ವರದನಾದ ವಿನೋದ್ “ರಾಬರ್ಟ್’: ಬಳಿಕ ಮತ್ತೂಂದು ಮಾಸ್ ಎಂಟ್ರಿಗೆ ರೆಡಿಯಾದ ಮರಿಟೈಗರ್
Team Udayavani, Jul 8, 2021, 9:41 AM IST
ಮರಿ ಟೈಗರ್ ಖ್ಯಾತಿಯ ನಟ ವಿನೋದ್ ಪ್ರಭಾಕರ್ ಈ ವರ್ಷದ ಆರಂಭದಲ್ಲಿಯೇ”ಶ್ಯಾಡೋ’ ಸಿನಿಮಾದ ಮೂಲಕ ರಗಡ್ ಎಂಟ್ರಿ ಕೊಟ್ಟಿದ್ದರು. “ಶ್ಯಾಡೋ’ ಕಾರಣಾಂತರಗಳಿಂದ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದರೂ, ನಂತರ ಬಂದ “ರಾಬರ್ಟ್’ ವಿನೋದ್ ಪ್ರಭಾಕರ್‌ಗೆ ಸಾಕಷ್ಟು ನೇಮ್ ಆ್ಯಂಡ್ ಫೇಮ್ ಎರಡನ್ನೂ ತಂದುಕೊಟ್ಟಿತ್ತು. ಇದರ ನಡುವೆಯೇ ವಿನೋದ್ ಪ್ರಭಾಕರ್ ಅಭಿನಯದ “ಲಂಕಾಸುರ’ ಸಿನಿಮಾ ಕೂಡ ಸೆಟ್ಟೇರಿತ್ತು. ಆದರೆ ಇದೀಗ “ಲಂಕಾಸುರ’ ಸಿನಿಮಾಕ್ಕೂ ಮೊದಲೇ ವಿನೋದ್ ಪ್ರಭಾಕರ್ ಅಭಿನಯದ ಮತ್ತೂಂದು ಸಿನಿಮಾ ತೆರೆಗೆ ಬರೋದಕ್ಕೆ ತಯಾರಾಗುತ್ತಿದೆ. ಅದರ ಹೆಸರು “ವರದ’.
ಸದ್ದಿಲ್ಲದೆ ಶುರುವಾದ “ವರದ’ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೊನೆಹಂತಕ್ಕೆ ತಲುಪಿದ್ದು, ಇದೇ ವೇಳೆ ಚಿತ್ರತಂಡ ಇಂದು”ವರದ’ ಮೋಶನ್ ಪೋಸ್ಟರ್ ಬಿಡುಗಡೆ ಮಾಡುವ ಪ್ಲಾನ್ ಹಾಕಿಕೊಂಡಿದೆ.
ಅಂದಹಾಗೆ, ಹೆಸರೇ ಹೇಳುವಂತೆ “ವರದ’ ಒಂದು ಪಕ್ಕಾ ಆ್ಯಕ್ಷನ್ ಕಥಾಹಂದರದ ಚಿತ್ರವಾಗಿದ್ದು, ಅಪ್ಪ-ಮಗನ ನಡುವೆ ಪೈಪೋಟಿ ಇರುವ ಈ ಕಥೆಯಲ್ಲಿ ವಿನೋದ್ ಪ್ರಭಾಕರ್ ಮಗನ ಪಾತ್ರದಲ್ಲಿ ಮತ್ತು ಹಿರಿಯ ನಟ ಚರಣ್ ರಾಜ್ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಅಮಿತಾ ರಂಗನಾಥ್, ಅನಿಲ್ ಸಿದ್ದು, ಅಶ್ವಿನಿ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಸಿದ್ದಾರೆ.
ಈ ಹಿಂದೆ “ಆಟೋ ರಾಜ’, “ಯೋಗಿ’, “ಕಳ್ಳ ಮಳ್ಳ ಸುಳ್ಳ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಉದಯ ಪ್ರಕಾಶ್, “ವರದ’ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದು, “ಭಜರಂಗಿ’ ಆನಂದ್ ಛಾಯಾಗ್ರಹಣವಿದೆ. ಈಗಾಗಲೇ “ವರದ’ ಟೈಟಲ್ ಮಾಸ್ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, “ವರದ’ನ ಫಸ್ಟ್ ಮೋಶನ್ ಪೋಸ್ಟರ್ ಹೇಗಿರಲಿದೆ ಅನ್ನೋದು ಇಂದು ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.