ಅರಣ್ಯ ಸಚಿವರಿಗೆ ಒತ್ತಡ ಯತ್ನ; ಸಮಸ್ಯೆ ಇತ್ಯರ್ಥ ನಿರೀಕ್ಷೆ!
Team Udayavani, Jul 9, 2021, 5:40 AM IST
ಕಾರ್ಕಳ: ರಾಜ್ಯದ ಲಕ್ಷಾಂತರ ಹೆಕ್ಟೇರ್ ಕಂದಾಯ ಭೂಮಿ ಅರಣ್ಯ ಇಲಾಖೆಯ “ಡೀಮx… ಫಾರೆಸ್ಟ್’ ಸುಳಿಯಲ್ಲಿ ಬಂಧಿಯಾಗಿದೆ.
ಇದರಿಂದಾಗಿ ಅನೇಕ ವರ್ಷಗಳಿಂದ ಕೃಷಿಯನ್ನೇ ಜೀವನಾಧಾರವನ್ನಾಗಿಸಿ ಕೊಂಡಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಮುಖವಾಗಿ ಮಲೆನಾಡು ಪ್ರದೇಶದಲ್ಲಿ ಅನೇಕ ಹಳ್ಳಿಗಳೇ ಡೀಮx… ಪ್ರದೇಶದಲ್ಲಿ ಗುರುತಿಸಿಕೊಂಡಿರುವ ಕಾರಣ ಅರಣ್ಯ ಹಾಗೂ ಕಂದಾಯ ಇಲಾಖೆ ಹಗ್ಗ ಜಗ್ಗಾಟದಲ್ಲಿ ಸಿಲುಕಿ ಸಾಗುವಳಿದಾರರು ನಲುಗುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ಪ್ರದೇಶವನ್ನು 2 ವಿಭಾಗಗಳಲ್ಲಿ ಗುರುತಿಸಲಾಗಿದ್ದು, ಮೊದಲ ವಿಭಾಗದಲ್ಲಿ 35 ಸಾವಿರ ಹೆಕ್ಟೇರ್, ಎರಡನೇ ವಿಭಾಗದಲ್ಲಿ 11 ಸಾವಿರ ಹೆಕ್ಟೇರ್ ಎಂದು ವಿಭಜಿಸಿದ್ದು 25 ಹೆಕ್ಟೇರ್ ಕುಮ್ಕಿ ಭೂಮಿ ಎಂದು ಗುರುತಿಸಲಾಗಿದೆ. 25 ಸಾವಿರ ಹೆಕ್ಟೇರ್ ಕುಮ್ಕಿ ಭೂಮಿ ಕಂದಾಯ ಇಲಾಖೆ ನಿಯಂತ್ರಣದಲ್ಲಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿರುವ ಹಲವು ಕುಟುಂಬಗಳಿಗೆ ಡೀಮx… ಫಾರೆಸ್ಟ್ ಎನ್ನುವ ಕಾರಣಕ್ಕೆ ವಾಸವಿದ್ದ ಜಾಗಕ್ಕೆ ದಾಖಲೆ ನೀಡಲು ಸಾಧ್ಯವಾಗದೆ ಅವುಗಳು ಮೂಲಸೌಕರ್ಯದಿಂದ ವಂಚಿತರಾಗಿವೆ.
ಬೆಟ್ಟು , ಬಾಣೆ, ಜಮ್ಮಾ, ಪೈಸಾರಿ, ಕಾನ, ಕುಮ್ಕಿ, ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಪೂರಕವಲ್ಲದ, ನೀರಾವರಿ ಪ್ರದೇಶವಲ್ಲದ ಆಯ್ದ ಭೂಮಿಯನ್ನೂ ಡೀಮ್ಢ್ ವ್ಯಾಪ್ತಿ ಯಲ್ಲಿ ಗುರುತಿಸಿರುವುದು ಸಮಸ್ಯೆಗೆ ಕಾರಣವಾಗಿದೆ.
ಹೀಗಾಗಿ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಲಕ್ಷಾಂತರ ಸಾಗುವಳಿದಾರರು ಅಕ್ರಮ- ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ ಮಂಜೂರಾತಿಗೆ ಮನವಿ ಸಲ್ಲಿಸಿ ಕಾಯುತ್ತಿದ್ದಾರೆ. ಆದರೆ “ಸಿ’ ಮತ್ತು “ಡಿ’ ಭೂಮಿ ಕುರಿತ ಅಸ್ಪಷ್ಟತೆಯನ್ನೇ ಮುಂದಿಟ್ಟುಕೊಂಡು ಭೂಮಿ ಮಂಜೂರು ಮಾಡಲಾಗುತ್ತಿಲ್ಲ. ಇನ್ನೊಂದೆಡೆ ಭೂಮಿ ಗುರುತಿಸಲು ಕಂದಾಯ, ಅರಣ್ಯ ಇಲಾಖೆ ನಡೆಸಬೇಕಿರುವ ಜಂಟಿ ಸರ್ವೇ ಕಾರ್ಯ ಕೂಡ ಸಮರ್ಪಕವಾಗಿಲ್ಲದೆ ತೊಂದರೆಯಾಗಿದೆ.
ಯಾಕೆ ಸಮಸ್ಯೆ?:
ರಾಜ್ಯದಲ್ಲಿ ನಿಗದಿತ ಪ್ರಮಾಣದ ಅರಣ್ಯವಿರಬೇಕು ಎಂದು 1982ರಲ್ಲಿ ಕಂದಾಯ ಇಲಾಖೆಯ ಅಧೀನದಲ್ಲಿದ್ದ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಲಾಯಿತು. ಇದರ ಆಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಆರಂಭಿಸಿದರು.
ಇದು ರಾಜ್ಯವ್ಯಾಪಿ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲು ಸರಕಾರ ಈ ಹಿಂದೆ ನಿರ್ಧರಿಸಿತ್ತು.
ಹಲವು ವರ್ಷಗಳಿಂದ ಡೀಮ್ಡ್ ಫಾರೆಸ್ಟ್ ಮತ್ತು ಕಂದಾಯ ಜಮೀನಿನ ಕುರಿತು ತಕರಾರು ಇದೆ. ಇದನ್ನು ಬಗೆಹರಿಸುವ ಪ್ರಯತ್ನ ಕಂದಾಯ ಅಶೋಕ್ ಅವರ ನೇತೃತ್ವದಲ್ಲಿ ಈ ಹಿಂದೆ ಸಭೆ ನಡೆದಿತ್ತು. 9.94 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶದಲ್ಲಿ 6.64 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಹಾಗೂ 3.3 ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡುವ ಬಗ್ಗೆ ಈ ಹಿಂದೆ ಅರಣ್ಯ ಸಚಿವರಾಗಿದ್ದ ಆನಂದ್ ಸಿಂಗ್, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಅಧಿಕಾರಿಗಳ ಸಭೆ ಯಲ್ಲಿ ನಿರ್ಧರಿಸಲಾಗಿತ್ತು.
3.30 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿಕೊಂಡು ಕೃಷಿ ನಡೆಸುತ್ತಿದ್ದರೆ ಅವರಿಗೆ ಇದರಿಂದ ಅನುಕೂಲವಾಗಲಿದೆ. ಅರಣ್ಯ ಇಲಾಖೆ ಅರುವತ್ತಕ್ಕೂ ಅಧಿಕ ವರ್ಷಗಳಿಂದ 9.50 ಲಕ್ಷ ಹೆಕ್ಟೇರ್ ಭೂಮಿ ಬಗ್ಗೆ ತಕರಾರಿದೆ. ಅದನ್ನು ಬದಲಾವಣೆ ಮಾಡದೆ ಎಜಿಯವರ ಸಲಹೆ ಪಡೆದು ಸುಪ್ರೀಂ ಕೋರ್ಟ್‌ನಲ್ಲಿ ಅಫಿದಾವಿತ್ ಹಾಕಲು ನಿರ್ಧರಿಸಲಾಗಿತ್ತು. ಅದರ ಪ್ರಕ್ರಿಯೆಗೆ ಮತ್ತಷ್ಟು ಚುರುಕು ಸರಕಾರಿ ಮಟ್ಟದಲ್ಲಿ ನಡೆಯಬೇಕಿದೆ. ಇದು ಇತ್ಯರ್ಥವಾದಲ್ಲಿ ಬಾಕಿಯಾಗಿರುವ ಲಕ್ಷಾಂತರ ಅರ್ಜಿಗಳು ವಿಲೇವಾರಿಯಾಗಿ ಜ್ವಲಂತ ಸಮಸ್ಯೆ ನಿವಾರಣೆಯಾಗಲಿದೆ.
ಡೀಮ್ಡ್ ಫಾರೆಸ್ಟ್ ಸಮಸ್ಯೆ ಇತ್ಯರ್ಥ ವಾಗಬೇಕಿದೆ. ಇದರಿಂದ ಕೃಷಿಕರಿಗೆ ಹಾಗೂ ಅರಣ್ಯದಂಚಿನಲ್ಲಿ ಅನೇಕ ವರ್ಷಗಳಿಂದ ವಾಸವಿರುವ ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಸಮಸ್ಯೆಯಾಗುತ್ತಿದೆ.
ಶಾಸಕ ವಿ. ಸುನಿಲ್ ಕುಮಾರ್ ಇತ್ತೀಚೆಗಷ್ಟೆ ಅರಣ್ಯ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಪ್ರಕ್ರಿಯೆ ಚುರುಕುಗೊಳಿಸಿ ಶೀಘ್ರ ಇತ್ಯರ್ಥ ಪಡಿಸುವಂತೆ ಒತ್ತಡ ತಂದಿದ್ದರು. ಅದರಂತೆ ಅರಣ್ಯ ಸಚಿವರು ಜು. 10, 11ರಂದು ಜಿಲ್ಲಾ ಪ್ರವಾಸ ನಡೆಸುತ್ತಿದ್ದು, ಅರಣ್ಯ ಸಚಿವರ ಜತೆ ಪ್ರಮುಖರ ಸಂವಾದವನ್ನು ಜು. 11 ರಂದು ಡೀಮ್ಡ್ ಸಮಸ್ಯೆ ಇರುವ ತಳ ಮಟ್ಟದ ಕಾರ್ಕಳ ವ್ಯಾಪ್ತಿಯಲ್ಲಿ ನಡೆಸಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.