷಾಢ ಶುಕ್ರವಾರಗಳು ಸೇರಿವಾರಾಂತ್ಯಗಳಲ್ಲಿ ಸಾರ್ವಜನಿಕರ ಪ್ರವೇಶವನ್ನುನಿರ್ಬಂಧಿಸಲಾಗಿದೆಎಂದು ಜಿಲ್ಲಾಧಿಕಾರಿಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.
ಆಷಾಢ ಮಾಸಗಳಲ್ಲಿ ಚಾಮುಂಡಿಬೆಟ್ಟ ಮತ್ತು ತ್ರಿಪುರ ಸುಂದರಿ ಅಮ್ಮನವದೇಗುಲಕ್ಕೆ 1 ಲಕ್ಷ ಜನ ಸೇರುವ ಸಾಧ್ಯತೆಇರುವುದರಿಂದ ಕೋವಿಡ್ ಹರಡುವಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿಜು.5 ರಿಂದ 6 ಗಂಟೆಯ ನಂತರಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆಯುವ ಧಾರ್ಮಿಕಆಚರಣೆಯನ್ನು ಹೊರತುಪಡಿಸಿ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನುನಿರ್ಬಂಧಿಸಲಾಗಿದೆ.
ನಿಷೇಧಿತ ಅವಧಿಯಲ್ಲಿ ಮೆಟ್ಟಿಲುಮಾರ್ಗದಿಂದಚಾಮುಂಡಿಬೆಟ್ಟಕ್ಕೆ ಭಕ್ತರುಮತ್ತು ಸಾರ್ವಜನಿಕರು ಬರುವುದನ್ನೂ ಸಹನಿಷೇಧಿಸಿದ್ದು, ದೇವಾಲಯಗಳಲ್ಲಿದೇವಾಲಯದ ಅಥವಾ ದಾನಿಗಳವತಿಯಿಂದಾಗಲಿ ದಾಸೋಹ, ಊಟದವ್ಯವಸ್ಥೆ ಮಾಡುವುದನ್ನು ಹಾಗೂಪ್ರಸಾದ ವಿತರಣೆ ಮಾಡುವುದನ್ನುನಿಷೇಧಿಸಿದೆ.
ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿರುವ ದಿನಾಂಕಗಳಂದು ಪೂರ್ತಿದಿನಹಾಗೂ ಇತರೆ ದಿನಗಳಂದು ಸಂಜೆ 6ಗಂಟೆಯ ನಂತರ ಚಾಮುಂಡಿಬೆಟ್ಟದಗ್ರಾಮಸ್ಥರ ವಾಹನಗಳಿಗೆ ಮತ್ತು ತುರ್ತುಸೇವಾ ವಾಹನಗಳನ್ನು ಹೊರತುಪಡಿಸಿಇತರೆ ಸಾರ್ವಜನಿಕ ಹಾಗೂ ಖಾಸಗಿವಾಹನಗಳ ಪ್ರವೇಶವನ್ನು ನಿರ್ಭಂಧಿಸಲಾಗಿದೆ.
ಕೇಂದ್ರ ಮತ್ತು ರಾಜ್ಯಸರ್ಕಾರವು ಘೋಷಿಸಲ್ಪಟ್ಟ ಶಿಷ್ಟಾಚಾರಹೊಂದಿರುವ ಗಣ್ಯ ವ್ಯಕ್ತಿಗಳ ವಾಹನಗಳು ಸಂಚರಿಸಬಹುದಾಗಿದ್ದು,ಚಾಮುಂಡಿ ಬೆಟ್ಟದ ಗ್ರಾಮದಸ್ಥಳೀಯರು ವಾಸಸ್ಥಳದ ಗುರುತಿನಚೀಟಿಯನ್ನು ಬಳಸಬೇಕಾಗಿದೆ.ನಿಷೇಧಿತ ಅವಧಿಯಲ್ಲಿ ಶ್ರೀಚಾಮುಂಡೇಶ್ವರಿ ಅಮ್ಮನವರದೇವಾಲಯದಲ್ಲಿ ನಡೆದು ಬಂದಿರುವರೂಢಿ ಸಂಪ್ರದಾಯದಂತೆ ಜರುಗುವವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನುದೇವಾಲಯದ ಅಧಿಕಾರಿಗಳು ಅರ್ಚಕರು ಸಿಬ್ಬಂದಿಯವರು ಮಾತ್ರದೇವಾಲಯದ ಆವರಣದಲ್ಲಿ ನಡೆಸಲುಅವಕಾಶ ನೀಡಲಾಗಿದೆ ಎಂದುಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.