ಖಾದ್ಯಪ್ರಿಯರ ನಂದನಾ ಪ್ಯಾಲೇಸ್ ಸೇವೆಗೆ ಸಿದ್ದತೆ
Team Udayavani, Jul 8, 2021, 6:19 PM IST
ಬೆಂಗಳೂರು: ಲಾಕ್‌ಡೌನ್ ಪರಿಣಾಮಕೇವಲ ಪಾರ್ಸಲ್‌ಗೆ ಸೀಮಿತಗೊಂಡಿದ್ದ ಆಂಧ್ರಶೈಲಿಯ ವಿವಿಧ ಖಾದ್ಯಗಳನ್ನು ಭೋಜನಾ ಪ್ರೀಯರಿಗೆ ಉಣಬಡಿಸಲು ಬೆಂಗಳೂರಿನನಂದನಾ ಪ್ಯಾಲೆಸ್ ಈಗ ಎಲ್ಲಾ ಸುರಕ್ಷತಾಕ್ರಮಗಳೊಂದಿಗೆ ಸೇವೆಗೆ ಸಿದ್ಧಗೊಂಡಿದೆ.
ಹೋಟೆಲ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ನಂದನಾ ಪ್ಯಾಲೇಸ್ ನಗರದಲ್ಲಿ 15 ಹೋಟೆಲ್‌ಗಳನ್ನುಹೊಂದಿದ್ದು, ಕೊರೊನಾ ಸೋಂಕಿನ ಪ್ರಮಾಣ ತಗ್ಗಿದ ಮೇಲೆ ಹಲವುಸುರಕ್ಷತಾ ಕ್ರಮಗಳನ್ನು ಅನುಸರಿಸುವಮೂಲಕ ಗ್ರಾಹಕರಿಗೆ ವಿಶಿಷ್ಟ ಶೈಲಿ ಆಹಾರಖಾದ್ಯಗಳನ್ನು ಬಡಿಸಲು ಆಹ್ವಾನಿಸುತ್ತಿದೆ.
ಹೋಟೆಲ್‌ಗಳಲ್ಲಿ ಶೇ.100 ಗ್ರಾಹಕರಿಗೆಅವಕಾಶವನ್ನು ನೀಡಲು ರಾಜ್ಯ ಸರ್ಕಾರಅನುಮತಿ ನೀಡಿದ್ದು, ಆ ಪ್ರಕಾರವಾಗಿಥರ್ಮಲ್ ಸ್ಕ್ಯಾನಿಂಗ್ ಮಾಡಿ, ಸ್ಯಾನಿಟೈಸರ್‌ನೀಡಿ ಗ್ರಾಹಕರನ್ನು ನಂದನಾ ಪ್ಯಾಲೇಸ್ ಬರಮಾಡಿಕೊಳ್ಳುತ್ತಿದೆ. ಇನ್ನೂ ಸಿಬ್ಬಂದಿಗೆ ಗ್ಲೌಸ್,ಮಾಸ್ಕ್, ಫೇಸ್ ಶೀಲ್ಡ್ ಅನ್ನು ಧರಿಸುವುದು ಕಡ್ಡಾಯಗೊಳಿಸಿದೆ.
ಈ ಬಗ್ಗೆ ಮಾತನಾಡಿದ ನಂದನಾ ಪ್ಯಾಲೇಸ್‌ನವ್ಯವಸ್ಥಾಪಕ ನಿರ್ದೇಶನಕ ಡಾ.ರವಿಚಂದರ್,ಬೆಂಗಳೂರು ಮತ್ತು ಚೆನ್ನೈನಲ್ಲಿರುವ ನಮ್ಮಹೋಟೆಲ್‌ನಲ್ಲಿ ಸುಮಾರು 500ಕ್ಕೂ ಹೆಚ್ಚುಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಎಲ್ಲರಿಗೂ ಕೊರೊನಾ ಲಸಿಕೆಯನ್ನು ಕೊಡಿಸಿದ್ದೇವೆ. ಅಲ್ಲದೆ ಮಾರ್ಗಸೂಚಿ ಪಾಲಿಸುತ್ತಿದ್ದೇವೆ ಎಂದರು.ನಮ್ಮ ಆಹಾರ ಪದ್ಧತಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಖಾದ್ಯಗಳನ್ನುರೂಪಿಸಲಾಗಿದೆ. ರೆಸ್ಟೋರೆಂಟ್‌ನಲ್ಲಿ ಕುಳಿತುಊಟ ಮಾಡಲು ಅವಕಾಶಕಲ್ಪಿಸಲಾಗಿದೆ.
ಎಲ್ಲಾ ಪಾರ್ಸಲ್ ಆರ್ಡರ್‌ಗಳಲ್ಲಿ ಬೆಳ್ಳುಳ್ಳಿಮತ್ತು ಕಾಳು ಮೆಣಸಿನಿಂದ ಮಾಡಿದ ರಸಂಉಚಿತವಾಗಿ ನೀಡುತ್ತಿದ್ದೇವೆ. ಹೊಸದಾಗಿಪ್ರಾನ್ಸ್ ಗೀ ರೋಸ್ಟ್, ಮಟನ್ ಪೆಪ್ಪರ್ ಡ್ರೈ,ಚಿಕನ್ ಕ್ಷತ್ರೀಯ, ಬೋನ್‌ಲೆಸ್ ಅಮರಾವತಿಚಿಕನ್ ಮತ್ತು ಬೋನ್‌ಲೆಸ್ ಚಿಕನ್‌ಬಿರಿಯಾನಿ ಸೇರಿದಂತೆ ಹಲವು ಖಾದ್ಯಗಳನ್ನುಪರಿಚಯಿಸಿದ್ದೇವೆ. ಗ್ರಾಹಕರು ಹೋಟೆಲ್‌ಗೆಆಗಮಿಸಿ ರುಚಿ ನೋಡಬಹುದು ಎಂದುರವಿಚಂದರ್ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.