ಲೆಜೆಂಡ್ ರೋಜರ್ ಫೆಡರರ್ ಗೆ ವಿಂಬಲ್ಡನ್ ನಲ್ಲಿ ಸೋಲಿನ ಆಘಾತ
Team Udayavani, Jul 8, 2021, 7:30 AM IST
ಲಂಡನ್: ದಂತಕಥೆ ರೋಜರ್ ಫೆಡರರ್‌ಗೆ 21ನೇ ಗ್ರ್ಯಾನ್ ಸ್ಲ್ಯಾಮ್ ಗೆಲ್ಲುವ ಅವಕಾಶ ತಪ್ಪಿದೆ. ಅವರು ಕ್ವಾರ್ಟರ್ ಫೈನಲ್‌ನಲ್ಲಿ ಹ್ಯುಬರ್ಟ್ ಹರ್ಕಾಜ್ ವಿರುದ್ಧ 3-6, 6-7, 0-6ರಿಂದ ಸೋತು ಹೋಗಿದ್ದಾರೆ.
ಮಹಿಳಾ ಸಿಂಗಲ್ಸ್ ನಲ್ಲಿ ವಿಶ್ವ ನಂ.1 ಆಟಗಾರ್ತಿ ಆ್ಯಶ್ಲೆ ಬಾರ್ಟಿ ಗೆದ್ದು ವಿಂಬಲ್ಡನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅವರು ಟೊಮ್ಲಾನೊವಿಕ್ ವಿರುದ್ಧ 6-1, 6-3 ಅಂತರದಿಂದ ಗೆದ್ದರು. ಆ್ಯಶ್ಲೆ ಬಾರ್ಟಿ 2011ರಲ್ಲಿ ವಿಂಬಲ್ಡನ್ ಬಾಲಕಿಯರ ಚಾಂಪಿಯನ್ ಆಗಿದ್ದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಬೆಲರೂಸ್‌ನ ಅರಿನಾ ಸಬಲೆಂಕಾ ಮತ್ತು ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಮುಖಾಮುಖೀ ಆಗಲಿದ್ದಾರೆ.
ಜೊಕೊ ಉಪಾಂತ್ಯಕ್ಕೆ: ವಿಶ್ವ ನಂ.1 ಆಟಗಾರ ಸರ್ಬಿಯದ ನೊವಾಕ್ ಜೊಕೊವಿಚ್ ಪುರುಷರ ಸಿಂಗಲ್ಸ್ ನಲ್ಲಿ ನೇರ ಸೆಟ್‌ಗಳ ಜಯ ಸಾಧಿಸಿ ಸೆಮಿ ಫೈನಲ್‌ಗೇರಿದ್ದಾರೆ. ಅವರು ಮಾರ್ಟನ್ ಫುಕ್ಸೋವಿಕ್ಸ್ ಎದುರು 6-3,6-4,6-4ರಿಂದ ಗೆದ್ದರು.
ಸಾನಿಯಾ-ಬೋಪಣ್ಣಗೆ ಸೋಲು: ಇನ್ನು ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ ಜೋಡಿ ತೀವ್ರ ಹೋರಾಟ ನಡೆಸಿಯೂ ಸೋತುಹೋಯಿತು. ಈ ಜೋಡಿ 16ರ ಘಟ್ಟದಲ್ಲಿ 3-6, 6-3, 9-11ರಿಂದ ಆಂಡ್ರೆಜಾ ಕ್ಲೆಪಕ್-ಜಾನ್ ಜೂಲಿಯೆನ್ ರೋಜರ್ ಜೋಡಿಯೆದುರು ಸೋಲನುಭವಿಸಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.