ಗ್ರಾಹಕ ಸೇವೆಗಳಲ್ಲಿ ಡಿಸಿಸಿ ಬ್ಯಾಂಕ್ ದೇಶಕ್ಕೆ ಮಾದರಿ
ಸಿಬ್ಬಂದಿ ತಮ್ಮ ಸಂಸ್ಥೆಗಳಲ್ಲಿ ಉತ್ತಮ ಸೇವೆ ನೀಡುವ ಬಗ್ಗೆ ಗಮನಹರಿಸಬೇಕು.
Team Udayavani, Jul 8, 2021, 7:51 PM IST
ಬೀದರ: ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಜನಸ್ನೇಹಿ ಸೇವೆ ನೀಡುವಲ್ಲಿ ಬ್ಯಾಂಕ್‌ಗಳು ಇಂದು ವಿಭಿನ್ನವಾಗಿ ಕಾರ್ಯ ಮಾಡುತ್ತಿದ್ದು, ಗ್ರಾಮೀಣ ಭಾಗದ ಅದರಲ್ಲೂ ಕೃಷಿಕರಿಗೆ ಸೇವೆ ನೀಡುವಲ್ಲಿ ಸಹಕಾರಿ ರಂಗವೂ ಅಗ್ರಗಣ್ಯ. ಬೀದರ ಡಿಸಿಸಿ ಬ್ಯಾಂಕ್ ಇಂತಹ ಗ್ರಾಹಕ ಸೇವೆ ನೀಡುವಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲಿ ನಡೆಯುವ ಬ್ಯಾಂಕ್ ಅ ಧಿಕಾರಿಗಳ ಮೊದಲ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು. ಆದರ್ಶ ಸೇವಾ ವೈಖರಿ ಎಂದರೆ ಗ್ರಾಹಕರು ಸೇವೆಗಳಿಗಾಗಿ ಬ್ಯಾಂಕಿನವರನ್ನು ಕಾಯು ವಂತಾಗಬಾರದು, ಬ್ಯಾಂಕ್‌ನವರೇ ಗ್ರಾಹಕರಿಗಾಗಿ ಕಾಯುತ್ತಿರಬೇಕು.
ಹೀಗಾದಾಗ ನಮ್ಮ ಸೇವೆಗಳು ಪರಿಣಾಮಕಾರಿ ಯಾಗಿದೆ ಎನ್ನಬಹುದು. ಸಹಕಾರಿ ರಂಗವು ತನ್ನ ಸದಸ್ಯರಿಗಾಗಿ ಆರ್ಥಿಕ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಕಂಪ್ಯೂಟರ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಆಧುನಿಕತೆಗೆ ತೆರೆದುಕೊಳ್ಳುತ್ತಿದೆ ಎಂದರು.
ಬೀದರ ಡಿಸಿಸಿ ಬ್ಯಾಂಕ್ ಜನಪರ ಸೇವೆಗೆ ಹೆಸರುವಾಸಿಯಾಗಿದ್ದು, 2 ಸಾವಿರ ಕೋಟಿ ಠೇವಣಿ ಹೊಂದಿ ಜಿಲ್ಲೆಯ ಜನತೆ ವಿಶ್ವಾಸಕ್ಕೆ ಪಾತ್ರವಾಗಿದೆ. ಬ್ಯಾಂಕ್ ರೈತರಿಗೆ, ಯುವಜನತೆಗೆ, ಮಹಿಳೆಯರಿಗಾಗಿ ವೈವಿಧ್ಯಮಯ ಸೇವೆಗಳನ್ನು ನೀಡುತ್ತಿದ್ದು ಕೇವಲ ಸಾಲ ನೀಡುವುದಲ್ಲದೇ ತರಬೇತಿ ನೀಡುತ್ತಿದೆ, ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೀವ್ರವಾದ ಬದಲಾವಣೆಗಳಾಗುತ್ತಿದ್ದು, ಸಿಬ್ಬಂದಿ ತನ್ನ ಕೆಲಸದಲ್ಲಿ ಹೆಚ್ಚು ಕಾರ್ಯಶೀಲವಾಗಬೇಕಿದೆ ಎಂದು ಸಲಹೆ ನೀಡಿದರು.
ಬ್ಯಾಂಕುಗಳು ಕೇವಲ ಸಾಲ ನೀಡುವುದಲ್ಲದೇ ವಸೂಲಾತಿ ಕೈಗೊಳ್ಳಬೇಕಾಗಿದೆ. ಬ್ಯಾಂಕ್ ಸಿಬ್ಬಂದಿ ಸಂಸ್ಥೆಯ ಲಾಭದಾಯಕತೆ ಆಧಾರದ ಮೇಲೆ ವೇತನ ಸೌಲಭ್ಯ ಪಡೆದುಕೊಳ್ಳುವುದರಿಂದ ಸಂಸ್ಥೆ ಚೆನ್ನಾಗಿ ನಡೆಯುವಂತಹ ವಾತಾವರಣ ನಿರ್ಮಿಸುವ ಜವಾಬ್ದಾರಿಯೂ ಹೊಂದಿರುತ್ತಾರೆ. ಪ್ರಾಮಾಣಿಕತೆ, ಕಳಕಳಿ ಮತ್ತು ಗ್ರಾಹಕರಿಗೆ ಸೂಕ್ತವಾದ ಸೇವೆ ನೀಡುವ ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತವೆ. ಆದುದರಿಂದ
ಸಹಕಾರಿ ರಂಗದ ಸಿಬ್ಬಂದಿ ತಮ್ಮ ಸಂಸ್ಥೆಗಳಲ್ಲಿ ಉತ್ತಮ ಸೇವೆ ನೀಡುವ ಬಗ್ಗೆ ಗಮನಹರಿಸಬೇಕು. ಮನಸ್ಸಿಟ್ಟು ದುಡಿಯಬೇಕು, ಸಂಸ್ಥೆಗಳ ಅಭಿವೃದ್ಧಿಗೆ ಕಾರಣವಾಗಬೇಕು ಎಂದರು.
ಸಹಕಾರಿ ರಂಗದಲ್ಲಿ ಬೀದರ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಅತ್ಯುತ್ತಮ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿದೆ. ಜಿಲ್ಲೆಯ 3.25 ಲಕ್ಷ ರೈತರಿಗೆ ಮತ್ತು 4.17 ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಪ್ರತಿ ಕುಟುಂಬ ತಲುಪಿದೆ. ಜನರ ಆರ್ಥಿಕ ಪ್ರಗತಿಯಲ್ಲಿ ಪಾಲುದಾರನಾಗಿದೆ. ಬ್ಯಾಂಕು ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸುವುವ ಮೂಲಕ ಮಾದರಿಯಾಗಬೇಕು ಎಂದು ಹೇಳಿದರು. ಪ್ರಧಾನ ವ್ಯವಸ್ಥಾಪಕ ಚನಬಸಯ್ಯ ಸ್ವಾಮಿ
ಪ್ರಾಸ್ತಾವಿಕ ಮಾತನಾಡಿದರು. ಸಿಇಒ ಮಲ್ಲಿಕಾರ್ಜುನ ಮಹಾಜನ, ಪ್ರಧಾನ ವ್ಯವಸ್ಥಾಪಕ ವಿಠಲರೆಡ್ಡಿ ಯಡಮಲ್ಲೆ ಬ್ಯಾಂಕಿನ ಪ್ರಗತಿ ವರದಿ ನೀಡಿದರು.
ಈ ವೇಳೆ ಉಪ ಪ್ರಧಾನ ವ್ಯವಸ್ಥಾಪಕರಾದ ರಾಜಕುಮಾರ ಅಣದೂರೆ ಮತ್ತು ಅನಿಲ ಪಾಟೀಲ, ಕೆಜಿಬಿ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ಮಂಜುನಾಥ ಭಾಗವತ್ ಸಂಪನ್ಮೂಲ ವ್ಯಕ್ತಿಗಳಾಗಿ ಇದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನೀಲ ಪಿ. ಮತ್ತು ಮಹಾಲಿಂಗ ನಿರೂಪಿಸಿದರು. ಎಸ್.ಜಿ. ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.