ನಿಮ್ಮ ಉಗ್ರರು, ನಮ್ಮ ಉಗ್ರರು ಎಂಬ ಯುಗಕ್ಕೆ ಮರಳುವುದು ಬೇಡ: ವಿಶ್ವಸಂಸ್ಥೆಗೆ ಭಾರತ ಎಚ್ಚರಿಕೆ
Team Udayavani, Jul 7, 2021, 7:08 PM IST
ವಿಶ್ವಸಂಸ್ಥೆ: 9/11ರ ಉಗ್ರರ ದಾಳಿಯ 20 ವರ್ಷಗಳ ಬಳಿಕ, ಭಯೋತ್ಪಾದನೆಗೆ ಬೇರೆ ಬೇರೆ ವ್ಯಾಖ್ಯಾನ ನೀಡುವ ಪ್ರಯತ್ನ ನಡೆದಿದ್ದು, ಕೂಡಲೇ ಇಂಥ ಪ್ರಯತ್ನಕ್ಕೆ ಕೊನೆ ಹಾಡಬೇಕು ಎಂದು ವಿಶ್ವಸಂಸ್ಥೆಗೆ ಭಾರತ ಖಡಕ್ ಎಚ್ಚರಿಕೆ ನೀಡಿದೆ.
ಭಯೋತ್ಪಾದನೆಗೆ “ಹಿಂಸಾತ್ಮಕ ರಾಷ್ಟ್ರೀಯವಾದ’, “ಬಲಪಂಥೀಯ ಭಯೋತ್ಪಾದನೆ’ ಎಂಬಿತ್ಯಾದಿ ಪದನಾಮಗಳನ್ನು ಇತ್ತೀಚೆಗೆ ನೀಡಲಾಗುತ್ತಿದೆ. ಜಗತ್ತು ಈ ರೀತಿಯಾದ “ನಿಮ್ಮ ಭಯೋತ್ಪಾದಕರು’ ಮತ್ತು “ನಮ್ಮ ಭಯೋತ್ಪಾದಕರು’ ಎಂಬ ಯುಗದತ್ತ ಮರಳಬಾರದು. ಭಯೋತ್ಪಾದನೆ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂವಾದದ ವೇಳೆ ಅಲ್ಲಿರುವ ಭಾರತೀಯ ಕಾಯಂ ರಾಯಭಾರಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.
ಇದನ್ನೂ ಓದಿ :ಮೋದಿ ಸಂಪುಟ ಪುನರ್ ರಚನೆ : ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಮಾಣ ವಚನ ಸ್ವೀಕಾರ
ಭಯೋತ್ಪಾದನೆಯ ಅಪಾಯವು ಅತ್ಯಂತ ಗಂಭೀರ ಹಾಗೂ ಸಾರ್ವತ್ರಿಕವಾದದ್ದು. ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳ ಸಾಮೂಹಿಕ ಪ್ರಯತ್ನದಿಂದ ಮಾತ್ರವೇ ಅದನ್ನು ಸೋಲಿಸಲು ಸಾಧ್ಯ ಎಂದೂ ತಿರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.